Description
ಬೇರೆಬೇರೆ ಕಾಲದೇಶಗಳಿಗೂ ವಿಭಿನ್ನ ಸಂಸ್ಕೃತಿ-ನಾಗರಿಕತೆಗಳಿಗೂ ತನ್ನತನ್ನದೇ ನೆಲೆಯಲ್ಲಿ ಗ್ರಹಿಸಲು ಸಾಧ್ಯವಿರುವ ಒಂದು ವಿಶಿಷ್ಟ ಬಹುಧ್ವನಿ ಚೆಕಾಫನ ಎಲ್ಲ ನಾಟಕಗಳ ಒಡಲೊಳಗೆ ಅಡಗಿಕೊಂಡಿದೆ.
`ಅಂಕಲ್ ವಾನ್ಯಾ’ ಕೃತಿಗೆ ಸಂಬಂಧಿಸಿ, ಚುಟುಕಾದ ಎರಡೇ ಉದಾಹರಣೆ ಹೇಳುವುದಾದರೆ – ಕ್ರಿಶ್ಚಿಯನ್ ಧರ್ಮಾನುಸಾರಿಯಾದ ಪಾಶ್ಚಿಮಾತ್ಯ ಕಣ್ಣುಗಳಲ್ಲಿ ನೋಡುವವರಿಗೆ ಈ ನಾಟಕವು, ವಿಸಂಗತ ಬದುಕಿನ ಹರಿವಿನಲ್ಲಿ ತಾಳಿಕೆಯ ನೋವು – ಸಫರಿಂಗ್ – ಒಂದೇ ನಿಜವಾದ ಭಾವಸಾಧ್ಯತೆ ಎಂಬ ಸತ್ಯದ ದರ್ಶನ ಕೊಡುವಂತಿದ್ದರೆ, ಭಾರತದ ದಾರ್ಶನಿಕ ನೋಟಗಳಿಗೆ ಇಲ್ಲಿ ಬದುಕಿನ ಅರ್ಥಹೀನತೆಯಲ್ಲೂ ಸದಾ ಕ್ರಿಯಾಶೀಲವಾಗಿಯೇ ಉಳಿದುಕೊಳ್ಳುವ ಜೀವನ್ಮುಕ್ತಿಯ ಛಾಯೆ ಗೋಚರಿಸಬಹುದಾಗಿದೆ.
ಇನ್ನು, ಈ ಯಾವ ತಾತ್ತ್ವಿಕ ಭಾರವೂ ಬೇಡ ಎನ್ನುವವರಿಗೂ ಈ ನಾಟಕದ ಕಥೆ ತನ್ನದೇ ಭರಪೂರ ಭಾವಾವಿಷ್ಟ ರಸಾಸ್ವಾದನೆಯ ಸುಖ ನೀಡುವಂತಿದೆ.
Reviews
There are no reviews yet.