ಇದೆ ಎಂದರೆ ಇದೆ ಇಲ್ಲ ಎಂದರೆ ಇಲ್ಲ
ಸಮುದ್ಯತಾ ವೆಂಕಟರಾಮು
ಸಮುದ್ಯತಾ ಅವರ ಮೊದಲ ಕಾದಂಬರಿ ‘ಇದೆ ಎಂದರೆ ಇದೆ ಇಲ್ಲ ಎಂದರೆ ಇಲ್ಲ’ ಹಳ್ಳಿಯ ಮಧ್ಯಮ ವರ್ಗದ ಕುಟುಂಬವೊಂದರ ಸ್ತ್ರೀಯರ ಬಹುಸ್ತರೀಯ ಸಂಕಟವನ್ನು ಮುಖ್ಯವಾಗಿ ಕೇಂದ್ರೀಕರಿಸಿ ನಿರೂಪಿಸುತ್ತದೆ. ಮನೆತನದ ಬದುಕಿನ ಏಳು ಬೀಳಿನ ಗತಿಬಿಂಬ ನಾಲ್ಕು ತಲೆಮಾರುಗಳನ್ನು ಹಾದು ಸುಮಾರು ಒಂದು ಶತಮಾನವನ್ನು ವ್ಯಾಪಿಸುತ್ತದೆ… ಕುಟುಂಬದ ದೈನಿಕ ಅನುಭವದ ವಾಸ್ತವಿಕ ವಿವರಗಳನ್ನು ನೇಯುವ ಈ ಕೃತಿಯನ್ನು ಹವ್ಯಕ ಸಮುದಾಯದ ಸಾಂಸ್ಕೃತಿಕ ದಾಖಲೆಯಾಗಿ ಓದಬಹುದಾಗಿದೆ… ಕಷ್ಟಗಳು ಯಾವ ರೂಪ ಮತ್ತು ಮೂಲದಿಂದ ಬಂದರೂ ಅವುಗಳನ್ನು ಅನುಭವಿಸುವವಳು ಹೆಣ್ಣು ಎಂಬ ಆಶಯ ಕಾದಂಬರಿಯುದ್ದಕ್ಕೂ ಪುನರಾವರ್ತನೆಯಾಗುತ್ತದೆ… ಸಂಸಾರ ಸುಸೂತ್ರ ಸಾಗದಿರುವುದಕ್ಕೆ ಕಾದಂಬರಿ ಸೂಚಿಸುವ ಮೂಲ ಕಾರಣವಾದರೂ ಯಾವುದು? ಮುಳುಗಡೆಯಂಥ ಪ್ರಾಕೃತಿಕ ವಿಪತ್ತೆ? ಮನುಷ್ಯ ಮಾಡುವ ಆಯ್ಕೆಗಳೆ? ಕಂದಾಚಾರಗಳೆ? ಗುಟ್ಟು ಬಿಟ್ಟು ಕೊಡದ ಕಾಲವೆ? ಕೈಮೀರಿದ ಅಸಹಾಯಕತೆಗೆ ಇನ್ನೊಂದು ಹೆಸರಾದ ಕೈಕೊಟ್ಟ ದೈವವೆ? ದುರ್ಬಲ ಪುರುಷರೆ? ಇಂಥ ತಾತ್ವಿಕ ಪ್ರಶ್ನೆಗಳಿಗೆ ಉತ್ತರಿಸುವ ಆಸಕ್ತಿಯನ್ನು ಕಾದಂಬರಿ ಓದುಗರಿಗೆ ಬಿಡುತ್ತದೆ.
