Description
ಪೋಲೆಂದ್‌ನ ಜೆರ್ರಿ ಗ್ರೋಟೋವ್‌ಸ್ಕಿ ೨೦ನೆಯ ಶತಮಾನದ ಜಾಗತಿಕ ರಂಗಭೂಮಿಯಲ್ಲಿ ಒಂದು ಪ್ರಸಿದ್ಧ ಹೆಸರು. ರಂಗ ನಿರ್ದೇಶಕನಾಗಿ, ಶಿಕ್ಷಕನಾಗಿ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಹೊಸದೇ ಆದೊಂದು ರಂಗಮೀಮಾಂಸೆಯನ್ನು ರೂಪಿಸಿದ ರಂಗಚಿಂತಕನಾಗಿ ಗ್ರೋಟೋವ್‌ಸ್ಕಿ ತುಂಬ ಮುಖ್ಯನಾದವನು. ಆಧುನಿಕ ಜಗತ್ತಿನ ಎಲ್ಲ ಭಾಗಗಳ ಹಲವು ರಂಗಕರ್ಮಿಗಳೂ ರಂಗ ವಿದ್ಯಾರ್ಥಿಗಳೂ ಗ್ರೋಟೋವ್‌ಸ್ಕಿಯ ಅಭಿನಯ ಶಿಕ್ಷಣ ಕ್ರಮದಿಂದ ಇವತ್ತು ಪ್ರತ್ಯಕ್ಷವಾಗಿಯೋ ಪರೋಕ್ಷವಾಗಿಯೋ ಪ್ರಭಾವ ಪಡೆದುಕೊಂಡಿದ್ದಾರೆ; ಮತ್ತು ಅಂಥ ಪ್ರಭಾವಗಳನ್ನು ತಮ್ಮದೇ ರೀತಿಗಳಲ್ಲಿ ಮುಂದುವರೆಸಿ ಬಳಸಿಕೊಳ್ಳುತ್ತಿದ್ದಾರೆ. ಇಂಥ ಪ್ರಭಾವಿ ರಂಗಚಿಂತಕನ ಕೆಲವು ಪ್ರಮುಖ ಲೇಖನಗಳನ್ನು ಪ್ರಸ್ತುತ ಪುಸ್ತಕ ಕನ್ನಡದಲ್ಲಿ ಕೊಡುತ್ತದೆ. ಜತೆಗೆ, ಗ್ರೋಟೋವ್‌ಸ್ಕಿಯ ಬದುಕು-ಕಾರ್ಯಗಳನ್ನು ಪರಿಚಯಿಸುವ ಕೆಲವು ಕಿರುಬರಹಗಳು ಇಲ್ಲಿವೆ.
Reviews
There are no reviews yet.