Description
ಕಥೆಗಳಿಗೆ ಕಾವ್ಯದ ಸೊಬಗನ್ನು ತಂದವರು ವೈದೇಹಿ. ಅವರ ಹಾಗೆ ಭಾಷೆಯನ್ನು ದುಡಿಸಿಕೊಂಡ ಲೇಖಕರು ಕನ್ನಡದಲ್ಲಿ ಅಪರೂಪ. ಇದುವರೆಗೆ ನಾವು ಓದಿರುವ ಕಥೆಗಳಿಗಿಂತ ಇಲ್ಲಿನವು ಭಿನ್ನ ಜಾಡನ್ನು ಹಿಡಿದಿವೆ. ಇವರ ಕಥೆಗಳಲ್ಲಿ ವಸ್ತುವಿಗಿಂತ ಭಾವಕ್ಕೆ, ತಂತ್ರಕ್ಕೆ ಮತ್ತು ಧ್ವನಿಗೇ ಪ್ರಾಧಾನ್ಯ.
ಈ ಬಗೆಯ ಕಥೆಗಳು ಕನ್ನಡಕ್ಕೆ ಹೊಸವು. ಕಾಲದ ಉಯ್ಯಾಲೆಯಲ್ಲಿ ಲೇಖಕಿ ತೂಗಿ ತೋರುವ ಚಿತ್ರಮಾಲಿಕೆಗಳು ರಾಗರಂಜಿತ, ವರ್ಣಬಂಧಿತ, ಮನಸ್ಸಿನ ಪದರುಗಳ ವಿಶ್ಲೇಷಣೆ ಗಿಡ ಬೆಟ್ಟ ಆಕಾಶ ಭೂಮಿ ಪಾತ್ರಗಳಾಗಿ ರೆಕ್ಕೆ ಬಿಚ್ಚಿಕೊಳ್ಳುವ ಮೋಜು ಅಪರೂಪದ ಅನುಭವ ನೀಡುತ್ತವೆ. ಇಲ್ಲಿ ಸೆರೆಹಿಡಿದಿರುವ ಒಂದು ಭಾವ, ಒಂದು ಭಂಗಿ, ಒಂದು ದೃಶ್ಯ, ಒಂದು ಮಾತಿನ ವಿಲಾಸ, ಹೆಕ್ಕಿ ತೆಗೆದಿಟ್ಟು ಹೃದಯದ ಹತ್ತಿರ ಇಟ್ಟುಕೊಳ್ಳುವಂಥವು – ಮತ್ತೆಮತ್ತೆ ನೋಡಲಿಕ್ಕಾಗಿ. ಮೊಗೆದಷ್ಟೂ ಸಿಗುವ ಅನುಭವ ಸಂಪತ್ತು ಇಲ್ಲಿ ಅಕ್ಷಯವಾಗಿದೆ.
ರಂಗಿನಂಗಳ ನಿರ್ಮಿಸುವ ಸೂರ್ಯ, ಕೂತಲ್ಲಿಂದ ಮಿಸುಕಾಡದ ಆದರೆ ಇಡೀ ಜಗತ್ತನ್ನು ಕುಣಿಸುವ ಕಲಿಪುರುಷ, ಬದುಕು-ಮೃತ್ಯುಗಳ ನಿಗೂಢತೆ, `ಎಲ್ಲವನ್ನೂ ಕಳೆದು ಚೊಕ್ಕವಾಗಿ ತಾಜಾ ಪ್ರಕೃತಿಯಾಗುವ’ ಶಕುಂತಲೆ, ಸಾವಿಗೆ ಜೀವದ ಹೊಲಿಗೆ ಹಾಕುವ ಮುಸ್ತಫಾ – ಈ ಚಿತ್ರಗಳು ವಾಸ್ತವತೆ ಮತ್ತು ಫ್ಯಾಂಟೆಸಿಗಳ ಮಧ್ಯೆ ಭಾವಭಾಷೆಗಳ ಸೇತುವೆ ನಿರ್ಮಿಸಿ ಬೇರೊಂದು ಲೋಕವನ್ನೇ ನಮ್ಮ ಮುಂದೆ ಅನಾವರಣಗೊಳಿಸುತ್ತವೆ.
ಕಥೆಗಾರ್ತಿ ವೈದೇಹಿ ಹೊಸ ಭರವಸೆಗಳ ಆಗರ.
ಅನುಪಮಾ ನಿರಂಜನ
Reviews
There are no reviews yet.