ಶ್ರೀಧರ ಬಳಗಾರ
ರಿಯಾಯ್ತಿ ಬೆಲೆ ರೂ 180/-
ವೈದೇಹಿ ಕಥೆಗಳು ೧೯೭೯-೨೦೨೧
ವೈದೇಹಿಯವರು ಕಾವ್ಯ, ನಾಟಕ, ಕಾದಂಬರಿ, ಪ್ರಬಂಧ ಮೊದಲಾದ ಹಲವು ಪ್ರಕಾರಗಳಲ್ಲಿ ಬರೆದಿದ್ದಾರಾದರೂ ಅವರ ಬರಹದ ಬದುಕಿನ ಉದ್ದಕ್ಕೂ ಬಹು ಸಂಖ್ಯೆಯಲ್ಲಿ ಪ್ರಕಟವಾಗಿರುವುದು ಕಥೆಗಳು. ೧೯೭೯ರಲ್ಲಿ ಅವರ ಮೊದಲ ಕಥಾಸಂಕಲನ `ಮರ ಗಿಡ ಬಳ್ಳಿ’ ಪ್ರಕಟವಾಗಿದ್ದು ೨೦೨೧ರವರೆಗೆ ಎಂಟು ಕಥಾಸಂಕಲನಗಳು ಮತ್ತು ಒಂದು ಬಿಡಿ ಕಥೆ ಸೇರಿ ಅವರು ಒಟ್ಟು ನೂರಾ ಒಂಭತ್ತು ಕಥೆಗಳನ್ನು ಪ್ರಕಟಿಸಿದ್ದಾರೆ. ಸಾಹಿತ್ಯದ ವಿದ್ಯಾರ್ಥಿಗಳು, ಓದುಗರು ಮತ್ತು ಅಭ್ಯಾಸಕರ ಅನುಕೂಲಕ್ಕಾಗಿ ಪ್ರಸ್ತುತ ಸಂಗ್ರಹವು ಅವರ ಈವರೆಗಿನ ಎಲ್ಲ ಕತೆಗಳನ್ನು ಒಟ್ಟಾಗಿ ಹೊರತರುತ್ತಿದೆ.
ಬೆಲೆ ರೂ 1600/-
ಕತೆ ಕತೆ ಕಾರಣ
ವೈದೇಹಿ
ವೈದೇಹಿಯವರ ಸ್ತ್ರೀಸಂವೇದನಾಶೀಲತೆ, ಕೇವಲ ಸ್ತ್ರೀಯರ ಬದುಕನ್ನಷ್ಟೇ ಕುರಿತದ್ದಲ್ಲ. ಮನುಷ್ಯರೆಲ್ಲರನ್ನೂ ಕುರಿತದ್ದು. ಅವರು ಕೆಳಸ್ತರಗಳ ಹೆಂಗಸರ ಬಗ್ಗೆ ಏನನ್ನೂ ಬರೆಯಲಿಲ್ಲ ಎಂದು ಕೆಲವರ ಆಕ್ಷೇಪ ಎಂದಿನಿಂದಲೂ ಇದೆ. ‘ಬಾಕಿ ಇತಿಹಾಸ’ ಹಾಗೂ ಮಂಜಮ್ಮಜ್ಜಿಯ ಕಥೆಗಳನ್ನು ಓದಿದ ಮೇಲೆ ಆ ಸ್ತ್ರೀಯರ ಜೀವನದ ಸ್ತರ ಯಾವುದೆನ್ನಬಹುದು? ಎಲ್ಲ ಬಗೆಯ ಸೈದ್ಧಾಂತಿಕ ಓದುಗಾರಿಕೆಯಿಂದ ಹುಟ್ಟಿದಂಥ ಪ್ರಶ್ನೆಗಳಿಗೆ ಉತ್ತರ ಹೇಳಲು ಯತ್ನಿಸುವುದು ವೈದೇಹಿಯವರ ವಿಧಾನವಲ್ಲ. ಏನನ್ನೇ ಉತ್ತರಿಸುವುದಕ್ಕೂ ಸೃಜನಶೀಲವೂ, ಕಲಾತ್ಮಕವೂ ಆದ ಕತೆಗಾರಿಕೆಯಲ್ಲೇ ಅವರು ಯತ್ನಿಸುತ್ತಾ ಬಂದಿದ್ದಾರೆ. ‘ಕತೆ ಕತೆ ಕಾರಣ’ದ ಕಥೆಗಳು ಅವರ ಅಭಿವ್ಯಕ್ತಿಯ ಹಾದಿಯಲ್ಲಿ ಹೇಗೋ ಹಾಗೆ ಕನ್ನಡದ ಕಥನಸಾಹಿತ್ಯದ ಹಾದಿಯಲ್ಲೂ ಒಂದು ಮೈಲಿಗಲ್ಲಾಗಿವೆ ಎಂಬುದು ನನ್ನ ನಂಬಿಕೆ. ಅದು ಎಲ್ಲ ಕನ್ನಡಿಗರದೂ ಆಗಲಿ.
