Description
‘ಇಷ್ಟೂ ಕವಿತೆಗಳು ನನ್ನ ಹೃದಯವನ್ನು ಮುಟ್ಟಿ ರೂಪುಗೊಳಿಸಿವೆ. ಕವಿತೆ ಒಂದು ಕಲೆ ಎಂದೋ ಪ್ರತಿಭಾ ಪ್ರದರ್ಶನವೆಂದೋ ಭಾವಿಸಿರುವುದಕ್ಕಿಂತ ಅದು ನನ್ನನು ಹೊಕ್ಕು ಆಗಿಸುವ ಪ್ರಕ್ರಿಯೆಯೆಂದು ನಾನು ತಿಳಿದಿರುವುದು ಹೆಚ್ಚು. ಈ ಪ್ರತಿಯೊಂದು ಕವಿತೆಯೂ ಜೀವನದ ಅರಿವನ್ನು ಪಳಗಿಸಿದೆ, ಕಿಂಚಿತ್ ಹೆಚ್ಚಿಸಿದೆ. ಅದರ ಸಾರವೆಂದರೆ- ಬೆಟ್ಟದಷ್ಟೇ ಹುಲ್ಲು ಬೀಜಕ್ಕೂ ಅಸ್ತಿತ್ವದ ಅಧಿಕಾರವಿದೆ ಎಂಬುದು. ನಾನು ಈ ಪ್ರಪಂಚದ ಮಾನದಂಡವಲ್ಲ, ಅಲ್ಲದೆ ಎಲ್ಲವೂ- ನನ್ನ ವಿರುದ್ಧವಿರುವಂಥದೂ ಕೂಡ- ಈ ಪ್ರಪಂಚದ ಕೇಂದ್ರವೇ ಆಗಿದೆ ಎಂಬುದು. ಹಾಗಾಗಿ ಬೇರೆ ಬೇರೆಯದನ್ನು ಸಹಿಸುವುದು, ಅರ್ಥ ಮಾಡಿಕೊಳ್ಳುವುದು ಮತ್ತು ಪ್ರಿತಿಸುವಂತೆ ಹೃದಯವನ್ನು ಹದಗೊಳಿಸಿಕೊಳ್ಳುವುದು ಈ ಇಹದ ಪರಮ ನೀತಿಯೇ ಆಗಿದೆ ಎಂಬುದು. ಕಾವ್ಯದಂತೆ ಅಧ್ಯಾತ್ಮವೂ ಈ ಅರಿವನ್ನು ಕೊಡುತದೆ. ಆದರೆ ಅಧ್ಯಾತ್ಮ ಪ್ರತಿಯೊಂದರ ಅನನ್ಯ ಚಹರೆಯನ್ನು, ಇರುವನ್ನು ಸಮೀಕರಿಸಿಬಿಡುತ್ತದೆ. ಕವಿತೆ ಮಾತ್ರ ಎಲ್ಲದರ ವಿಶಿಷ್ಟ ಚಹರೆಯನ್ನು ತೊಡೆಯದೇ ಈ ಅರಿವನ್ನು ಹುಟ್ಟಿಸುತ್ತದೆ. ಕವಿತೆಯ ಬಗ್ಗೆ ನನಗಿರುವ ಒಲವು, ಸ್ಪಂದನಕ್ಕೆ ಕಾರಣವೇ ಅದು.’
-ಎಸ್. ಮಂಜುನಾಥ್
Reviews
There are no reviews yet.