ಭವಭೂತಿಯ ಭಾವಚಿತ್ರಗಳು

Category: , , , , ,

330.00

Out Of Stock
Number of pages

254

Year of Publication

2024

Author

ಅಕ್ಷರ ಕೆ.ವಿ.

Publisher

ಬಹುವಚನ

Out of stock

Description

ಭವಭೂತಿಯ ನಾಟಕಗಳ ರಚನೆ, ಭಾಷೆ ಮತ್ತು ದರ್ಶನಗಳನ್ನು ಆಪ್ತವಾಗಿ, ಸೂಕ್ಷ್ಮವಾಗಿ, ಸಮರ್ಥವಾಗಿ ತೆರೆದು ತೋರಿಸುವ ಈ ಪುಸ್ತಕವು ಭವಭೂತಿಯನ್ನು ಕುರಿತು ಯಾವುದೇ ಭಾಷೆಯಲ್ಲಿ ಬಂದ ಅತ್ಯುತ್ತಮ ಪುಸ್ತಕಗಳ ಸಾಲಿಗೆ ನಿಸ್ಸಂದೇಹವಾಗಿ ಸೇರುವಂತಿದೆ. ಈಗಾಗಲೇ ನಡೆದಿರುವ, ವಿಶ್ಲೇಷಣೆ, ವ್ಯಾಖ್ಯಾನ, ಚರ್ಚೆಗಳನ್ನು ಪರಿಶೀಲಿಸಿ ಅವುಗಳಿಗೆ ಹೊಸ ಹೊಳಹುಗಳನ್ನು ಸೇರಿಸಿದೆ; ಭವಭೂತಿಯ ನಾಟಕಗಳನ್ನು ವಿಶ್ವನಾಟಕ ಮತ್ತು ರಂಗಪರಂಪರೆಯ ವಿಶಾಲ ಭಿತ್ತಿಯಲ್ಲಿ ಇಟ್ಟು ಅವುಗಳ ವಿಶಿಷ್ಟತೆ-ಅನನ್ಯತೆಗಳನ್ನು ಕಾಣಿಸಿದೆ. ಸ್ವತಃ ಓರ್ವ ಪ್ರಸಿದ್ಧ ರಂಗಕರ್ಮಿಯಾಗಿರುವ ಅಕ್ಷರ ಅವರು ಈ ನಾಟಕಗಳ ರಂಗಸಾಧ್ಯತೆಗಳನ್ನು ಮಾತ್ರ ಗಮನದಲ್ಲಿಟ್ಟುಕೊಳ್ಳದೆ ಪುರಾಣ, ಕಾವ್ಯ ಮೀಮಾಂಸೆ ಮತ್ತು ದರ್ಶನ ಪರಂಪರೆಗಳ ಹಿನ್ನೆಲೆಯಲ್ಲಿ ಭವಭೂತಿಯ ಕೃತಿಗಳನ್ನು ಚರ್ಚಿಸಿರುವುದರಿಂದ ಈ ಪುಸ್ತಕಕ್ಕೆ ಒಂದು ಬಗೆಯ ತಾತ್ವಿಕ ಘನತೆ ತಾನಾಗಿ ಧಾರಣವಾಗಿದೆ. ವಿಮರ್ಶೆಯ ಪುಸ್ತಕ ಕೂಡ ಎಂಥ ಉಲ್ಲಾಸದಾಯಕ ಓದನ್ನು ನೀಡಬಲ್ಲುದು ಎಂಬುದಕ್ಕೆ ಅಕ್ಷರ ಅವರ ಈ ಬರಹವೇ ಸಾಕ್ಷಿಯಾಗಿದೆ.

ಟಿ.ಪಿ.ಅಶೋಕ

Reviews

There are no reviews yet.

Be the first to review “ಭವಭೂತಿಯ ಭಾವಚಿತ್ರಗಳು”

Your email address will not be published. Required fields are marked *