Description
“ಸ್ವಾರ್ಥದ ಮೇಲೂ ಆಧಾರಿತವಾಗದೇ, ತ್ಯಾಗದಂತೆ ನಡೆಯದೆ ಒಂದು ದಿವ್ಯ ಮಧ್ಯ ದಾರಿಯಲ್ಲಿ ನಿಂತು ಬಿಟ್ಟಂತಿರುವ ಸಹಕಾರಿ ಆಂದೋಲನ” ಕುರಿತು ಸಹಕಾರ ತತ್ವದ ತಜ್ಞ, ಹಿರಿಯ ಬರಹಗಾರ ಎಂ ಎಸ್ ಶ್ರೀರಾಮ್ ಸೊಗಸಾಗಿ ವಿಶ್ಲೇಷಿಸಿದ್ದಾರೆ. ಹಲವು ಸಂಸ್ಥೆಗಳ ಕಾರ್ಯವೈಖರಿಯನ್ನು ವಿವರಿಸಿದ್ದಾರೆ. ಸಹಕಾರ ಕುರಿತ ‘ನಾವಿರುವುದೆ ನಮಗಾಗಿ’ ಕೃತಿ ವ್ಯಾಪಾರಿ ತತ್ವವನ್ನು ಮಾರುಕಟ್ಟೆಯಲ್ಲಿ ಪ್ರಶ್ನಿಸುತ್ತಲೇ ಬೆಳೆದ ಸಹಕಾರ ಕ್ಷೇತ್ರ ಸಾಗುತ್ತಿರುವ ದಾರಿಯ ತುಲನಾತ್ಮಕ ಅವಲೋಕನವಾಗಿದೆ… ಎಂ ಎಸ್ ಶ್ರೀರಾಮ್ ‘ಸಹಕಾರ ಸಂಘಗಳು ಏಕೆ ವಿಫಲವಾಗುತ್ತಿವೆ’ ವಿಷಯದಲ್ಲಿ ಡಾಕ್ಟರೇಟ್ ಪಡೆದವರು, ಯಶಸ್ವಿ ಸಹಕಾರ ಸಂಘದ ದಾರಿ ಅರಿತವರು. …ಸಹಕಾರ ಸಂಘಗಳ ಕಾರ್ಯವೈಖರಿ, ವ್ಯಾವಹಾರಿಕ ವಿಸ್ತರಣೆಯಾಗುತ್ತ ಸಂಸ್ಥೆಯ ಮೊದಲ ತಲೆಮಾರಿನ ಷೇರು ಸದಸ್ಯರು ಕಡಿಮೆಯಾಗುತ್ತಿರುವ ಸಂಕ್ರಮಣ ಕಾಲದಲ್ಲಿ ನಾವಿದ್ದೇವೆ. ಸದಸ್ಯರು ಸೋತರೆ ಹಣ ಕೂಡ ಸೋಲುತ್ತದೆ. ನಮ್ಮ ಎಚ್ಚರ ಚುನಾವಣೆ, ವಾರ್ಷಿಕ ಸಭೆಗೆ ಸೀಮಿತವಾಗಬಾರದು. ಸಹಕಾರ ಕುರಿತ ಆರೋಗ್ಯಯುತ ಸಂವಹನ ನಿತ್ಯವೂ ನಡೆಯಬೇಕು. ದೋಷಗಳನ್ನು ಗುರುತಿಸಿ ನಡೆಯುವುದು ಮುಖ್ಯ. ಸುಧಾರಣೆ ನಿತ್ಯದ ಪ್ರಕ್ರಿಯೆಯಾಗಿದೆ. ಈ ಹಿನ್ನೆಲೆಯಲ್ಲಿ ಹೆಮ್ಮೆಯ ಅಕ್ಷರ ಪ್ರಕಾಶನ ಪ್ರಕಟಿಸಿದ ಎಂ ಎಸ್ ಶ್ರೀರಾಮ್ ಅವರ ‘ನಾವಿರುವುದೆ ನಮಗಾಗಿ’ ಮೌಲಿಕ ಕೃತಿ. ಸಹಕಾರ ಜೀವನ ಮಾರ್ಗ ನಂಬಿದ ಎಲ್ಲರ ಅಕ್ಷರದ ಬೆಳಕು.
ಶಿವಾನಂದ ಕಳವೆ
Reviews
There are no reviews yet.