– ಬಿ. ಎನ್. ಸುಮಿತ್ರಾಬಾಯಿ
‘ಒಂದು ಸೇಬಿನ ಮರದಲ್ಲಿರುವ ಹಣ್ಣುಗಳನ್ನು ಎಣಿಸಬಹುದು.ಆದರೆ ಸೇಬಿನ ಹಣ್ಣಿನ ಒಳಗೆ ಇರುವ ಮರಗಳನ್ನು ಎಣಿಸುವುದು ಮಾತ್ರ ಅಸಾಧ್ಯ’ ಎಂದು ಒಂದು ಚೀನೀಗಾದೆ. ಈ ಗಾದೆಯನ್ನು ವೈದೇಹಿಯವರ ಇತ್ತೀಚೆಗಿನ ಕತೆಗಳ ಸಂಕಲನ, ‘ಕತೆ ಕತೆ ಕಾರಣ’ಕ್ಕೂ ಅನ್ವಯಿಸಿ, ಇದರಲ್ಲಿ ೧೨ ಕತೆಗಳಿವೆ ಎಂದು ಹೇಳಬಹುದು; ಆದರೆ ಈ ಕತೆಗಳು ಇನ್ನೆಷ್ಟು ಕತೆಗಳನ್ನು ತಮ್ಮೊಳಗೆ ಇರಿಸಿಕೊಂಡಿವೆ ಎಂಬ ವಿಸ್ಮಯ ಈ ಕತೆಗಳನ್ನು ಓದಿದ ನಂತರ ನಮ್ಮಲ್ಲಿ ಉಳಿದೇ ಬಿಡುತ್ತದೆ. ಸಂಕಲನದ ಕತೆಗಳು ನೀಡುವ ಒಳ ನೋಟದ ಮುಖಾಂತರ ಓದುಗ ಆ ಕತೆಗಳನ್ನು ತಾನೇ ಕಲ್ಪಿಸಿಕೊಳ್ಳಬಲ್ಲ.
– ಜಿ.ರಾಜಶೇಖರ
ಬೆಲೆ ರೂ 230/-
ಊರು ಭಂಗ
ವಿವೇಕ ಶಾನಭಾಗ
`ಅರ್ಥದ ಗೊಡವೆಯೂ ಬೇಡ, ಎಲ್ಲವನ್ನೂ ಒಂದು ಸೂತ್ರಕ್ಕೆ ಕಟ್ಟುವ ಹಟವೂ ಬೇಡ. ಒಂದಕ್ಕೊಂದು ಸಂಬಂಧ ಕಲ್ಪಿಸಿ ನಾವು ನಂಬಿದ ಅರ್ಥ ಹೊರಡಿಸುವುದರಲ್ಲೊಂದು ಬಗೆಯ ಅನ್ಯಾಯವಿದೆ. ಹಿಂಸೆಯಿದೆ.’
`ಅವಳ ಬೆನ್ನನ್ನು ಸವರಲೆಂದು ಎತ್ತಿದ ಕೈಯನ್ನು ಹಾಗೆ ಅಲ್ಲಿಯೇ ಇರಗೊಟ್ಟರು. ತಾನು ಜೊತೆಗಿದ್ದೇನೆನ್ನುವುದು ಹೇಳದೆಯೂ ಅವಳಿಗೆ ತಿಳಿಯಲಿ ದೇವರೇ ಎಂದು ಒಳಗೇ ಬೇಡಿಕೊಂಡರು. ಒಂದು ದಾಂಪತ್ಯದಲ್ಲಿ ಬಾಯಿಬಿಟ್ಟು ಹೇಳದೆಯೂ ಪರಸ್ಪರ ಜೀವಕ್ಕೆ ಅರಿವಾಗುವ ಎಷ್ಟೊಂದು ಸಂಗತಿಗಳಿರುತ್ತಾವಲ್ಲ ಎಂಬುದು ಅವರಿಗೆ ಆಗ ಮೊದಲ ಬಾರಿಗೆ ಹೊಳೆಯಿತು.’
