Description
ಮಾಮ ಅವಳಿಗೆ ಹೇಳಿದ್ದ ‘ನಿನ್ನ ಮನೆಗೊಂದು ಮನೆಯ ಕಳೆಯಿಲ್ಲ.’ ನಂತರ ನಾನು ಅಮ್ಮನಲ್ಲಿ ಕೇಳಿದ್ದೆ ‘ಮನೆಯ ಕಳೆ ಅಂದ್ರೇನು?’ ಅಮ್ಮ ಹೇಳಿದ್ದಳು: ‘ಮನೆಮಂದಿಯ ಮಧ್ಯದಲ್ಲಿ ಎಲ್ಲ ಸರಿಯಿದ್ದರೆ ಆ ಮನೆಗೆ ಕಳೆ.’ ನಂತರ ಎಲ್ಲಿಯೂ ಯಾವ ಮನೆಗೆ ಹೋದರೂ ನಾನು ಮನೆಯ ಕಳೆಯನ್ನು ಹುಡುಕುತ್ತಿದ್ದೆ.
(ಜೀವ ಕೊಡಲೇ? ಚಹಾ ಕುಡಿಯಲೇ?)
***
ಗೋವಾದ ಬಹುಸಂಸ್ಕೃತಿ ಮಿಶ್ರಣದ ಜೀವನದ ವಿಶಿಷ್ಟ ಒಳನೋಟಗಳನ್ನು ಕೊಡುವ, ಕೊಂಕಣಿಯ ಬಹುಮುಖ್ಯ ಲೇಖಕರಲ್ಲೊಬ್ಬರಾದ ದಾಮೋದರ ಮಾವಜೋ ಅವರ ಹೊಸ ಕಾದಂಬರಿಯಿದು. ಸಾಹಿತ್ಯ ಅಕಾಡೆಮಿ ಸೇರಿದಂತೆ ಹಲವು ಪ್ರಶಸ್ತಿಗಳಿಂದ ಪುರಸ್ಕೃತರಾದ ಮಾವಜೋ ಈ ಕೃತಿಯಲ್ಲಿ ಹದಿಹರೆಯದವರ ಕಣ್ಣಿನಿಂದ ಜೀವನದ ಹೊಯ್ದಾಟಗಳನ್ನು ಕಂಡಿದ್ದಾರೆ.
Reviews
There are no reviews yet.