ಹುಡುಗನ ಹುಟ್ಟು

Category: , , ,

240.00

47 In Stock
Number of pages

178

Year of Publication

2026

Author

ಕಾಳಿದಾಸ

Translator / Editor

ಅಕ್ಷರ ಕೆ.ವಿ.

47 in stock

Description

ಹುಟ್ಟಿನ ಹುಟ್ಟು ಮತ್ತು ಕಾವ್ಯದ ಗುಟ್ಟು – ಇದು ಪ್ರಾಜ್ಞ ಮನದ ಕೆ ವಿ ಅಕ್ಷರ ಅವರು `ಕುಮಾರಸಂಭವ’ದ ಅನುವಾದಕ್ಕೆ ಕೊಟ್ಟ ಒಗಟಿನಂಥ ಶೀರ್ಷಿಕೆ. ಇಂದಿಗೂ ಚಾಲ್ತಿಯಲ್ಲಿರುವ `ವಾಗರ್ಥ’ ಎಂಬ ಅಪೂರ್ವ ವಿಚಾರ ಮೊದಲಿಗೆ ಕಾಣಿಸಿಕೊಂಡಿದ್ದು ಕಾಳಿದಾಸನ ರಘುವಂಶ ಮಹಾಕಾವ್ಯದ ಆದಿಮಂಗಲ ಪದ್ಯದಲ್ಲಿ. ರಾಜತ್ವ ಚಿಂತನೆಯ ವಸ್ತುವಿಗೆ ಅಲ್ಲಿ ಹೆಚ್ಚಿನ ಇಂಬು ದೊರೆತಿದ್ದರಿಂದಲೊ ಏನೊ, ತನ್ನದೇ ಕಾವ್ಯತತ್ತ್ವ ಸಿದ್ಧಿಯ ಪೂರ್ಣ ತೃಪ್ತಿ ಅಲ್ಲಿ ಆತನಿಗೆ ಸಿಕ್ಕಿಲ್ಲದಿರಬಹುದು. ವಸ್ತು ಮತ್ತು ಅಭಿವ್ಯಕ್ತಿಯ ಕಾವ್ಯ ದಾಂಪತ್ಯದ ಅನ್ಯೋನ್ಯ ಮಿಲನ ಅಥವಾ ಮೇಳ ಸಾಧಿತವಾದಾಗಲೇ ಕಾಳಿದಾಸನಂಥ ಕವಿಯ ಮೇರು ಮನಕ್ಕೆ ಸಾರ್ಥಕತೆಯ ತಣಿವು.
ಮಾತು – ವಾಕ್ ಎಂಬುದಕ್ಕೆ ವಸ್ತು ಎಂಬ ಅರ್ಥವೂ ಇದೆ. ವಸ್ತು ಪ್ರಚೋದನೆ ಇಲ್ಲದೆ ಮಾತಿನ ಪ್ರಪಂಚ ಇಲ್ಲ ತಾನೆ. ವಾಗ್-‌ಅರ್ಥ ಪ್ರತಿನಿಧಿಗಳಾದ ಆದಿಮ ದಂಪತಿಗಳ ಏಕಾಕಾರ ಪ್ರತಿಮೆಯೇ ಇಲ್ಲಿ ಕಾವ್ಯದ ನಾಯಕ ಮತ್ತು ನಾಯಕಿ. ಎಂಟೇ ಸರ್ಗದ ಪುಟ್ಟ ಮಹಾಕಾವ್ಯ `ಕುಮಾರಸಂಭವ’ದಿಂದ ಕವಿಯ ಮನ ತಣಿದ ಕ್ಷಣ ಕಾವ್ಯ ತಾನಾಗಿ ನಿಲುಗಡೆ ಪಡೆದಿದ್ದಿರಬೇಕು. ಈ ಘನ ಕೃತಿಯ ಆಸ್ವಾದಕ್ಕೆ ಅನುಕೂಲವಾದ ಇಂದಿನ ಕನ್ನಡದ ಚೆಲುವಿನ ನಡೆ, ಮಾತ್ರಾ ಛಂದದ ಬಂಧಗಳಲ್ಲಿ ರೂಪ ತಾಳಿದ ಮಹತ್ವದ ಅನುವಾದ ಇದು.
– ಶ್ರೀರಾಮ ಭಟ್ಟ

Reviews

There are no reviews yet.

Be the first to review “ಹುಡುಗನ ಹುಟ್ಟು”

Your email address will not be published. Required fields are marked *