ಬೆಲೆ ರೂ 350/-
ಘಾಚರ್ ಘೋಚರ್
ವಿವೇಕ ಶಾನಭಾಗ
ಆಧುನಿಕ ಬೆಂಗಳೂರು ನಗರದ ಜೀವನವನ್ನು ಎತ್ತಿಕೊಂಡು ಇಷ್ಟೊಂದು ಸಂವೇದನಾಶೀಲವಾಗಿ, ಸೂಕ್ಷ್ಮವಾಗಿ, ಹೃದಯಂಗಮವಾಗಿ ವಿವೇಚಿಸುವ ಇನ್ನೊಂದು ಕಾದಂಬರಿ ನಮ್ಮಲ್ಲಿ ಬಂದಿಲ್ಲ.
ಗಿರೀಶ ಕಾರ್ನಾಡ
A great Indian novel.
The New York Times
Vivek Shanbhag is an Indian Chekhov.
Suketu Mehta, author of Maximum City
ಬೆಲೆ ರೂ 150/-
ಕರುನಾಡು
ಮನು ವಿ. ದೇವದೇವನ್
ಕರ್ನಾಟಕದ ಇತಿಹಾಸ ಕುರಿತ ಈ ಲೇಖನ ಸಂಗ್ರಹದೊಳಗೆ ಐದು ವಿಭಿನ್ನ ಬರಹಗಳಿವೆ. ಮೊದಲನೆಯದು ಪಂಪ ಮತ್ತು ವಚನಗಳ ನಡುವಿನ ಕಾಲಧರ್ಮದ ಮತ್ತು ಕಾವ್ಯಧರ್ಮದ ವೈಷಮ್ಯಗಳನ್ನು ಕುರಿತ ತಾತ್ವಿಕ ಜಿಜ್ಞಾಸೆ. ಇದು ಕನ್ನಡ ಸಾಹಿತ್ಯದ ಚರ್ಚೆಗೊಂದು ಹೊಸ ಸೇರ್ಪಡೆ. ಎರಡನೆಯ ಲೇಖನವು, ಈಗಿನ ಅಭಿಪ್ರಾಯಗಳು ಸೂಚಿಸುವಂತೆ, ವಚನ ಸಾಹಿತ್ಯವು ನಿಜವಾಗಿಯೂ ಛಂದಸ್ಸಿನಿಂದ ಮುಕ್ತವಾದ ರಚನೆಗಳು ಎಂಬ ಸ್ಥಾಪಿತ ನಂಬಿಕೆಯನ್ನು ಸಾಧಾರವಾಗಿ ಪ್ರಶ್ನಿಸುವಂಥದು. ಮೂರನೆಯ ಲೇಖನ ಕರ್ನಾಟಕದ ಇತಿಹಾಸದೊಳಗೆ ಧಾರ್ಮಿಕ ಸಂರಚನೆಗಳೂ ದೇವಾಲಯಗಳೂ ಬೆಳೆದುಬಂದ ಕಾಲವನ್ನು ಕುರಿತದ್ದಾಗಿದ್ದರೆ, ನಾಲ್ಕನೆಯ ಲೇಖನ ಇನ್ನೂ ಪ್ರಾಚೀನ ಕಾಲಕ್ಕೆ ಹೋಗಿ ಆಗಿನ ನೀರಾವರಿ ಮತ್ತು ಭೌಗೋಲಿಕ ಎಲ್ಲೆಗಳ ಸಂಬಂಧವನ್ನು ಪರಿಶೀಲಿಸುತ್ತದೆ. ಕಡೆಯ ಲೇಖನದೊಳಗೆ ೧೨ನೆಯ ಶತಮಾನದಲ್ಲಿ ಮಂಗಳೂರಿನಲ್ಲಿ ವಾಸಿಸಿದ್ದ ಒಬ್ಬ ಯಹೂದಿ ವ್ಯಾಪಾರಿಯನ್ನು ಕುರಿತ ಒಂದು ಸ್ವಾರಸ್ಯದ ಚಿತ್ರವಿದೆ. ಇವೆಲ್ಲವೂ ಬಿಡಿ ಲೇಖನಗಳೇ ಆದರೂ ಕನ್ನಡ ನಾಡಿನ ಇತಿಹಾಸವನ್ನು ಹೊಸ ಕಣ್ಣುಗಳಿಂದ ಹುಡುಕುವ, ಹೊಸ ಪುರಾವೆಗಳಿಂದ ಗ್ರಹೀತ ಸತ್ಯಗಳನ್ನು ಪ್ರಶ್ನಿಸುವ ವಿಭಿನ್ನ ಆಲೋಚನಾ ಪ್ರಸ್ಥಾನವೊಂದಕ್ಕೆ ನಮ್ಮನ್ನು ಕರೆದೊಯ್ಯುವಂತಿವೆ.
ಬೆಲೆ ರೂ 210/-
ಬೇಟೆಯಲ್ಲ ಆಟವೆಲ್ಲ
ಎಂ. ಎಸ್. ಶ್ರೀರಾಮ್
ಕಾರ್ಪೊರೇಟ್ ಪ್ರಪಂಚದ ಗೆರಿಲ್ಲಾ ಕದನದಂತಿರುವ ‘ಬೇಟೆಯಲ್ಲ, ಆಟವೆಲ್ಲ’ ಕೇವಲ ರೋಚಕ ಕತೆಯಷ್ಟೆ ಅಲ್ಲ. ಇದು – ತಲೆಮಾರುಗಳ ಘರ್ಷಣೆಯಂತೆ ತೋರುತ್ತಲೇ, ಒಂದೇ ತಲೆಮಾರಿನೊಳಗೆ ಹುದುಗಿರುವ ವಿಭಿನ್ನ ಮನೋಧರ್ಮಗಳ ತುಮುಲಗಳು ಒಂದರ ಮೇಲೊಂದು ಸವಾರಿ ಮಾಡುತ್ತ, ಒಂದಕ್ಕೊಂದು ಹೆಣಿಗೆ ಹಾಕಿಕೊಳ್ಳುತ್ತ ತಲೆಮಾರುಗಳ ನಡುವಿನ ಗೆರೆಯನ್ನು ಸ್ವಲ್ಪ ಸ್ವಲ್ಪವೇ ಮಸುಕಾಗಿಸುವ ಕತೆ. ವ್ಯಾಪಾರೋದ್ಯಮದ ನವಸಂಸ್ಕೃತಿಯು ಧರ್ಮ, ರಾಜಕೀಯ, ಪ್ರೇಮ, ನೈತಿಕತೆಯನ್ನು ವಶಪಡಿಸಿಕೊಂಡು ಹೇಗೆ ಅವುಗಳನ್ನು ಮರುವ್ಯಾಖ್ಯಾನಿಸಿದೆ, ಇಂದಿನ ರಾಜಕೀಯ ಸನ್ನಿವೇಶವು ನಮ್ಮೊಳಗೆ ಹೊಸ ಬಗೆಯ ಪೂರ್ವಾಗ್ರಹಗಳನ್ನು ಹೇಗೆ ತುಂಬಿಸುತ್ತಿದೆ ಅನ್ನುವುದನ್ನು ನಿರೂಪಿಸುವ ಕತೆ. ಜೀವನ ನಿರ್ವಹಣೆಗೆ ಆಧುನಿಕತೆಯ ಲಗಾಮು ಹಿಡಿದು, ಜೀವನ ವಿಧಾನದಲ್ಲಿ ಧಾರ್ಮಿಕ ನಂಬಿಕೆಯ ಪೋಷಾಕುಗಳಿಗೆ ಮೊರೆಹೋಗುವ ಅಖ್ತರ್ ಒಂದು ತುದಿಯಲ್ಲಿ. ಧಾರ್ಮಿಕ ಸ್ಥಂಬಗಳನ್ನು ಒಡೆದು ಆಧುನಿಕ ಚಿಂತನದ ಪೋಷಾಕು ಧರಿಸಿರುವ ಅನಿರುದ್ಧ ಇನ್ನೊಂದು ತುದಿ. ಅಪ್ಪಟ ವ್ಯಾಪಾರೀ ಮನೋಧರ್ಮದ ಶಿವಾನಿ ಮತ್ತೊಂದೇ ತುದಿ. ಈ ತ್ರಿಕೋಣದ ನಡುವೆ ಸುಜಾತ ಮೂರೂ ಬಿಂದುಗಳನ್ನು ಎಂದೂ ಮುಟ್ಟಲಾಗದ ಒಳವರ್ತುಲವಾದರೆ, ಚಿನ್ಮಯ ಆ ಬಿಂದುಗಳ ಬೆಸೆಯುವ ಗೆರೆಗಳನ್ನು ಎಂದೂ ಮುಟ್ಟಲಾಗದ ಹೊರವರ್ತುಲ. ಇಂಥ ಪಾತ್ರಗಳ ಜಂಜಾಟಗಳೇ ಈ ಕಾಲದ ಜಟಿಲತೆಯನ್ನು ನನ್ನ ಮನಸ್ಸಿನ ಮೇಲೆ ಗಾಢವಾಗಿ ಅಚ್ಚೊತ್ತಿದೆ. ಶಿವಾನಿಯ ಪಾತ್ರ ಕನ್ನಡ ಜಗತ್ತಿನಲ್ಲಿ ಹೊಸತೊಂದು ಚರ್ಚೆಯನ್ನು ಹುಟ್ಟುಹಾಕವಷ್ಟು ಗರಿಗರಿಯಾಗಿದೆ. ಕತೆಗಾರ ಪಾತ್ರಗಳ ಜಗತ್ತನ್ನು ಆಕ್ರಮಿಸದಿದ್ದಾಗ ಆ ಪಾತ್ರ ಎಷ್ಟು ಪ್ರಖರವಾಗಿ ನಿಲ್ಲಬಹುದು ಅನ್ನುವುದಕ್ಕೊಂದು ಉದಾಹರಣೆ – ಶಿವಾನಿ. ಅರ್ಬನ್ ಜಗತ್ತಿನ ತಾಜಾ ಅನಾವರಣ ಇಲ್ಲೊಂದು ವಿಶಿಷ್ಟ ಮಾಹೊಲ್ ನಿರ್ಮಿಸಿದೆ. ಹಳೆಯ ರೂಪಕದಂತಿರುವ ಮಾಯಾಬಜಾರಿನಲ್ಲಿ ಹೊಸ ವ್ಯಾಪಾರೀ ಮಳಿಗೆಗಳ ಗಾಜುಗೋಡೆಗಳ ಮೇಲೆ ನಮ್ಮೆಲ್ಲರ ಆಚೆಈಚಿನದನ್ನು ಒಟ್ಟಿಗೇ ಕಾಣಿಸುವ ಕಲಸುಮೇಲೋಗರದಂಥ ಪ್ರತಿಫಲನವಿದೆ.
