
ವಿಕ್ರಮಾರ್ಜುನ ವಿಜಯ
ಜಿ.ಎಸ್. ಭಟ್ಟ, ಸಾಗರ
ಪಂಪಭಾರತವೆಂದೂ ಕರೆಯಲಾಗುವ ಪ್ರಸಿದ್ಧ ಕಾವ್ಯಕೃತಿ `ವಿಕ್ರಮಾರ್ಜುನವಿಜಯ’ವು ಹಲವು ಸಂಪಾದನೆಗಳಲ್ಲಿಯೂ ಗದ್ಯಾನುವಾದಗಳಲ್ಲಿಯೂ ಹೊಸಗನ್ನಡದೊಳಗೆ ಪ್ರಕಟವಾಗಿದೆ. ಇಂಥ ಅನುವಾದ ಮತ್ತು ರೂಪಾಂತರಗಳ ಸರಣಿಯನ್ನು ಮುಂದುವರೆಸುತ್ತಲೇ ಇದುವರೆಗೆ ನಡೆಯದಿದ್ದ ಒಂದು ಹೊಸ ಪ್ರಯೋಗವನ್ನು ಈ ಬರಹವು ಮಾಡಹೊರಟಿದೆ – ಅದು ಈ ಕೃತಿಯನ್ನು ಒಂದು ಕಾದಂಬರಿಯಾಗಿ ಕಾಣುವ ಪ್ರಯತ್ನ. ಇಂದಿನ ಕಾಲದ ಕಾದಂಬರಿಯೆಂಬ ಪ್ರಕಾರದೊಳಗೆ ಹಳೆಗಾಲದ ಕಾವ್ಯವೊಂದು ಮೈದಾಳಿದರೆ ಹೇಗಾದೀತು ಎಂಬ ಸಾಹಿತ್ಯ ಕುತೂಹಲವು ಈ ಪ್ರಯೋಗಕ್ಕೆ ಪ್ರೇರಣೆ. ನಿಜ, ಹಳೆ ನಡು ಹೊಸಗನ್ನಡಗಳ ದೀರ್ಘಕಾವ್ಯಗಳಲ್ಲಿ ಆಧುನಿಕ ಕಾದಂಬರಿಗಳ ರೂಪವಿಲ್ಲದಿರಬಹುದು. ಆದರೆ, ಒಂದು ಹದದ ವಾಸ್ತವಿಕ ಕಲ್ಪನೆಗಳೂ ಮತ್ತು ಕಾಲ್ಪನಿಕ ವಾಸ್ತವಗಳೂ ಇದೆಯಾಗಿ, ಇಂಥ ಒಂದು ಪ್ರಯೋಗಕ್ಕೆ ಸ್ಥಾನವಿದೆ ಎಂಬ ನಂಬುಗೆಯಿಂದ ಈ ಪ್ರಯೋಗ ಹೊರಟಿದೆ.
ಬೆಲೆ ರೂ 260/-

ಇದೆ ಎಂದರೆ ಇದೆ ಇಲ್ಲ ಎಂದರೆ ಇಲ್ಲ
ಸಮುದ್ಯತಾ ವೆಂಕಟರಾಮು
ಸಮುದ್ಯತಾ ಅವರ ಮೊದಲ ಕಾದಂಬರಿ ‘ಇದೆ ಎಂದರೆ ಇದೆ ಇಲ್ಲ ಎಂದರೆ ಇಲ್ಲ’ ಹಳ್ಳಿಯ ಮಧ್ಯಮ ವರ್ಗದ ಕುಟುಂಬವೊಂದರ ಸ್ತ್ರೀಯರ ಬಹುಸ್ತರೀಯ ಸಂಕಟವನ್ನು ಮುಖ್ಯವಾಗಿ ಕೇಂದ್ರೀಕರಿಸಿ ನಿರೂಪಿಸುತ್ತದೆ. ಮನೆತನದ ಬದುಕಿನ ಏಳು ಬೀಳಿನ ಗತಿಬಿಂಬ ನಾಲ್ಕು ತಲೆಮಾರುಗಳನ್ನು ಹಾದು ಸುಮಾರು ಒಂದು ಶತಮಾನವನ್ನು ವ್ಯಾಪಿಸುತ್ತದೆ… ಕುಟುಂಬದ ದೈನಿಕ ಅನುಭವದ ವಾಸ್ತವಿಕ ವಿವರಗಳನ್ನು ನೇಯುವ ಈ ಕೃತಿಯನ್ನು ಹವ್ಯಕ ಸಮುದಾಯದ ಸಾಂಸ್ಕೃತಿಕ ದಾಖಲೆಯಾಗಿ ಓದಬಹುದಾಗಿದೆ… ಕಷ್ಟಗಳು ಯಾವ ರೂಪ ಮತ್ತು ಮೂಲದಿಂದ ಬಂದರೂ ಅವುಗಳನ್ನು ಅನುಭವಿಸುವವಳು ಹೆಣ್ಣು ಎಂಬ ಆಶಯ ಕಾದಂಬರಿಯುದ್ದಕ್ಕೂ ಪುನರಾವರ್ತನೆಯಾಗುತ್ತದೆ… ಸಂಸಾರ ಸುಸೂತ್ರ ಸಾಗದಿರುವುದಕ್ಕೆ ಕಾದಂಬರಿ ಸೂಚಿಸುವ ಮೂಲ ಕಾರಣವಾದರೂ ಯಾವುದು? ಮುಳುಗಡೆಯಂಥ ಪ್ರಾಕೃತಿಕ ವಿಪತ್ತೆ? ಮನುಷ್ಯ ಮಾಡುವ ಆಯ್ಕೆಗಳೆ? ಕಂದಾಚಾರಗಳೆ? ಗುಟ್ಟು ಬಿಟ್ಟು ಕೊಡದ ಕಾಲವೆ? ಕೈಮೀರಿದ ಅಸಹಾಯಕತೆಗೆ ಇನ್ನೊಂದು ಹೆಸರಾದ ಕೈಕೊಟ್ಟ ದೈವವೆ? ದುರ್ಬಲ ಪುರುಷರೆ? ಇಂಥ ತಾತ್ವಿಕ ಪ್ರಶ್ನೆಗಳಿಗೆ ಉತ್ತರಿಸುವ ಆಸಕ್ತಿಯನ್ನು ಕಾದಂಬರಿ ಓದುಗರಿಗೆ ಬಿಡುತ್ತದೆ.
ಶ್ರೀಧರ ಬಳಗಾರ
ಬೆಲೆ ರೂ 200/-

ತಲೆಗಳಿ
ವಿ.ತಿ. ಶೀಗೇಹಳ್ಳಿ
`ತಲೆಗಳಿ’ಯ ಕಥಾನಾಯಕ ಕವಲುಕೊಪ್ಪದ ಸುಬ್ರಾಯ ಹೆಗಡೆ ಔದಾರ್ಯದ ಅತ್ಯುತ್ಸಾಹದಲ್ಲಿ ತನ್ನ ಸಂಪತ್ತನ್ನೆಲ್ಲ ವಿವೇಚನೆಯಿಲ್ಲದ ಕೆಲಸಗಳಲ್ಲಿ ಕಳೆದುಕೊಂಡು ದೈವೀನೆರವಿನಿಂದ ಪುನಃ ಆರ್ಥಿಕವಾಗಿಯೂ, ಸಾಮಾಜಿಕವಾಗಿಯೂ ಮೇಲೇರುತ್ತಾನೆ. ಮತ್ತು ವಿವೇಚನೆಯಿಂದ ಕೂಡಿದ ಆದರ್ಶಗಳನ್ನು ಪಾಲಿಸುತ್ತ ಕೊನೆಗೆ ಜೀವನದಲ್ಲಿ ಹೆಚ್ಚಿನ ಅರ್ಥ ಕಾಣದೆ ಗತಿಸಿಹೋದ ಹೆಂಡತಿ ಸರಸ್ವತಿಯ ಅಸ್ಥಿವಿಸರ್ಜನೆಗೆ ಗಂಗಾನದಿಯಲ್ಲಿ ಇಳಿದು ನದಿಯೊಳಗೆ ಹೊರಟೇಹೋಗುತ್ತಾನೆ. ಇಂದಿನ ವಿಮರ್ಶೆಯ ದೃಷ್ಟಿಯಲ್ಲಿ ಇದು ನಾಟಕೀಯವಾಗಿ ಕೊನೆಗೊಳ್ಳುವ ಅತಿಯಾದ ಭಾವುಕತೆಯ ಕಾದಂಬರಿ. ಕಥೆಯ ಈ ರೇಖಾ ಚಿತ್ರದಿಂದ ಕಾಣುವುದು ಕೂಡ ಇಷ್ಟೇ ಆಗಿದೆ. ಆದರೆ ಕೃತಿಯಿಂದ ಓದುಗ ಪಡೆಯುವ ಅನುಭವವೇ ಬೇರೆ. ಕೃಷಿಯನ್ನೇ ಕಚ್ಚಿಕೊಂಡು ಬದುಕು ಸಾಗಿಸುವ ಶಿರಸಿ-ಸಿದ್ದಾಪುರ ಭಾಗದ ಜನರ ಚಟುವಟಿಕೆಗಳು, ಅವರ ಆರ್ಥಿಕ ನೆಲೆ, ಅದರ ಮಿತಿ, ಧಾರ್ಮಿಕ ನಂಬುಗೆಗಳು, ರಾತ್ರಿಯ ಗ್ಯಾಸಲೈಟಿನ ಬೆಳಕಿನಲ್ಲಿ ಯಕ್ಷಗಾನದ ಅಲೌಕಿಕ ಸನ್ನಿವೇಶಗಳಿಗಾಗಿ ಕಾಯುವ ಸ್ವಪ್ನಶೀಲ ಕಾತುರಗಳು, ಅವರವರ ಮನೆದೇವರು, ಗ್ರಾಮದೇವತೆ, ಗುಪ್ತಾರಾಧನೆಗಳು, ಇಷ್ಟಸಿದ್ಧಿಗಳು-ಇವೆಲ್ಲ `ತಲೆಗಳಿ’ಯಲ್ಲಿ ಫಲಿತವಾಗುವ ನಿಜಗಳು. `ತಲೆಗಳಿ’ ಕಾದಂಬರಿಗಿಂತ ಹೆಚ್ಚಾಗಿ ಒಂದು ಮಹಾಕಾವ್ಯ. ಕಾದಂಬರಿಯಲ್ಲಿ ಅನುಭವದ ರಚನೆ ಎಲ್ಲೂ ಲಯ ತಪ್ಪುವುದಿಲ್ಲ ಎನ್ನುವುದು ಇದು ಕಾವ್ಯದಂತೆ ಕಾಣಲು ಒಂದು ಕಾರಣವಾದರೆ, ಇದರಲ್ಲಿ ಕಾದಂಬರಿಕಾರರು ಯಶಸ್ವಿಯಾಗಿ ನೆಲೆಯೂರಿಸುವ ಧರ್ಮ-ಅರ್ಥ-ಕಾಮ- ಮೋಕ್ಷಗಳ ಪ್ರಸ್ತುತತೆ ಮತ್ತೊಂದು ಕಾರಣ. ನಮ್ಮ ಪುರಾಣಗಳೂ ಮಹಾಕಾವ್ಯಗಳೂ ಪ್ರತಿಪಾದಿಸುವುದು ಈ ವಸ್ತುವನ್ನೇ.
