Description
ಆದಿಮ ಕಾಲದಿಂದ ಹಿಡುದು ಇತ್ತೀಚಿನವರೆಗಿನ ಕಲಾವಿಕಾಸದಲ್ಲಿ ಕಂಡುಬರುವ ವಿವಿಧ ಪಂಥಗಳ, ಶೈಲಿಗಳ ಕಲಾಕೃತಿಗಳನ್ನು ಪರಿಶೀಲಿಸುವ ಜೊತೆಜೊತೆಗೇ ಪ್ರಮುಖ ಕಲಾವಿದರನ್ನೂ ಪರಿಚಯಮಾಡಿಕೊಡುವ, ಕಲೆಯನ್ನು ಕುರಿತು, ಅದರ ವಿಧಾನಗಳನ್ನು ಕುರಿತು, ಅದರ ತಂತ್ರವನ್ನು ಕುರಿತು ವಿಶೇಷ ಬೆಳಕನ್ನು ಚೆಲ್ಲುವ, ಎಲ್ಲಕ್ಕಿಂತ ಮಿಗಿಲಾಗಿ ಓದುಗರನ್ನು ‘ನೋಡು’ವಂತೆ ಪ್ರೇರೇಪಿಸುವ ಅಪರೂಪದ ಪುಸ್ತಕ ಇದು. ಕಲೆಯ ಬಗ್ಗೆ ಇಷ್ಟು ಒಳನೋಟಗಳುಳ್ಳ, ಕಲಾಸಂಪತ್ತನ್ನು ಅರ್ಥಮಾಡಿಸಿ, ಅದರ ಗುಣಗ್ರಹಣಕ್ಕೆ ಹಾದಿಗಳನ್ನು ಮಾಡಿಕೊಡುವ ಇಂಥ ಇನ್ನೊಂದು ಪುಸ್ತಕವನ್ನು ನಾನು ಕಲ್ಪಿಸಿಕೊಳ್ಳುವುದೂ ಸಾಧ್ಯವಿಲ್ಲ.
ಇಲ್ಲ ಕಲೆಯನ್ನೂ ಮನುಷ್ಯನಿರ್ಮಿತವೆಂದೇ ಬಗೆದು ಅದನ್ನು ಕಲಾವಿದರಲ್ಲದ ಇತರ ಜನರಿಗೆ ಸಾಧ್ಯವಾದಷ್ಟು ಮಟ್ಟಿಗೆ ಪರಿಚಯಿಸಿ ಅವರ ಅಬಿರುಚಿಯನ್ನು ಎತ್ತರಿಸಬೇಕೆಂಬ ಕೆಲಸವನ್ನು ಹೀಗೆ ಯಶಸ್ವಿಯಾಗಿ ಮಾಡಬಹುದೆಂಬುದಕ್ಕೆ ‘ಅನುಕ್ತ’ ಎಂಬ ಈ ಪುಸ್ತಕವೇ ಸಾಕ್ಷಿ…
ರವಿಕುಮಾರ್ ಸ್ವತಃ ಒಬ್ಬ ಸಮರ್ಥ ಕಲಾವಿದರು. ಆದ್ದರಿಂದ ಅವರ ಈ ಪುಸ್ತಕಕ್ಕೆ ಒಂದು ಬಗೆಯ ಅಧಿಕೃತತೆ (ಅಥೆಂಟಿಸಿಟಿ) ಪ್ರಾಪ್ತವಾಗಿದೆ. ಇಲ್ಲಿನ ಪುಟಪುಟದಲ್ಲೂ ಚಿತ್ರ, ಶಿಲ್ಪಗಳ ಛಾಯಾಚಿತ್ರಗಳಿದ್ದು ಅವು ಕಲೆಯ ಇತಿಹಾಸ, ರಾಜಕೀಯ ವಿದ್ಯಮಾನ, ಪ್ರಸ್ತುತ ಜೀವನ, ಕಲಾ ಚಳವಳಿ, ಶೈಲಿಯ ವೈವಿಧ್ಯ ಮೊದಲಾದುವುಗಳನ್ನು ಮನಮುಟ್ಟುವಂತೆ ಸ್ಪಷ್ಟಪಡಿಸುವ ಕನ್ನಡಿಗಳಾಗಿವೆ.
-ಎಸ್. ದಿವಾಕರ್
(ಮುನ್ನುಡಿಯಿಂದ)
Reviews
There are no reviews yet.