Description
ಸಾಮಾಜಿಕ ಕ್ರಿಯಾಶೀಲತೆ, ಪರಿಸರವಿಜ್ಞಾನ ಮತ್ತು ಕಲೆಗಳ ಬಗ್ಗೆ ಆಸಕ್ತಿಯಿಟ್ಟುಕೊಂಡು ಹಲವು ದಶಕಗಳ ಕಾಲ ಬೇರೆಬೇರೆ ಸಂಘಟನೆಗಳ ಮುಖಾಂತರ ಕೆಲಸ ಮಾಡಿ ಅನುಭವ ಗಳಿಸಿದ ಲಕ್ಷ್ಮೀನಾರಾಯಣ ಕಾಶಿ ಅವರು ತಮ್ಮ ಹಲವು ಕಾರ್ಯಗಳ ನಡುವೆ ಬರೆಯುತ್ತ ಹೋದ ಕಿರು ಬರಹಗಳ ಸಂಕಲನ ಈ ಪುಸ್ತಕ. ರಂಗಭೂಮಿ ಮತ್ತು ಯಕ್ಷಗಾನ ಕ್ಷೇತ್ರಗಳ ಗಣ್ಯ ಮಹನೀಯರಾಗಿದ್ದ ದಿ| ಕೆ.ವಿ. ಸುಬ್ಬಣ್ಣ ಮತ್ತು ದಿ| ಕೆರೆಮನೆ ಶಂಭು ಹೆಗಡೆ ಅವರ ಸಮೀಪವರ್ತಿಯಾಗಿದ್ದ ಇವರು ಆ ಇಬ್ಬರ ಕುರಿತು ಬರೆದ ಆಪ್ತಚಿತ್ರಗಳು ಇಲ್ಲಿವೆ. ಜತೆಗೆ, ಜನಸಂಖ್ಯೆ, ಯುವಸಮುದಾಯದ ಸಮಸ್ಯೆಗಳು, ಕೃಷಿ, ಪಶ್ಚಿಮ ಘಟ್ಟ, ಪರಿಸರದ ಬಿಕ್ಕಟ್ಟುಗಳು, ಸುಸ್ಥಿರ ಭಾರತದ ಆದರ್ಶ ಮೊದಲಾದ ಹತ್ತಾರು ಸಂಗತಿಗಳನ್ನು ಕುರಿತು ತಮ್ಮ ಮನಸ್ಸಿನಲ್ಲಿ ಹಾದುಹೋದ ಆಲೋಚನೆಗಳನ್ನು ಅವರಿಲ್ಲಿ ಹಿಡಿದಿಟ್ಟಿದ್ದಾರೆ. ತಾನು ಬದುಕಿರುವ ಸಮುದಾಯ ಮತ್ತು ಸಂದರ್ಭಗಳಿಗೆ ಸಂವೇದನಾಶೀಲ ಮನಸ್ಸೊಂದು ನೀಡಿದ ಪ್ರತಿಸ್ಪಂದನೆಗಳ ಒಂದು ದಾಖಲೆ – ಈ ಪುಸ್ತಕ.
Reviews
There are no reviews yet.