Description
ಕನ್ನಡ ಕವಿತೆಗಳನ್ನು ಕುರಿತ ಐವತ್ತು ಅರ್ಥಪೂರ್ಣ ಲೇಖನಗಳ ಈ ಸಂಗ್ರಹವು ಕಾವ್ಯಸಹೃದಯತೆಯ ಅತ್ಯುತ್ತಮ ಮಾದರಿಗೆ ಒಂದು ನಿದರ್ಶನವೆಂಬಂತಿದೆ. ಕವಿತೆಗಳ ಸಾಲುಸಾಲುಗಳ ಮೇಲೆ ಬೆರಳಿಟ್ಟುಕೊಂಡು ಓದಬಲ್ಲ ಏಕಾಗ್ರತೆ, ಕವಿತೆ-ಕವಿತೆಗಳ ನಡುವಣ ಅಂತರ್-ಪಠ್ಯೀಯತೆಯನ್ನು ಶೋಧಿಸುವ ಪ್ರತಿಭೆ, ಒಟ್ಟಾರೆ ಆಧುನಿಕ ಕನ್ನಡ ಕಾವ್ಯದ ಕರುಳು ಬಳ್ಳಿಯ ಸಂಕೀರ್ಣ ಜಾಲದ ಸೂಕ್ಷ್ಮ ತಿಳುವಳಿಕೆಗಳಿಂದ ಹದವಾಗಿ ನೇಯ್ದ ಇಲ್ಲಿನ ಬರಹಗಳು ಸಮಕಾಲೀನ ಕಾವ್ಯ ವಿಮರ್ಶೆಗೆ ಹೊಸ ಆಯಾಮಗಳನ್ನು ಜೋಡಿಸುವಂತಿವೆ. ಕವಿತೆಯನ್ನು ಅದರ ಭಾಷಿಕ ನೆಲೆಯಲ್ಲಿ ಆಸ್ವಾದಿಸುತ್ತಲೇ ಅದನ್ನು ಸಂಸ್ಕೃತಿಯ ಮುಖ್ಯ ಜಿಜ್ಞಾಸೆಗಳೊಂದಿಗೆ ಬೆಸೆಯುವ ಮಹತ್ವಾಕಾಂಕ್ಷೆ ಇಲ್ಲಿ ಕಂಡುಬರುತ್ತದೆ. ಹಲವು ಪಂಥ ಪೀಳಿಗೆಗಳಿಗೆ ಸೇರಿದ ಕವಿತೆಗಳೊಂದಿಗೆ ಟಿ.ಪಿ.ಅಶೋಕರು ನಡೆಸಿರುವ ಅನುಸಂಧಾನವು ಹೊಸ ಓದುಗರಲ್ಲಿ ಕಾವ್ಯದ ಬಗ್ಗೆ ಉತ್ಸಾಹ ಹುಟ್ಟಿಸುವಂತಿದೆ; ಸಹವಿಮರ್ಶಕರನ್ನು ಹೊಸ ಚರ್ಚೆಗಳಿಗೆ ಆಹ್ವಾನಿಸುವಂತಿದೆ.
Reviews
There are no reviews yet.