Description
ಲೋಕವು ಹೊಳೆದು ಕಾಣುವುದು ಭಾಷೆಯಿಂದ – ಎಂಬುದು ಭರ್ತೃಹರಿಯ ಪ್ರಸಿದ್ಧ ನುಡಿ. ಇದನ್ನು ಭಾಷಾಂತರಕ್ಕೂ ವಿಸ್ತರಿಸಬಹುದು. ಲೋಕಾಂತರಗಳು ನಮಗೆ ಹೊಳೆದು ಕಾಣುವುದು ಭಾಷಾಂತರದಿಂದ. ಲೋಕಾಂತರಗಳನ್ನು, ನಮ್ಮದಲ್ಲದ ಭಾಷೆಗಳನ್ನು ಆಡುತ್ತಿರುವ ಅನ್ಯ ನಾಡುಗಳಿಗೂ ಅನ್ವಯಿಸಬಹುದು ಅಥವಾ ನಮಗೇ ಮರವೆಗೆ ಸಂದಿರುವ ನಮ್ಮದೇ ಬೇರೆ ದೇಶಕಾಲಗಳಿಗೂ ಅನ್ವಯಿಸಬಹುದು, ಅಥವಾ ಲೋಕೋತ್ತರವಾದ ಸಂಗತಿಗಳಿಗೂ ಅದು ಸಂಬಂಧಿಸಿರಬಹುದು. ಭಾಷಾಂತರವೆಂಬ ಪರಿಕಲ್ಪನೆಯ ಇಂಥ ವಿಶಾಲವಾದ ಅರ್ಥ ಪರಂಪರೆಗಳನ್ನು ಕೇಂದ್ರದಲ್ಲಿಟ್ಟುಕೊಂಡು ಹುಟ್ಟಿರುವ ಪುಟ್ಟ ಯೋಜನೆ – ಬಹುವಚನ. ಅಥವಾ, ಇಂಗ್ಲಿಷಿನ ಆವೃತ್ತಿಯಲ್ಲಿ, ಹೈಫನ್.
ಕನ್ನಡ ಮತ್ತು ಅನ್ಯಭಾಷೆಗಳ ನಡುವೆ ಸಾಹಿತ್ಯಕೃತಿಗಳನ್ನು ಕೊಟ್ಟು ಪಡೆಯುವ ಸಂತೋಷವನ್ನು ಪುಸ್ತಕ ಪ್ರಕಾಶನದ ಮೂಲಕ ಹಂಚಲು ಮುಂದಾಗಿದ್ದೇವೆ. ಇದೊಂದು ಅನುವಾದಕೇಂದ್ರಿತ ಯೋಜನೆ. ಈಗಾಗಲೇ ನಡೆಯುತ್ತಿರುವ ಇಂಥ ಕೆಲಸಗಳಿಗೆ ನಮ್ಮದೇ ರೀತಿಯಲ್ಲಿ ಕೈಜೋಡಿಸಲಿದ್ದೇವೆ. ನಮ್ಮ ಕಾಲದ ಸಾಮೂಹಿಕ ಸ್ಮೃತಿಗೆ ಅಗತ್ಯವೆನಿಸುವ ಅನ್ಯಭಾಷೆಯ ಕೃತಿಗಳನ್ನು ಕನ್ನಡಕ್ಕೆ ತರುವುದು, ವರ್ತಮಾನಕ್ಕೆ ಪ್ರಸ್ತುತವೆನಿಸುವ ಹಳೆಯ ಕನ್ನಡದ್ದೇ ಕೃತಿಗಳ ಮರು ಆವೃತ್ತಿಗಳನ್ನು ರೂಪಿಸುವುದು ಹಾಗೂ ಕನ್ನಡದಿಂದ ಹೊರಭಾಷೆಗಳಿಗೆ ಇಂಥ ಸಂಬಂಧ ಕಲ್ಪಿಸುವುದು ಮಾತ್ರವಲ್ಲ, ಈ ಸಂಗತಿಗಳಿಗೆ ಹೆಣೆದುಕೊಂಡಂತೆಯೇ ಹೊಸ ಕೃತಿಗಳನ್ನು ರೂಪಿಸುವುದು ಬಹುವಚನದ ಪ್ರಾರಂಭಿಕ ಉದ್ದೇಶ. ಇದರ ಜೊತೆಗೆ ಕನ್ನಡದ ವಿಶಿಷ್ಟ ಸ್ವತಂತ್ರ ಕೃತಿಗಳ ಪ್ರಕಟಣೆಯೂ ಇರಲಿದೆ.
ಈ ಕಾಂಬೋ ಆಫರ್‌ನಲ್ಲಿ ಕೆಳಕಂಡ ಪುಸ್ತಕಗಳು ದೊರಕುತ್ತವೆ.
Reviews
There are no reviews yet.