ಶಬ್ದ-ಸುಪಾರಿ

...ಯಾವ ದೇಶ, ಕಾಲದ ಕವಿತೆಯು ಕೂಡ ಸಂವಹನ ಆಗೋದು, ತೀರಾ ನಿಧಾನವಾಗಿ. ಪ್ರತಿಯೊಂದು ಕವಿತೆ ಒಂದು ರಕ್ತದ ಬಾಟಲ್. ಅದನ್ನು ಕವಿಯೇ ತನ್ನದೇ ಭಾಷಿಕ ಸೂಜಿ, ನಳಿಕೆಗಳ ಮೂಲಕ ನಿಧಾನವಾಗಿ ತನ್ನ ಕವಿತೆಯಲ್ಲಿ ಸಂಗ್ರಹಿಸುತ್ತಾನೆ. ನಂತರ ಅದನ್ನು ಓದುಗ ತನ್ನ ರಕ್ತಕ್ಕೆ ಸೇರಿಸಿಕೊಳ್ಳಬೇಕು ಎನಿಸಿದರೆ ಆತನೂ ಅದನ್ನು ತನ್ನದೇ ಆದ ಸೂಜಿ, ನಳಿಕೆಗಳ ಮೂಲಕವೇ ಅಷ್ಟೇ ನಿಧಾನವಾಗಿ, ಹನಿ ಹನಿಯಾಗಿ ಒಳಗೆ ಬಿಟ್ಟುಕೊಳ್ಳಬೇಕಾಗುತ್ತದೆ. ಏನಿದ್ದರೂ ಚುಚ್ಚುವ ಸೂಜಿ ಒಳಸೇರಿಸುವ ನಳಿಕೆ, ಇವುಗಳ ಋಣಾನುಬಂಧ ಕಾರಯಿತ್ರೀಗೂ ತಪ್ಪಿದ್ದಲ್ಲ, ಭಾವಯಿತ್ರಿಗೂ ತಪ್ಪಿದ್ದಲ್ಲ. ಇಷ್ಟಕ್ಕೂ ಎಲ್ಲರ ರಕ್ತ ಎಲ್ಲರಿಗೂ ಹೊಂದುವುದಿಲ್ಲ ಅನ್ನೋ ತಾತ್ವಿಕ ಸತ್ಯವನ್ನಂತು ನಾವು ಗಮನಿಸಲೇಬೇಕಾಗುತ್ತದೆ. ನನ್ನ ಮೈಯಲ್ಲಿ ಹರಿಯುವ ರಕ್ತ ನನ್ನದಷ್ಟೇ ಅಲ್ಲ ಅನ್ನೋ ಅರಿವು, ಕಾವ್ಯ ಚರಿತ್ರೆಯ ಸಂಕರಗಳ ಸಂಕಥನಗಳ ಸಂಕಟಗಳಲ್ಲಿಯೆ ನಿಯತವಾಗಿದೆ...

(ಲೇಖಕರ ಸಂದರ್ಶನದಿಂದ ಆಯ್ದ ಮಾತುಗಳು)

ಹಿಂದು ಧರ್ಮ: ಹಿಂದು-ಇಂದು

ಈ ಕೈಪಿಡಿ ಗಾಂಧೀಜಿ ಮುಂತಾದ ಆಧುನಿಕ ನೇತಾರರ ಉದಾರ ದೃಷ್ಟಿಕೋನದಿಂದ ಹಿಂದುಧರ್ಮವನ್ನು ಪರಿಚಯಿಸುತ್ತದೆ. ಹಿಂದುಧರ್ಮ ಅನೇಕ ತಪ್ಪು ಕಲ್ಪನೆಗಳಿಗೆ ಬಲಿಯಾಗಿದೆ. ಹೀಗಾಗಿ ಯಾವುದು ಹಿಂದುಧರ್ಮ, ಯಾವುದು ಅಲ್ಲ ಎಂಬುದನ್ನು ಈ ಪುಸ್ತಕದ ಮೊದಲನೆಯ ಭಾಗ ತಿಳಿಸುತ್ತದೆ. ಹಿಂದುಧರ್ಮ ಬ್ರಾಹ್ಮಣರು ರಚಿಸಿದ್ದುದು; ಮಡಿ-ಮೈಲಿಗೆ, ಅಸ್ಪೃಶ್ಯತೆ ಮತ್ತು ಜಾತಿಪದ್ಧತಿಗಳು ಅದರ ಜೀವಾಳ - ಇಂತಹ ಭ್ರಮೆಗಳ ನಿರಸನವನ್ನು ಮಾಡುವದರ ಜೊತೆಗೆ, ಈ ಧರ್ಮದ ನೈಜ ಅಂಶಗಳಾದ ಪರತತ್ವ ವಿಚಾರ, ನೀತಿ ಅಥವಾ ಚಾರಿತ್ರ್ಯ ಬೋಧನೆ, ಮತ್ತು ಸಾಧನೆಯ ಮಾರ್ಗಗಳನ್ನು ಮೊದಲ ಭಾಗ ವಿವರಿಸುತ್ತದೆ. ಎರಡನೆಯ ಭಾಗವು ಪ್ರಾಚೀನ ಕಾಲದಿಂದ ಇಂದಿನವರೆಗೆ ಹಿಂದು ಧರ್ಮ ನಡೆದುಬಂದ ರೀತಿಯನ್ನು ವರ್ಣಿಸುತ್ತದೆ. ...

ಆಳವಾದ ಸಂಶೋಧನೆಯ ಮೇಲೆ ಆಧರಿಸಲ್ಪಟ್ಟಿದ್ದು, ಅನೇಕ ಒಳನೋಟಗಳು, ಶ್ಲೋಕಗಳು, ಹಾಡುಗಳು, ಐತಿಹ್ಯಗಳು ಈ ಕೈಪಿಡಿಯ ಮನೋರಂಜಕತೆಯನ್ನು ಹೆಚ್ಚಿಸುತ್ತವೆ.

Newest  Books

Latest Reprints

Novels

Stories

Drama

Poetry