Description
ಸಮುದ್ಯತಾ ಅವರ ಮೊದಲ ಕಾದಂಬರಿ ‘ಇದೆ ಎಂದರೆ ಇದೆ ಇಲ್ಲ ಎಂದರೆ ಇಲ್ಲ’ ಹಳ್ಳಿಯ ಮಧ್ಯಮ ವರ್ಗದ ಕುಟುಂಬವೊಂದರ ಸ್ತ್ರೀಯರ ಬಹುಸ್ತರೀಯ ಸಂಕಟವನ್ನು ಮುಖ್ಯವಾಗಿ ಕೇಂದ್ರೀಕರಿಸಿ ನಿರೂಪಿಸುತ್ತದೆ. ಮನೆತನದ ಬದುಕಿನ ಏಳು ಬೀಳಿನ ಗತಿಬಿಂಬ ನಾಲ್ಕು ತಲೆಮಾರುಗಳನ್ನು ಹಾದು ಸುಮಾರು ಒಂದು ಶತಮಾನವನ್ನು ವ್ಯಾಪಿಸುತ್ತದೆ… ಕುಟುಂಬದ ದೈನಿಕ ಅನುಭವದ ವಾಸ್ತವಿಕ ವಿವರಗಳನ್ನು ನೇಯುವ ಈ ಕೃತಿಯನ್ನು ಹವ್ಯಕ ಸಮುದಾಯದ ಸಾಂಸ್ಕೃತಿಕ ದಾಖಲೆಯಾಗಿ ಓದಬಹುದಾಗಿದೆ… ಕಷ್ಟಗಳು ಯಾವ ರೂಪ ಮತ್ತು ಮೂಲದಿಂದ ಬಂದರೂ ಅವುಗಳನ್ನು ಅನುಭವಿಸುವವಳು ಹೆಣ್ಣು ಎಂಬ ಆಶಯ ಕಾದಂಬರಿಯುದ್ದಕ್ಕೂ ಪುನರಾವರ್ತನೆಯಾಗುತ್ತದೆ… ಸಂಸಾರ ಸುಸೂತ್ರ ಸಾಗದಿರುವುದಕ್ಕೆ ಕಾದಂಬರಿ ಸೂಚಿಸುವ ಮೂಲ ಕಾರಣವಾದರೂ ಯಾವುದು? ಮುಳುಗಡೆಯಂಥ ಪ್ರಾಕೃತಿಕ ವಿಪತ್ತೆ? ಮನುಷ್ಯ ಮಾಡುವ ಆಯ್ಕೆಗಳೆ? ಕಂದಾಚಾರಗಳೆ? ಗುಟ್ಟು ಬಿಟ್ಟು ಕೊಡದ ಕಾಲವೆ? ಕೈಮೀರಿದ ಅಸಹಾಯಕತೆಗೆ ಇನ್ನೊಂದು ಹೆಸರಾದ ಕೈಕೊಟ್ಟ ದೈವವೆ? ದುರ್ಬಲ ಪುರುಷರೆ? ಇಂಥ ತಾತ್ವಿಕ ಪ್ರಶ್ನೆಗಳಿಗೆ ಉತ್ತರಿಸುವ ಆಸಕ್ತಿಯನ್ನು ಕಾದಂಬರಿ ಓದುಗರಿಗೆ ಬಿಡುತ್ತದೆ.
ಶ್ರೀಧರ ಬಳಗಾರ
Reviews
There are no reviews yet.