Description
ಕನಕ ಹಾ.ಮ. ಅವರ ೫೦ ಕವನಗಳ ಸಂಕಲನ ಇದು. ಈ ಸಂಕಲನದ ಒಂದು ಪದ್ಯ ಹೀಗಿದೆ:
ಕವಿತೆ
ಸದ್ದಿಲ್ಲದೇ ಬರುವ ಕಾಮಿ ಬೆಕ್ಕು
ಕದ್ದು ಕುಡಿಯುವುದು ಹಾಲು
ಈಗ ಹೊಸಿಲ ಬಿಳೀ ಬಿಸಿಲ ಕೋಲಿನ ಮೇಲೆ ಕುಳಿತು
ಮೂತಿ ಉದ್ದಿ ಉದ್ದಿ ಒಯ್ಯಾರ
ಕಣ್ಣ ತುದಿಯ ಜೊಂಪು, ಕೊನರುವ ಆಲಸ್ಯ
ಹಿಡಿಯಹೊರಟರೆ ಕೆಲವೊಮ್ಮೆ
ಬಾಲದ ತುದಿ, ಕಿವಿ ಮಾತ್ರ ಕೈಗೆ ಸಿಕ್ಕಿ
ನುಣುಚಿ ಜಾರುವ ಬಿನ್ನಾಣಗಿತ್ತಿ
ಇಂದು ಹಿಡಿಯಲೇಬೇಕು
ಇಡಿಯಾಗಿ ಹಿಡಿದು ತೊಡೆಯ ಮೇಲೇರಿಸಿ
ನುಣುಪು ಮೈಯ ಸವರುತ್ತಾ
ತಟ್ಟಿ ಮಲಗಿಸಬೇಕು
Reviews
There are no reviews yet.