Description
ಕನ್ನಡನಾಡಿನ ಮಲೆನಾಡು ಪ್ರದೇಶದಲ್ಲಿ ದೀಪಾವಳಿಯ ರಾತ್ರಿಗಳಲ್ಲಿ ಮನೆಯಿಂದ ಮನೆಗೆ ದೀಪವನ್ನು ಕೊಡುತ್ತ ಹಾಡುತ್ತ ಹೋಗುವ ಒಂದು ರಮ್ಯ ಸಂಪ್ರದಾಯವಿದೆ. ಆ ಸಂಪ್ರದಾಯದ ಸೊಗಸನ್ನು ಪರಿಚಯ ಮಾಡಿಕೊಡುವ ಗ್ರಂಥ ಇದು. ಈ ಗ್ರಂಥದಲ್ಲಿ, ದೀಪಾವಳಿಯಲ್ಲಿ ‘ದೀಪ ನೀಡುತ್ತ’ ಹೋಗುವ ಕೆಲವು ಜಾನಪದ ಗಾಯಕರು ಹಾಡುವಂಥ ಅದ್ಭುತರಮ್ಯ ಕಥಾಗೀತಗಳನ್ನು ಸಂಗ್ರಹಿಸಿ ಕೊಡಲಾಗಿದೆ. ಗೀತಗಳ ಜೊತೆಯಲ್ಲಿ ಸಾರಗ್ರಾಹಿಯಾದ ಅನುವ್ಯಾಖ್ಯೆ ಇದೆ. ಈ ಸಂಕಲನದ ಕಥಾಗೀತಗಳಲ್ಲಿ ತಲಸ್ಪರ್ಶಿಯಾದ ಘಟನೆಗಳಿವೆ; ಬಗೆಬಗೆಯ ಬಗೆನೆಯ್ಗೆಯ ಪಾತ್ರಗಳಿವೆ; ರಮ್ಯ ವರ್ಣನೆಗಳಿವೆ. ಜೀವನದ ಸವಿ ಸಾರಗಳೂ ಬೇವುನೋವುಗಳೂ ಇಲ್ಲಿ ಮನೋಹರವಾಗಿ ಬಂದಿವೆ. ಇಲ್ಲಿ ಶೃಂಗಾರವಿದೆ, ವೀರವಿದೆ, ಹಾಸ್ಯವಿದೆ ಕರುಣೆ ಇದೆ. ಜೀವÀನವನ್ನು ಕುರಿತ ಸಂಭಾವನಾ ದೃಷ್ಟಿ ಈ ಗೀತಗಳಲ್ಲಿ ಉದ್ದಕ್ಕೂ ಮಿಂಚಿ ಹೊಳಲಿಟ್ಟಿದೆ… ಒಟ್ಟಿನಲ್ಲಿ, ನಾವು ಉತ್ತಮ ಕಾವ್ಯವೆಂದು ಯಾವುದನ್ನು ಕರೆಯಬಹುದೋ ಅಂಥ ಗೀತಗಳು ಇಲ್ಲಿವೆ. ಕನ್ನಡದ ಕೆಲವು ಶ್ರೇಷ್ಠ ಜಾನಪದ ಕಥನಗೀತಗಳು ಇಲ್ಲಿ ಮೊದಲ ಬಾರಿಗೆ ಸಂಕಲಿತವಾಗಿವೆ.
Reviews
There are no reviews yet.