ಆರ್.ಡಿ. ಹೆಗಡೆ ಆಲ್ಮನೆ ಅವರ ಮುನ್ನುಡಿಯಿಂದ
ಬೆಲೆ ರೂ 740/-

ಲಂಗರು
ವಿವೇಕ ಶಾನಭಾಗ
ತಾನು ಕಂಡ, ಗ್ರಹಿಸಿದ ಸಂಗತಿಗಳಿಗೆಲ್ಲ ತನ್ನ ಮಾರ್ದವತೆಯ ಸ್ಪರ್ಶ ಕೊಡುವ, ಯಾರನ್ನೂ ಯಾವುದನ್ನೂ ಬಿಡಿಯಾಗಿ ಎಳೆದು ಹರಿದು ನೋಯಿಸದೆ, ಬದುಕಿನ ನೇಯ್ಗೆಯನ್ನೆ ಇಡಿಯಾಗಿ ಅಕ್ಕರೆ ಆದರದಿಂದ ನೋಡುವ, ಭಾಷೆಯೆಂಬ ಇಂದ್ರಿಯಕ್ಕೂ ನಿಲುಕದ ನಾದಗಳಿಗೆ ತನ್ನ ಚೇತನವನ್ನು ಸದಾ ಹುರಿಗೋಳಿಸಿಕೋಂಡಿರುವ ಹುರುಪಿನ ಜೀವಿ ವಿವೇಕ ಶಾನಭಾಗ ಬರೆದ ವಿಶಿಷ್ಟ ಕತೆಗಳು ಇಲ್ಲಿವೆ. ತೀವ್ರ ಸಂಯಮ ಮತ್ತು ಅಷ್ಟೇ ಸಂಭ್ರಮಗಳಿಂದ ವಿವೇಕ್ ಬರೆದಿರುವ ಈ ವೈವಿಧ್ಯಪೂರ್ಣ ಕತೆಗಳು ಸಹಜೀವಿಯ ಅಂತರಂಗವನ್ನು ಬೆಚ್ಚಗಾಗಿಸುತ್ತಲೇ ಸಂವೇದನೆಯನ್ನು ಹಿಗ್ಗಿಸುವ ಶಕ್ತಿ, ನಮ್ರತೆ ಮತ್ತು ತನ್ಮಯತೆಯನ್ನು ಪಡೆನಿವೆ.
– ಜಯಂತ ಕಾಯ್ಕಿಣಿ
ಬೆಲೆ ರೂ 200/-

ಒಂದು ಬದಿ ಕಡಲು
ವಿವೇಕ ಶಾನಭಾಗ
ಈ ಕಥನವು ಘಟಿಸುವುದು ಉತ್ತರ ಕನ್ನಡ ಜಿಲ್ಲೆಯಲ್ಲಿ. ಕರಾವಳಿಯ ಈ ಜಿಲ್ಲೆಯಲ್ಲಿ ಹಲವು ನದಿಗಳು ಹರಿದು ಸಮುದ್ರ ಸೇರುತ್ತವೆ. ನದಿಯು ಸಮುದ್ರವನ್ನು ಸೇರುವ ತಾಣವು ದೂರದಿಂದ ಶಾಂತ ಮನೋಹರವಾಗಿ ತೋರಿದರೂ, ಆ ಅಳಿವೆಯ ನಡುವೆ ಹೋಗಿ ನೋಡಿದಾಗಲೇ ನದಿಯು ಸಾಗರವನ್ನು ಸೇರುವಾಗಿನ ಕೋಲಾಹಲ ಕಾಣುವುದು. ಅಂತೆಯೇ ಬದಲಾವಣೆಯೊಡನೆ ಸೆಣಸುತ್ತಿರುವ ಇಲ್ಲಿಯ ಜೀವನವೂ.
ಬೆಲೆ ರೂ 280/-

ಘಾಚರ್ ಘೋಚರ್
ವಿವೇಕ ಶಾನಭಾಗ
ಆಧುನಿಕ ಬೆಂಗಳೂರು ನಗರದ ಜೀವನವನ್ನು ಎತ್ತಿಕೊಂಡು ಇಷ್ಟೊಂದು ಸಂವೇದನಾಶೀಲವಾಗಿ, ಸೂಕ್ಷ್ಮವಾಗಿ, ಹೃದಯಂಗಮವಾಗಿ ವಿವೇಚಿಸುವ ಇನ್ನೊಂದು ಕಾದಂಬರಿ ನಮ್ಮಲ್ಲಿ ಬಂದಿಲ್ಲ.
ಗಿರೀಶ ಕಾರ್ನಾಡ
A great Indian novel.
The New York Times
Vivek Shanbhag is an Indian Chekhov.
Suketu Mehta, author of Maximum City
ಬೆಲೆ ರೂ 150/-