Description
ಸರಳವಾಗಿ ಬರೆದರೆ ಗದ್ಯವಾಗುವುದಿಲ್ಲವೇನೋ ಎಂದು ಇತ್ತೀಚಿನ ಸಣ್ಣ ಕಥೆಗಾರರು ತಿಳಿದಂತಿದೆ. ಹಾಗೆ ನೋಡಿದರೆ ನನಗೇ ನನ್ನ ಗದ್ಯದ ಬಗ್ಗೆ ಆ ಅಳುಕು ಇದೆ. ಅಭಿವ್ಯಕ್ತಿಯಲ್ಲಿ ಸಾಧ್ಯವಾಗದ ಸಂಕೀರ್ಣತೆಯನ್ನು ಭಾಷೆಗೆ ತುರುಕುವ ಪ್ರಯತ್ನ ಹೆಚ್ಚಿನ ಗದ್ಯ ಲೇಖಕರದು.
ವೈದೇಹಿ ಸರಳವಾಗಿ ಬರೆದೂ ಸಂಕೀರ್ಣವಾದ ಭಾಷೆ ಸಾಧಿಸುತ್ತಾರೆ. ಮಾಸ್ತಿಯವರ ಸಣ್ಣ ಕಥೆ ಕಾರಂತರ ಕಾದಂಬರಿಗಳ ಹಿರಿಮೆಗೆ ಕಾರಣವಾಗಿದ್ದ ಈ ಗುಣವನ್ನು ಪ್ರಜ್ಞಾಪೂರ್ವಕವಾಗಿ ಮೈಗೂಡಿಸಿಕೊಂಡ ಸಣ್ಣ ಕಥೆಗಾರರಲ್ಲಿ ವೈದೇಹಿ ಒಬ್ಬರು. ಹಾಗೆಂದೇ `ಒಂದು ಅಪರಾಧ ತನಿಖೆ’ ಇತ್ಯಾದಿ ಕಥೆಗಳಲ್ಲಿ ಬದುಕಿನ ವಿವರಗಳನ್ನು ಗ್ರಹಿಸುವ ಇವರ ಪರಿ ಮೆಚ್ಚುಗೆಗೆ ಪಾತ್ರವಾಗುತ್ತದೆ. ಕಥೆಯ ಒಟ್ಟಾರೆ ಬಂಧದ ವಿಚಾರದಲ್ಲಿ, ಈ ಸಂಕಲನದಿಂದಾಚೆಗೂ ಬರೆಯುತ್ತ ನಡೆದಿರುವ ಅವರ ಕಥೆಗಳನ್ನ ಗಮನಿಸಿದಾಗ, ಈಕೆ ಬೆಳೆಯುತ್ತಿದ್ದಾರೆ ಎಂದು ನಿಸ್ಸಂದೇಹವಾಗಿ ಕಾಣುತ್ತದೆ.
ವೈದೇಹಿಯವರನ್ನ ಮಹಿಳಾ ಲೇಖಕಿ ಎನ್ನುವ ಪರಿಮಿತ ಚೌಕಟ್ಟಿನಲ್ಲಿ ಇಟ್ಟು ನೋಡಿ ಮೆಚ್ಚಬೇಕಾದ ಪ್ರಮೇಯವಿಲ್ಲ. ಕನ್ನಡದ ಹೊಸ ಪೀಳಿಗೆಯ ಯಾವುದೇ ಸಣ್ಣ ಕಥೆಗಾರರಿಗೆ ಸರಿಸಾಟಿಯಾಗಬಲ್ಲುದು ಇವರ `ಕಥನ ತಂತ್ರ’.
ಪ್ರಸನ್ನ
Reviews
There are no reviews yet.