Description
ಕೊಟ್ಟಾರತ್ತಿಲ್ ಶಂಕುಣ್ಣಿ ಕೇರಳವಿಡೀ ಸುತ್ತಾಡಿ ಸಂಗ್ರಹಿಸಿದ ನೂರಾರು ಐತಿಹ್ಯಗಳನ್ನು ಒಂದು ಸೂತ್ರದಲ್ಲಿ ಹೆಣೆದು ಹಲವು ಸಂಪುಟಗಳಲ್ಲಿ ಪ್ರಕಟಿಸಿದ ಬೃಹತ್ ಗ್ರಂಥ ಐತಿಹ್ಯಮಾಲೆ… ಪೌರಾಣಿಕತೆಯ ಪ್ರತೀಕಗಳಿಂದ ತುಂಬಿದ ಜೀವಿತಸತ್ತೆಯೇ ಐತಿಹ್ಯಗಳು ಎನ್ನಬಹುದು. ಅನುಭೂತಿಯ ಆಳವನ್ನು ಹೆಚ್ಚಿಸುವಲ್ಲಿ ಯಾಥಾರ್ಥ್ಯದ ಸಾಂದ್ರವೂ ಉದಾತ್ತವೂ ಆದ ಮಾನಗಳನ್ನು ಬಳಸಿಕೊಂಡು ಐತಿಹ್ಯಗಳು ತಮ್ಮದೇ ಮಾರ್ಗಗಳನ್ನು ಕಂಡುಕೊಂಡಿವೆ. ಮನುಷ್ಯನ ಅಬೋಧಮನಸ್ಸಿನ ಆದಿರೂಪಗಳೂ ಪುರಾಪ್ರತೀಕಗಳೂ ಇಲ್ಲಿ ಜಾಗೃದವಸ್ಥೆಯೊಂದಿಗೆ ಕೂಡಿಕೊಳ್ಳುತ್ತವೆ. ಅವುಗಳನ್ನು ಯುಕ್ತಿಪರವಾಗಿ ವ್ಯಾಖ್ಯಾನಿಸುವುದು ತರವಲ್ಲ; ಸಾಧ್ಯವೂ ಅಲ್ಲ. ಅಂತಹ ಆದಿರೂಪಗಳಿಗೂ ಪ್ರತೀಕಗಳಿಗೂ ಮಲಯಾಳಂ ಬರವಣಿಗೆಯಲ್ಲಿ ರೂಪುಕಡೆದ ಐತಿಹ್ಯಮಾಲೆ ಸೋಮದೇವನ ‘ಕಥಾಸರಿತ್ಸಾಗರ’ಕ್ಕೆ ಸಮಾನವಾದ ಗ್ರಂಥವಾಗಿದೆ. ಅದರಿಂದ ಕೆಲವು ಕಥೆಗಳನ್ನು ಆಯ್ದು ಕನ್ನಡಿಸಲು ಇಲ್ಲಿ ಪ್ರಯತ್ನಿಸಲಾಗಿದೆ.
Reviews
There are no reviews yet.