Description
ಕಾಲದ ಫ್ರೇಮುಗಳನ್ನು ಕಳಚಿಟ್ಟು ಅಲೆಮಾರಿಯಂತೆ ಚಲಿಸುತ್ತಿರುವುದು ಎಷ್ಟು ಸರಳವೆನಿಸುತ್ತದೆಯೋ ಅದು ಅಷ್ಟೇ ಗಹನವಾದ ಸಂಗತಿಯೂ ಆಗಿಬಿಡುತ್ತದೆ. ಏಕೆಂದರೆ ನಿಶ್ಚಿತ ನೋಟಕ್ರಮಗಳು ಆಭ್ಯಾಸವಾದ ನಮಗೆ ಅದನ್ನು ಮೀರಿ ಸದಾ ಧುಮ್ಮಿಕ್ಕಿ ಹರಿಯುವ ಚೈತನ್ಯವನ್ನು ಅರಿಯುವುದು ಸವಾಲು. ಅದರ ಸಂಗಡ ಸುಮ್ಮನೇ ಹರಿಯುತ್ತಾ ಹೋಗುವುದು ಚಂದ. ಹೊಸನೋಟಗಳು ಮಾತ್ರ ನಮ್ಮನ್ನು ರೋಮಾಂಚಿತಗೊಳಿಸುತ್ತವೆ. ಕಥನಕ್ಕೆ ಅಂಥ ಬೆರಗಿನ ಕಂಪನ ವಿಸ್ತಾರ ಬೇಕು. ಈ ಗುಟ್ಟನ್ನು ರಶೀದರ ಕತೆಗಳು ಹೊಟ್ಟೆಯೊಳಗಿಟ್ಟುಕೊಂಡಿವೆ.
ಗೀತಾ ವಸಂತ
ಹಿಡಿಯ ಹೊರಟರೆ ಬೆರಳ ಮಧ್ಯದಿಂದ ಜಾರಿಹೋಗುವಂಥ ಒಂದು ಭಾವವಲಯವು ಈ ಕತೆಗಾರಿಕೆಯ ವಸ್ತುವಾಗಿದೆ. ಇದು ಘಟನೆಯಾಗಿ ಬರಬೇಕೆಂದಿಲ್ಲ. ಹಿಂದೂಸ್ತಾನಿ ಸಂಗೀತದ ಬಹುಪಾಲು ‘ಸಾಹಿತ್ಯ’ವಿಲ್ಲದೆ ಸಮಗ್ರ ಭಾವನಾ ಲೋಕವನ್ನು ವಿಹರಿಸುವಂತೆ ಈ ಕತೆಗಳಲ್ಲಿ ಕೂಡ ಸೂಕ್ಷ್ಮವಾದ, ಮಾತಿನ ಆಚೆಗೆ, ಹಿಂದೆ ಇರುವ ಭಾವನೆಗಳಿವೆ.
ರಾಜೇಂದ್ರ ಚೆನ್ನಿ
ನಮ್ಮ ಗ್ರಹೀತಗಳಿಗೆ, ಪೂರ್ವಗ್ರಹಗಳಿಗೆ ಸವಾಲು ಒಡ್ಡುತ್ತ ವಿಭಿನ್ನ ಲೋಕದೊಳಗೆ ಕರೆದೊಯ್ಯುವ ರಶೀದರ ಕತೆಗಳನ್ನು ಓದಿದಾಗ ದೊರಕುವ ಆನಂದ, ಕಳವಳ, ಉದ್ವೇಗ, ಚಿಂತನೆಗಳನ್ನು ಸುಮ್ಮನೇ ಪಡೆಯಬೇಕಲ್ಲದೇ ಯಾವ ಸಾಹಿತ್ಯಿಕ ಹತಾರಗಳಿಂದಲೂ ದಕ್ಕಿಸಿಕೊಳ್ಳಲಾಗದು.
ವಿವೇಕ ಶಾನಭಾಗ
ಸಾಮಾನ್ಯ ಎನಿಸಿಬಿಡಬಲ್ಲ ಸಣ್ಣ ವಿವರವೂ ಕೂಡ ಅಗಾಧ ಭಾವಕೋಶಗಳ ಬ್ರಹ್ಮಾಂಡ ಎಂಬುದನ್ನು ಮನನ ಮಾಡಿಸುವ ಕಥೆಗಳಿವು.
ಚರಿತಾ ಮೈಸೂರು
Reviews
There are no reviews yet.