Description
ಕೆ.ವಿ. ಸುಬ್ಬಣ್ಣನವರು ತಮ್ಮ ಬರಹದ ಬದುಕಿನ ಆರಂಭದಲ್ಲಿ ಬರೆದು ಆಕಾಶವಾಣಿಯಲ್ಲಿ ಪ್ರಸ್ತುತಿ ಮಾಡಿದ ಮೂರು ಕಿರುನಾಟಕಗಳು ಇಲ್ಲಿ ಸಂಕಲಿತಗೊಂಡಿವೆ. ಬೌದ್ಧ ಕಥಾಕೋಶದಿಂದ ಆಯ್ದ ಒಂದು ಸಂಗತಿ ‘ಅಭಿಸಾರ’ದಲ್ಲೂ, ಜಾತಕ ಕಥೆಗಳಿಂದ ಎತ್ತಿಕೊಂಡ ಒಂದು ಕಥೆ ‘ಕ್ಷಾಂತಿವಾದಿ’ಯಲ್ಲೂ ಬಂದಿದೆ. ರಷ್ಯಾದ ವಿಖ್ಯಾತ ಲೇಖಕ ಮ್ಯಾಕ್ಸಿಂ ಗಾರ್ಕಿಯ ಕಥೆಯನ್ನು ಮನಸ್ಸಿನಲ್ಲಿಟ್ಟುಕೊಂಡು, ‘ಕೆಳದಿನೃಪವಿಜಯ’ದಲ್ಲಿ ಬರುವ ಐತಿಹಾಸಿಕ ಸನ್ನಿವೇಶವೊಂದರ ಕಟ್ಟಿನಲ್ಲಿ ಅದನ್ನು ಕೂಡಿಸಿದ್ದು ‘ವೀರಮಾತೆ’.
Reviews
There are no reviews yet.