ದರೋಡೆಕೋರರು

Category: , , , ,

275.00

19 In Stock
Number of pages

180

Year of Publication

2025

Author

ಫ್ರೀಡ್ರಿಷ್ ಶಿಲರ್

Translator / Editor

ಮಾಧವ ಚಿಪ್ಪಳಿ

19 in stock

Description

ಹದಿನೆಂಟನೆಯ ಶತಮಾನದ ಪ್ರಸಿದ್ಧ ಜರ್ಮನ್ ನಾಟಕಕಾರ ಫ್ರೀಡ್ರಿಷ್ ಶಿಲರ್ ಬರೆದ ಮೊದಲ ಕೃತಿ – ‘ದರೋಡೆಕೋರರು’. ೧೭೮೧ರಲ್ಲಿ ಪ್ರಕಟವಾದ ಈ ನಾಟಕವನ್ನು ಶಿಲರ್ ವೈದ್ಯಕೀಯ ಶಿಕ್ಷಣವನ್ನು ಪಡೆಯುತ್ತಿರುವ ಹೊತ್ತಿಗೇ ಬರೆಯುತ್ತಾನೆ. ಮೇಲು ನೋಟಕ್ಕೆ ಇದೊಂದು ಸಹೋದರರ ನಡುವಿನ ಆಸ್ತಿ ವ್ಯಾಜ್ಯ, ಹಳಸಿ ಹೋದ ತಂದೆ ಮಕ್ಕಳ ಸಂಬಂಧ, ಒಬ್ಬ ಹುಡುಗಿಯನ್ನು ಒಬ್ಬರಿಗಿಂತ ಹೆಚ್ಚು ಗಂಡಸರು ಪ್ರೀತಿಸುವ ಕತೆ – ಹೀಗೆ ಬಹಳ ಹೊಸತು ಅನ್ನಿಸದ ವಿಷಯಗಳ ಸುತ್ತಲೇ ಹೆಣೆದಿರುವ ನಾಟಕ. ಆದರೆ ನಾವು ಇದನ್ನು ಓದುತ್ತಾ ಹೋದಂತೆ ಮನುಷ್ಯ ಸ್ವಭಾವದ ಸೂಕ್ಷ್ಮಗಳು, ಆದರ್ಶವಾದಿಯೊಬ್ಬನ ದೃಷ್ಟಿಗೂ ಬದುಕಿನ ವಾಸ್ತವಕ್ಕೂ ನಡುವೆ ಇರುವ ಕಂದಕ ಮೊದಲಾದ ವಿಚಾರಗಳನ್ನು ಮುನ್ನೆಲೆಗೆ ತರುವುದು ಗೋಚರಿಸುತ್ತದೆ. ಆ ಕಾಲದ ಜರ್ಮನಿಯ ಇತಿಹಾಸ, ಕಾರ್ಲ್‍ನ ಶಾಲೆಯ ವಿವರಗಳೆಲ್ಲ ಗೊತ್ತಿರುವ ಓದುಗರಿಗೆ ಶಿಲರ್ ಬದುಕಿನ ಬಗ್ಗೆ ಹೊಂದಿದ್ದ ದೃಷ್ಟಿಕೋನವನ್ನು ಬಿಚ್ಚಿಡುವ ನಾಟಕವೂ ಹೌದು.

Reviews

There are no reviews yet.

Be the first to review “ದರೋಡೆಕೋರರು”

Your email address will not be published. Required fields are marked *