Description
ಕೆ.ವಿ. ತಿರುಮಲೇಶ್ ಅವರ ಸಂದರ್ಶನಗಳ ಸಂಕಲನ
ಕನ್ನಡ ಸಾಹಿತ್ಯದಲ್ಲಿ ನಾನು ಅನೇಕ ಕೆಲಸಗಳನ್ನು ಮಾಡಿದ್ದೇನೆ ನಿಜ – ಪ್ರಬಂಧಗಳು, ಲೇಖನಗಳು, ಸಾಹಿತ್ಯ ವಿಮರ್ಶೆ, ಜನಪ್ರಿಯ ವಿಜ್ಞಾನದ ಬಗ್ಗೆಯೂ ಬರೆದಿದ್ದೇನೆ. ನಾನು ತಿಂಗಳ, ವಾರದ ಅಂಕಣಗಳನ್ನು ಬರೆದೆ, ಕಥೆ, ಕಿರುಕಾದಂಬರಿಗಳು ಮತ್ತು ನೀವು ಹೇಳಿದಂತೆ ಇತ್ತೀಚೆಗೆ ಒಂದು ನಾಟಕವನ್ನೂ ಬರೆದೆ. ಆದರೆ ಈ ಎಲ್ಲದರಲ್ಲೂ ನನಗೆ ತುಂಬಾ ಸಂತೋಷವನ್ನು ನೀಡಿದ ಕೆಲಸವೆಂದರೆ ಪದ್ಯ ಬರೆಯುವುದು. ಆದರೆ ಕಾವ್ಯರಚನೆ ಆತಂಕದ ಕೆಲಸವೂ ಹೌದು. ಇದು ನಮ್ಮ ಆಂತರ್ಯವನ್ನು ಬಗೆಯುವ ಕೆಲಸ. ಇದು ಸೂಕ್ಷ್ಮ – ಸಂವೇದನಾಶೀಲ ಕೆಲಸ. ನಾನು ಅತ್ಯುತ್ತಮ ಕವಿತೆಗಳನ್ನು ಬರೆಯಬೇಕೆಂದು ಬಯಸುತ್ತೇನೆ. ಹಾಗೂ ಬರೆದದ್ದನ್ನು ಇತರರಿಗೆ ತೋರಿಸಲು ನನಗೆ ತುಂಬಾ ಸಂಕೋಚವೂ ಆಗುತ್ತದೆ!
***
ನಾನು ಕಂಡುಕೊಂಡ ವಿಷಯವೊಂದನ್ನು ಹೇಳ್ತೇನೆ ನಿಮಗೆ, ಈ ವಾಟ್ಸಾಪ್ ಗ್ರೂಪ್ಸ್, ಫೇಸ್ಬುಕ್ ಅದೆಲ್ಲಾ ಇದೆಯಲ್ಲ – ಅದರ ಪರಿಣಾಮ ಒಳ್ಳೇದೋ, ಕೆಟ್ಟದೋ, ಅಂತ ಹೇಳೋಕೆ ಆಗಲ್ಲ. ಅದೊಂದು ಸಮಸ್ಯೆ. ನಮ್ಮ ಉತ್ತರ ಏನೇ ಇದ್ರೂ, ಇದೆಲ್ಲಾ ಇರೋದಂತೂ ಇದೆ, ಮುಂದೆ continue ಕೂಡಾ ಆಗಬಹುದು. ಏನಾಗುತ್ತೆ ಅಂದ್ರೆ. ನಾನು ಕೇಳಿದ ಪ್ರಕಾರ (ನಾನು ಇಂಥಾ ಯಾವ ಗ್ರೂಪಿಗೂ ಸೇರಿಲ್ಲ!), ಕೆಲವರಿಗೆ ಹಠ ಇರುತ್ತೆ, ದಿನಕ್ಕೆ ಹತ್ತು ಕವಿತೆಗಳನ್ನ ಬರೆದು ಅಪ್ಲೋಡ್ ಮಾಡಬೇಕಂತ. ಹೀಗೆ ಮಾಡಿ ಮಾಡಿ ಕವಿತೆಯ ಉಬ್ಬರ ಜಾಸ್ತಿ ಆಗಿಬಿಟ್ಟು ಅದರ ಕ್ವಾಲಿಟಿ ಕಡಿಮೆಯಾಗಿದೆಯೇನೋ ಅಂತ ನನಗೆ ಅನಿಸುತ್ತೆ. ಹಾಗೆ ಆಗುವ ಸಾಧ್ಯತೆ ಜಾಸ್ತಿ. ಮತ್ತೆ ಎಲ್ಲರೂ ಲೈಕ್ ಮಾಡಬೇಕಲ್ಲ. ಪರಸ್ಪರ ಭಾವ ಎಂದ ಹಾಗೆ, ನಿಮ್ಮ ಕವಿತೆಗೆ ನಾನು ಲೈಕ್ ಮಾಡಬೇಕು, ನನ್ನ ಕವಿತೆಗೆ ನೀವು ಲೈಕ್ ಚಿಹ್ನೆ ಒತ್ತಬೇಕು. It becomes an obligation. ಅಲ್ಲಿ ಅಪ್ರಮಾಣಿಕತೆ ಜಾಸ್ತಿ ಆಗುತ್ತೆ. ಈ phenomenon ನಡೀತಾ ಇದೆ ಈಗ.
ಕೆ.ವಿ. ತಿರುಮಲೇಶ್
Reviews
There are no reviews yet.