Sold out!

ಹೈಬ್ರಿಡ್ ಕತೆಗಳು

SKU: 73
Category: , ,

65.00

Out Of Stock
Weight 117.00000000 g
Number of pages

92

Year of Publication

2005

Author

ಆರ್ಯ

Sold out!

Description

ಆರ್ಯ ಅವರ ಈ ಹೊಸ ಕಥಾಸಂಕಲನವು ತನ್ನ ತಲೆಬರಹದಲ್ಲೇ ಸೂಚಿಸುವ ಹಾಗೆ ಹೊಸ ರೀತಿಯ ಕಥನಕ್ರಮವೊಂದನ್ನು ಪ್ರಯೋಗಿಸುವ ಉತ್ಸಾಹದಿಂದ ಉದ್ಯುಕ್ತವಾಗಿದೆ. ‘ಹೈಬ್ರಿಡ್’ ಎಮ್ದು ಕರೆಯಲಾಗಿರುವ ಇಂಥ ಹೊಸ ಗ್ರಹಿಕೆಯ ಕ್ರಮವನ್ನು ಕನ್ನಡದಲ್ಲಿ ‘ಬೆರಕೆ’, ‘ಮಿಶ್ರಣ’, ‘ಕೂಡಲು’ ಇತ್ಯಾದಿ ಹೊಸದಾಗಿ ಸೃಷ್ಟಿಸಿಕೊಂಡ ಪದಗಳಿಂದ ಸೂಚಿಸಿಕೊಳ್ಳಬಹುದು. ಮೂಲತಃ ‘ಬೆರಕೆ’ ಎನ್ನುವ ಪರಿಕಲ್ಪನೆಯೇನೂ ಆಧುನಿಕ ಕನ್ನಡ ಸಾಹಿತ್ಯಕ್ಕೆ ಸಂಪೂರ್ಣ ಹೊಸತಲ್ಲ. ಪಶ್ಚಿಮ ಮತ್ತು ಪೂರ್ವದ ಮಾದರಿಗಳ ಬೆರಕೆ, ಹಳ್ಳಿ ಮತ್ತು ಪಟ್ಟಣದ ಅನುಭವಗಳ ಬೆರಕೆ, ಅಥವಾ ಭೂತ ಮತ್ತು ವರ್ತಮಾನದ ಗ್ರಹಿಕೆಗಳ ಬೆರಕೆ- ಹೀಗೆ ಹಲವಾರು ರೀತಿಗಳಲ್ಲಿ ಈ ಬೆರಕೆಯು ನಮ್ಮ ಸಾಹಿತ್ಯದ ವಿಭಿನ್ನ ಅಂಗಾಂಶಗಳಲ್ಲಿ ಈಗಾಗಲೇ ನಾನಾ ರಿತಿಗಳಿಂದ ಅಭಿನೀತವಾಗುತ್ತಲೇ ಬಂದಿದೆ. ಆದರೆ, ಪ್ರತಿ ಕಾಲಕ್ಕೂ ಹೊಸಹೊಸ ಮಾದರಿಯ ಬೆರಕೆಯ ಕಥನಗಳೇ ಬೇಕಾಗುತ್ತವೆ; ಮತ್ತು ಅಂಥ ಮಾದರಿಗಳನ್ನು ಹುಡುಕುವುದೇ ಅಂದಂದಿನ ಸಾಹಿತ್ಯದ ಕ್ರಿಯಾಶೀಲಕತೆಯೂ ಹೌದು. ಈ ದೃಷ್ಟಿಯಿಂದ, ಆರ್ಯ ಅವರ ಪ್ರಸ್ತುತ ಕಥನಗಳನ್ನು ಇಂಥ ಹೊಸ ಕ್ರಿಯಾಶೀಲ ಆವಿಷ್ಕಾರವೊಂದರ ಹುಡುಕಾಟ ಎನ್ನಬಹುದು.

Reviews

There are no reviews yet.

Be the first to review “ಹೈಬ್ರಿಡ್ ಕತೆಗಳು”

Your email address will not be published. Required fields are marked *

No Author Found