Description
ನಿಮ್ಮ ಲೇಖನವನ್ನು (`To be or not to be’) ಆಸಕ್ತಿಯಿಂದ ಎಚ್ಚರದಿಂದ ಮೂರುಬಾರಿ ಓದಿದ್ದೇನೆ. You have a point, a forceful point at that… – ಪ್ರೊ. ಎಲ್.ಎಸ್. ಶೇಷಗಿರಿರಾವ್
ಮೊದಲಿಗೇ ಹೇಳಬೇಕಾದರೆ, ಕೃತಿಯೊಡನೆ ನಿಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡು, ಎಲ್ಲ ಮುಖ್ಯಪಾತ್ರ ಘಟನೆಗಳನ್ನು ಕುರಿತು ಮಾಡಿರುವ ತಲಸ್ಪರ್ಶಿ ವಿಶ್ಲೇಷಣೆ, ಕೃತಿಯ ಪ್ರಮುಖ ಭಾಗಗಳ ವಾಕ್ಯಗಳ ಭಾಷಿಕ ಆಯಾಮವನ್ನು ಅದ್ಭುತವಾಗಿ ಗುರುತಿಸಿರುವ ರೀತಿ ಇವೆಲ್ಲವೂ ಓದುಗರಿಗೆ ಶೇಕ್ಸ್‌ಪಿಯರನ ಅಗಾಧ ಕಾವ್ಯಪ್ರತಿಭೆಯನ್ನು ಪರಿಚಯಿಸುವುದಷ್ಟೇ ಅಲ್ಲದೆ ಒಂದು ಪಠ್ಯಕ್ಕೆ ಎಷ್ಟು ಸೂಕ್ಷ್ಮವಾಗಿ ಸ್ಪಂದಿಸಬಹುದು ಎಂಬುದಕ್ಕೆ ಮಾದರಿ ಎನಿಸುತ್ತವೆ. – ಡಾ. ಸಿ.ಎನ್. ರಾಮಚಂದ್ರನ್
ಓದಿನ ವ್ಯವಧಾನ, ಸುರಕ್ಷತೆ ಹಾಗೂ ಸಂವೇದಾಶೀಲತೆಯ ದೃಷ್ಟಿಯಿಂದ ನೋಡಿದರೆ ಗೋವಿಂದರಾಯರ ಬರಹ ಅತ್ಯುತ್ತಮವಾಗಿದೆ. ತಮ್ಮನ್ನು ತಾವೇ ಸಮಗ್ರವಾಗಿ ನಾಟಕದಲ್ಲಿ ತೊಡಗಿಸಿಕೊಂಡು ಭಾಷೆಯೊಂದಿಗೆ ಹೃದಯ ಸಂವಾದದಲ್ಲಿ ತೊಡಗುತ್ತಾರೆ. – ಡಾ. ರಾಜೇಂದ್ರ ಚೆನ್ನಿ
ಅಧ್ಯಾಪಕರಾಗಿ, ನಟರಾಗಿ ಮತ್ತು ಲೇಖಕರಾಗಿ ಶೇಕ್ಸ್‌ಪಿಯರನನ್ನು ಕನ್ನಡಿಸುತ್ತಾ ಅವನ ಕೃತಿ ಲೋಕಕ್ಕೆ ಕಾಲುದಾರಿಗಳನ್ನು ನಿರ್ಮಿಸುವ ಕೆಲಸವನ್ನು ಗೋವಿಂದರಾವ್ ಮಾಡುತ್ತಲೇ ಬಂದಿದ್ದಾರೆ. – ಪ್ರೊ. ಓ.ಎಲ್. ನಾಗಭೂಷಣಸ್ವಾಮಿ
Reviews
There are no reviews yet.