ಮಹಾತ್ಮ

Category: , , , ,

145.00

17 In Stock
Number of pages

102

Year of Publication

1st Edition- 1999, 2nd Edition- 2024

Translator / Editor

ಕೆ.ವಿ. ಸುಬ್ಬಣ್ಣ

Author

ಮುಕುಂದ ರಾವ್

17 in stock

Description

ಮುಕುಂದರಾವ್‍ರ ‘ಮಹಾತ್ಮ’ ನಾಟಕ ನೋಡುತ್ತ ‘ಗಾಂಧಿ’ ಎಂಬ ಸಮಸ್ಯೆಯೇ ನಮ್ಮನ್ನು ಎದುರಾಗುತ್ತದೆ. ಭಾವವಶರಾಗಿ ಗಾಂಧಿಯನ್ನು ಕಾಣದೇ, ಅವರು ಸೋತರೋ ಗೆದ್ದರೋ ಎಂಬ ಕುತೂಹಲದಲ್ಲಿ ತಣಿಯದೇ, ಗಾಂಧಿಯನ್ನೇ ನಾವು ನೋಡುವಂತೆಯೂ, ಆ ಮೂಲಕ ನಮ್ಮನ್ನೇ ನೋಡಿಕೊಳ್ಳುವಂತೆಯೂ ಆಗುತ್ತದೆ… ಗಾಂಧೀಜಿ ತಮ್ಮ ನವಾಖಲಿ ದಿನಗಳಲ್ಲಿ ಅಹಿಂಸೆ ಮತ್ತು ಸತ್ಯಗಳ ಅವಿನಾಸಂಬಂಧದ ನಿರಂತರವಾದ ಆತಂಕಪೂರ್ಣವಾದ ಶೋಧದಲ್ಲಿ ಇದ್ದರು ಎನ್ನಿಸುತ್ತದೆ. ಯಾವುದು ನಿತ್ಯ ಎದುರಾಗುತ್ತಿದೆಯೋ ಅದೇ ಸತ್ಯವಾದರೆ, ತಾನು ಬಯಸುವುದು ಮಾತ್ರ ಅಹಿಂಸೆಯಾದರೆ, ಈ ತನ್ನ ಬಯಕೆಯೂ ಕಾಮವನ್ನು ಪೂರ್ಣ ಗೆದ್ದಿರಲಾರದ ತನ್ನ ಶರೀರದ ನೈಜತೆಗೆ ಹೊರತಾದದ್ದಾದರೆ… ಈ ತೊಳಲಾಟಕ್ಕೆ ಉತ್ತರ ಗಾಂಧೀಜಿಗೆ ಅವರ ಮೌನದ ಅನುಸಂಧಾನದಲ್ಲಿ ದೇವರ ಇಚ್ಛೆಗೆ ತನ್ನನ್ನು ವಾಹಕ ಮಾಡಿಕೊಳ್ಳುವ ಪ್ರಾರ್ಥನೆಯ ವಿನಯದಲ್ಲಿ ಮಾತ್ರ ಕಾಣಬಹುದಿತ್ತು. …ಗಾಂಧೀಜಿ ಪಾಲಿಗೆ ಪ್ರಾರ್ಥನೆ ದೇವರನ್ನು ಒಲಿಸಿಕೊಳ್ಳುವ ಉಪಾಯಕ್ಕಿಂತ ಹೆಚ್ಚಾಗಿ, ಸತ್ಯವನ್ನು ಅರಿಯುವುದಕ್ಕೆ ಅಗತ್ಯವಾದ ವಿನಯದ ಸ್ಥಿತಿಯನ್ನು ತಲುಪುವ ಪ್ರಕ್ರಿಯೆಯಾಗಿರುತ್ತಿತ್ತು. ಈ ವಿನಯದಲ್ಲಿ ಅವರು ಕಾದಿದ್ದೇ ಸತ್ತರು ಎಂಬುದು ಮಾನವನ ನಿಜವಾದ ಸಾಧ್ಯತೆ ಏನು ಎಂಬುದನ್ನು ತಿಳಿಯಲು ಈ ತನಕ ದಾಖಲಾದ ಚರಿತ್ರೆಯ ಕಾಲ ಸಾಲದು ಎಂಬ ವಿನಯವನ್ನು ಕಲಿಸಿಕೊಡುವಂತಿದೆ. ನವಾಖಲಿ ಮಾನವ ಇತಿಹಾಸದಲ್ಲಿ ವಿನಯದ ಅಂಥ ಒಂದು ಕಠಿಣವಾದ ಪಾಠ. ಈ ಭಾವನೆಯನ್ನು ನನ್ನಲ್ಲಿ ಹುಟ್ಟಿಸಿದ ಮುಕುಂದರಾವ್ ಬರೆದ ನಾಟಕಕ್ಕೆ ನಾನು ಕೃತಜ್ಞ.

ಯು.ಆರ್. ಅನಂತಮೂರ್ತಿ

Reviews

There are no reviews yet.

Be the first to review “ಮಹಾತ್ಮ”

Your email address will not be published. Required fields are marked *