‘ಪಡ್ಡಾಯಿ’ ಚಿತ್ರ ಕಟ್ಟಿದ ಕಥೆ

SKU: 197
Category: , , , ,

265.00

15 In Stock
Weight 204.00000000 g
Number of pages

180

Year of Publication

1st Edition- 2019, 2nd Edition- 2022

Author

ಅಭಯ ಸಿಂಹ

eBook

https://play.google.com/store/books/details/Abhaya_Simha_Paddayi_Chitra_Kattida_Kathe?id=TQ36DwAAQBAJ

15 in stock

Description

ನಮ್ಮ ತುಳು ಸಿನೆಮಾ ‘ಪಡ್ಡಾಯಿ’ ಹಲವು ಕಾರಣಗಳಿಗೆ ನನ್ನ ಮಟ್ಟಿಗೆ ಒಂದು ವಿಶಿಷ್ಟ ಅನುಭವ. ಈ ಅನುಭವವನ್ನು ದಾಖಲೀಕರಿಸುವ ಪ್ರಯತ್ನದ ಫಲವಾಗಿ ಈ ಪುಸ್ತಕ ಹೊರತರುವ ಯೋಚನೆ ಆರಂಭವಾಯಿತು. ಹಾಗೆಯೇ, ನಮ್ಮ ಚಿತ್ರಕಥೆಯ ಹೂರಣವನ್ನು ಇನ್ನೊಂದಿಷ್ಟು ಬಿಡಿಸಿಡುವ ಪ್ರಯತ್ನ ಇದು. ನಮ್ಮ ಸಿನೆಮಾದ, ಹಿಂದಿನ ಯೋಚನೆಯನ್ನು ಹಂಚಿಕೊಳ್ಳುವ ಹಾಗೂ ಇನ್ನಷ್ಟು ವಿಮರ್ಶೆಗೆ ತೆರೆದುಕೊಳ್ಳುವ ಪ್ರಯತ್ನವೂ ಇದಾಗಿದೆ.

-ಅಭಯ ಸಿಂಹ

ಅಭಯ ಸಿಂಹ ಅವರು ಬರೆದು, ನಿರ್ದೇಶಿಸಿದ ತುಳು ಚಿತ್ರ ‘ಪಡ್ಡಾಯಿ’ ವಿಲಿಯಮ್ ಶೇಕ್ಸ್‌ಪಿಯರ್‌ನ ‘ಮ್ಯಾಕ್‌ಬೆತ್’ ನಾಟಕ ಆಧಾರಿತ ಎಂದು ಶೀರ್ಷಿಕೆಯಲ್ಲಿ ಹೇಳಿಕೊಂಡರೂ, ನನಗೆ ಅದರ ಗರ್ಭದಲ್ಲಿ, ಹೊಸತೇ ಆದ ಅರ್ಥಗಳನ್ನು ಕಾಣಲು ಸಾಧ್ಯವಾಯಿತು. ಕಥೆಯಲ್ಲಿ ಸಾಮ್ಯತೆಯಿದ್ದರೂ, ಕಥಾನಕ ಬೇರೆಯೇ ಆಗಿರುವುದು ಈ ಅವತರಣಿಕೆಯ ಹೆಗ್ಗಳಿಕೆ.

-ಗಿರೀಶ ಕಾಸರವಳ್ಳಿ

(ಮುನ್ನುಡಿಯಿಂದ)

 

ಅಭಯಸಿಂಹ ಮುಕ್ತವಾಗಿ ‘ಪಡ್ಡಾಯಿ’ ಕತೆಗೆ ‘ಮ್ಯಾಕ್‌ಬೆತ್’ ಕತೆ ಮೂಲ ಎಂದು ಹೇಳಿಕೊಂಡಿದ್ದರೂ, ನನಗೆ ಅದು ವ್ಯಾಸನ ಮಹಾಭಾರತಕ್ಕೂ ಹತ್ತಿರವಿದ್ದಂತೆ ಕಾಣುತ್ತದೆ. ಹಲವು ಪಾತ್ರಗಳು ಮಹಾಭಾರತದ ಹೊಳಪು ಕೊಡುತ್ತವೆ. ತುಳು ಭಾಷೆಯಲ್ಲಿ ‘ಪಡ್ಡಾಯಿ’ಯಂಥ ಒಂದು ಉತ್ತಮ ಚಿತ್ರ ತಯಾರಿಸಲು ಮುಂದೆ ಬಂದ ನಿರ್ಮಾಪಕ ನಿತ್ಯಾನಂದ ಪೈಯವರನ್ನು ಮತ್ತು ನಿರ್ದೇಶಕ ಅಭಯ ಸಿಂಹರನ್ನು ಈ ಮೂಲಕ ಹೃತ್ಪೂರ್ವಕವಾಗಿ ಅಭಿನಂದಿಸುತ್ತೇನೆ.

-ಗೋಪಾಲಕೃಷ್ಣ ಪೈ

(ಹಿನ್ನುಡಿಯಿಂದ)

Reviews

There are no reviews yet.

Be the first to review “‘ಪಡ್ಡಾಯಿ’ ಚಿತ್ರ ಕಟ್ಟಿದ ಕಥೆ”

Your email address will not be published. Required fields are marked *