e-Books

ಅಕ್ಷರ ಪ್ರಕಾಶನ, ಹೆಗ್ಗೋಡು
ಇ-ಪುಸ್ತಕ ಯೋಜನೆ

ಅಕ್ಷರ ಪ್ರಕಾಶನದ ಪುಸ್ತಕಗಳನ್ನು ಹಲವು ಮಾರಾಟಗಾರರು ಇ-ಪುಸ್ತಕಗಳಾಗಿ ಪರಿವರ್ತಿಸಿ ಮಾರಾಟ ಮಾಡುತ್ತಿದ್ದರಾದರೂ ಸ್ವತಃ ಅಕ್ಷರ ಪ್ರಕಾಶನವು ಇ-ಪುಸ್ತಕಗಳ ನಿರ್ಮಾಣಕ್ಕೆ ಕೈ ಹಾಕಿರಲಿಲ್ಲ. ಈಗ ಪ್ರಕಾಶನವು ತನ್ನದೇ ಇಂಥ ಪುಸ್ತಕ ನಿರ್ಮಾಣ ಮತ್ತು ಮಾರಾಟಗಳನ್ನು ಮಾಡಲು ಪ್ರಾರಂಭಿಸಿದೆ. ಅಕ್ಷರ ಪ್ರಕಾಶನದ ಇ-ಪುಸ್ತಕಗಳು ಆಕರ್ಷಕವಾದ ಮತ್ತು ಬೇರೆಬೇರೆ ಗಣಕ-ಟ್ಯಾಬ್‌-ಫೋನ್‌ಗಳಲ್ಲಿ ಸರಿಯಾಗಿ ಬಳಸಲು ಬರುವಂಥ ವಿನ್ಯಾಸದಲ್ಲಿ ಹೊರಬಂದಿದ್ದು, ಗೂಗಲ್ ಪ್ಲೇಬುಕ್ಸ್‌ ಅಂತರ್ಜಾಲ ತಾಣದಲ್ಲಿ ಜಗತ್ತಿನಾದ್ಯಂತ ನೇರ ಕೊಳ್ಳಲು ಲಭ್ಯವಾಗುತ್ತಿವೆ. ಕೆ.ವಿ. ಸುಬ್ಬಣ್ಣ, ಡಾ. ಯು.ಆರ್. ಅನಂತಮೂರ್ತಿ, ಡಿ.ಆರ್. ನಾಗರಾಜ್, ವೈದೇಹಿ, ವಿವೇಕ್ ಶಾನಭಾಗ, ಟಿ.ಪಿ. ಅಶೋಕ, ಎಂ.ಎಸ್. ಶ್ರೀರಾಮ್, ಅಕ್ಷರ ಕೆ.ವಿ. ಮತ್ತು ಹಲವು ಗಣ್ಯರ ಪುಸ್ತಕಗಳು ಇದರಲ್ಲಿ ಸೇರಿವೆ.

ಕ್ರಮೇಣ, ಮುದ್ರಿತ ಆವೃತ್ತಿಯಲ್ಲಿ ಮಾರಾಟಕ್ಕಿಲ್ಲದ ಹಳೆಯ ಉಪಯುಕ್ತ ಪುಸ್ತಕಗಳೂ ಇದರಲ್ಲಿ ಲಭ್ಯವಾಗುತ್ತವೆ.

ನಮ್ಮ ಇ-ಪುಸ್ತಕಗಳು ಮೈಲ್ಯಾಂಗ್, ಋತುಮಾನ ಮತ್ತು ವಿವಿಡ್ಲಿಪಿ ಅಂತರ್ಜಾಲ ಅಂಗಡಿಗಳಲ್ಲೂ ಲಭ್ಯವಿವೆ.

Akshara Prakashana, Heggodu
Ebooks Project

Some of the books published by Akshara Prakashana were available as ebooks on various webshops, produced and marketed by those sellers. Now, Akshara Prakashana has begun to make its own ebooks, with attractive layout, compatible with all computers, tabs and phones. Books written by authors such as K.V. Subbanna, Dr. U.R. Ananthamurthy, D.R. Nagaraj, Vaidehi, Vivek Shanbhag, T.P. Ashoka, M.S. Sriram, Akshara K.V. and many other prominent writers are now on sale across the globe at Google Play Books.

More eBooks from us will be uploaded in the next days, which are old and rare books that are no more available in the print version.

Our eBooks are available online at MyLang, Ruthumana and Vividlipi.

2560px Google Play Store badge EN.svg