Description
ಸಾಹಿತ್ಯ, ಸಿನೆಮಾ ಮತ್ತು ಸಂಗೀತ — ಈ ಮೂರು ಮಾಧ್ಯಮಗಳನ್ನು ಮಾರ್ಗವಾಗಿಟ್ಟುಕೊಂಡು ಮನು ಚಕ್ರವರ್ತಿಯವರ ಈ ಪುಸ್ತಕವು ಇವತ್ತಿನ ಕಾಲದ ಪ್ರಮುಖ ಸಾಮಾಜಿಕ ಮತ್ತು ಸಾಂಸ್ಕ ತಿಕ ಪ್ರಶ್ನೆಗಳಿಗೆ ಮುಖಾಮುಖಿಯಾಗುತ್ತದೆ.ಮುಖ್ಯವಾಗಿ, ಮೂರು ರೀತಿಯ ವೈಶಿಷ್ಟ ಗಳು ಮನು ಅವರ ಇಲ್ಲಿಯ ಬರಹಗಳಲ್ಲಿ ಎದ್ದುಕಾಣುತ್ತವೆ — ಒಂದು, ತಾನು ಎತ್ತಿಕೊಂಡ ಪ್ರತಿಯೊಂದು ವಿಚಾರವನ್ನೂ ತಳಮಟ್ಟ ಶೋಧಿಸಿ, ಚಪ್ಪಟೆಗೊಳಿಸದೆ ವೈರುದ್ಧ ಗಳೊಡನೆಯೇ ಪ್ರಸ್ತುತಗೊಳಿಸುವ ಚಿಕಿತ್ಸಕ ಪ್ರಜ್ಞೆ; ಎರಡು, ಪ್ರತಿಯೊಂದು ನಿರ್ದಿಷ್ಟ ವಿಚಾರವನ್ನೂ ವಿಶಾಲ ಜಾಗತಿಕ ವಿದ್ಯಮಾನಗಳ ಹಿನ್ನೆಲೆಯೊಡನೆ ಸಮೀಕರಿಸಿ ವಿಶ್ಲೇಷಿಸುವ ಸಂದರ್ಭಪ್ರಜ್ಞೆ; ಮತ್ತು ಮೂರನೆಯದಾಗಿ, ತಾನು ಈ ವಿಚಾರವನ್ನು ಕುರಿತಾಗಿ ಇವತ್ತಿನ ಈ ಕಾಲದೇಶಗಳಲ್ಲಿ ಯಾತಕ್ಕೆ ಬರೆಯುತ್ತಿದ್ದೇನೆ ಎಂಬಂಥ ಸ್ಪಷ್ಟವಾದೊಂದು ವೈಯಕ್ತಿಕ ಪ್ರಜ್ಞೆ — ಇಂಥ ಮೂರು ಪ್ರಜ್ಞಾಪ್ರವಾಹಗಳ ಮುಪ್ಪುರಿ ಇಲ್ಲಿಯ ಲೇಖನಗಳಲ್ಲಿದೆ.ಆದ್ದರಿಂದಲೇ, ಇಲ್ಲಿಯ ಪ್ರತಿಯೊಂದು ಲೇಖನವೂ ನಿರ್ದಿಷ್ಟ ಕೃತಿ-ಘಟನೆ-ಮಾಧ್ಯಮಗಳನ್ನು ಕೇಂದ್ರೀಕರಿಸಿದ್ದರೂ ಅಂತಿಮವಾಗಿ ಇಲ್ಲಿರುವ ಎಲ್ಲ ಬರಹಗಳೂ ‘ಮರಳ ಕಣದಲ್ಲಿಯೇ ವಿಶ್ವವನ್ನು ಕಾಣುವ ಮತ್ತು ಅಂಗೈಯೊಳಗೆ ಅನಂತವನ್ನು ಆವಾಹಿಸಿಕೊಳ್ಳುವ’ ಮಹತ್ವಾಕಾಂಕ್ಷೆಯನ್ನು ಪ್ರಕಟಪಡಿಸುವಂತಿವೆ.
-ಅಕ್ಷರ ಕೆ.ವಿ.
Reviews
There are no reviews yet.