– ವಿಕ್ರಂ ಹತ್ವಾರ್
ಬೆಲೆ ರೂ 250/-
ನಾವಿರುವುದೆ ನಮಗಾಗಿ
ಎಂ. ಎಸ್. ಶ್ರೀರಾಮ್
“ಸ್ವಾರ್ಥದ ಮೇಲೂ ಆಧಾರಿತವಾಗದೇ, ತ್ಯಾಗದಂತೆ ನಡೆಯದೆ ಒಂದು ದಿವ್ಯ ಮಧ್ಯ ದಾರಿಯಲ್ಲಿ ನಿಂತು ಬಿಟ್ಟಂತಿರುವ ಸಹಕಾರಿ ಆಂದೋಲನ” ಕುರಿತು ಸಹಕಾರ ತತ್ವದ ತಜ್ಞ, ಹಿರಿಯ ಬರಹಗಾರ ಎಂ ಎಸ್ ಶ್ರೀರಾಮ್ ಸೊಗಸಾಗಿ ವಿಶ್ಲೇಷಿಸಿದ್ದಾರೆ. ಹಲವು ಸಂಸ್ಥೆಗಳ ಕಾರ್ಯವೈಖರಿಯನ್ನು ವಿವರಿಸಿದ್ದಾರೆ. ಸಹಕಾರ ಕುರಿತ ‘ನಾವಿರುವುದೆ ನಮಗಾಗಿ’ ಕೃತಿ ವ್ಯಾಪಾರಿ ತತ್ವವನ್ನು ಮಾರುಕಟ್ಟೆಯಲ್ಲಿ ಪ್ರಶ್ನಿಸುತ್ತಲೇ ಬೆಳೆದ ಸಹಕಾರ ಕ್ಷೇತ್ರ ಸಾಗುತ್ತಿರುವ ದಾರಿಯ ತುಲನಾತ್ಮಕ ಅವಲೋಕನವಾಗಿದೆ… ಎಂ ಎಸ್ ಶ್ರೀರಾಮ್ ‘ಸಹಕಾರ ಸಂಘಗಳು ಏಕೆ ವಿಫಲವಾಗುತ್ತಿವೆ’ ವಿಷಯದಲ್ಲಿ ಡಾಕ್ಟರೇಟ್ ಪಡೆದವರು, ಯಶಸ್ವಿ ಸಹಕಾರ ಸಂಘದ ದಾರಿ ಅರಿತವರು. …ಸಹಕಾರ ಸಂಘಗಳ ಕಾರ್ಯವೈಖರಿ, ವ್ಯಾವಹಾರಿಕ ವಿಸ್ತರಣೆಯಾಗುತ್ತ ಸಂಸ್ಥೆಯ ಮೊದಲ ತಲೆಮಾರಿನ ಷೇರು ಸದಸ್ಯರು ಕಡಿಮೆಯಾಗುತ್ತಿರುವ ಸಂಕ್ರಮಣ ಕಾಲದಲ್ಲಿ ನಾವಿದ್ದೇವೆ. ಸದಸ್ಯರು ಸೋತರೆ ಹಣ ಕೂಡ ಸೋಲುತ್ತದೆ. ನಮ್ಮ ಎಚ್ಚರ ಚುನಾವಣೆ, ವಾರ್ಷಿಕ ಸಭೆಗೆ ಸೀಮಿತವಾಗಬಾರದು. ಸಹಕಾರ ಕುರಿತ ಆರೋಗ್ಯಯುತ ಸಂವಹನ ನಿತ್ಯವೂ ನಡೆಯಬೇಕು. ದೋಷಗಳನ್ನು ಗುರುತಿಸಿ ನಡೆಯುವುದು ಮುಖ್ಯ. ಸುಧಾರಣೆ ನಿತ್ಯದ ಪ್ರಕ್ರಿಯೆಯಾಗಿದೆ. ಈ ಹಿನ್ನೆಲೆಯಲ್ಲಿ ಹೆಮ್ಮೆಯ ಅಕ್ಷರ ಪ್ರಕಾಶನ ಪ್ರಕಟಿಸಿದ ಎಂ ಎಸ್ ಶ್ರೀರಾಮ್ ಅವರ ‘ನಾವಿರುವುದೆ ನಮಗಾಗಿ’ ಮೌಲಿಕ ಕೃತಿ. ಸಹಕಾರ ಜೀವನ ಮಾರ್ಗ ನಂಬಿದ ಎಲ್ಲರ ಅಕ್ಷರದ ಬೆಳಕು.
– ಶಿವಾನಂದ ಕಳವೆ
ಬೆಲೆ ರೂ 200/-