Description
ವೈದೇಹಿಯವರ ಕಥೆ – `ಅಮ್ಮಚ್ಚಿಯೆಂಬ ನೆನಪು’ – ಒಬ್ಬ ತಂದೆಯಿಲ್ಲದ ಎಳೆಯ ಹುಡುಗಿ ಅಮ್ಮಚ್ಚಿಯ ಕುರಿತದ್ದು. ಆಕೆ ಬಂಡಾಯದ ಅರಿವನ್ನು ಒಳಗಿಟ್ಟುಕೊಂಡಿರುವವಳು; ಗಟ್ಟಿಯಾದ ವೈಯಕ್ತಿಕತೆಯಿರುವವಳು. ವೆಂಕಪ್ಪಯ್ಯನಿಂದ ಅತ್ಯಾಚಾರಕ್ಕೂ ದಮನಕ್ಕೂ ಒಳಗಾಗಿ ಆಕೆ ಆತನನ್ನು ಒತ್ತಾಯದಿಂದ ಮದುವೆಯಾಗಿದ್ದಾಳೆ. ಅಮ್ಮಚ್ಚಿಗಿಂತ ಕಿರಿಯಳಾದ ಮತ್ತು ಆಕೆಯ ಅಂತ:ಶಕ್ತಿಯನ್ನು ಮೆಚ್ಚುವ ಆಕೆಯ ಗೆಳತಿ ಇಲ್ಲಿ ಈ ಕಥೆಯನ್ನು ವಸ್ತುನಿಷ್ಠವಾಗಿ ಹೇಳತೊಡಗಿದ್ದಾಳೆ. ಈ ಕಥೆಯಲ್ಲಿ ಪ್ರೌಢವಾದೊಂದು ಕಾಲ್ಪನಿಕತೆಯಿದೆ. ಗಟ್ಟಿಯಾದ ಹಾಸ್ಯಪ್ರಜ್ಞೆ ಉದ್ದಕ್ಕೂ ಕೆಲಸ ಮಾಡಿದೆ. ಸ್ತ್ರೀವಾದೀ ಧೋರಣೆ ಎಂಬುದು ಇಲ್ಲಿ ಕಥನದ ನೇಯ್ಗೆಯಲ್ಲಿ ಮತ್ತು ಕೇಂದ್ರ ಪಾತ್ರದ ನಿರೂಪಣೆಯಲ್ಲೇ ಅಂತರ್ಗತವಾಗಿದ್ದು ಎಲ್ಲೂ ಅದು ಬುದ್ಧಿಪೂರ್ವಕವಾಗಿ ಮೇಲಿನಿಂದ ಸೇರಿಸಿದಂತೆ ಅನ್ನಿಸುವುದಿಲ್ಲ.
ಶಾಂತಿನಾಥ ದೇಸಾಯಿ
Reviews
There are no reviews yet.