Description
ಡಾ. ಟಿಆರೆಸ್ ಶರ್ಮರು ತಾವು ಎತ್ತಿಕೊಂಡ ಸಾಹಿತ್ಯಕೃತಿಗಳನ್ನು ಪಟ್ಟು ಹಿಡಿದು ಆಮೂಲಾಗ್ರವಾಗಿ ವಿಶ್ಲೇಷಿಸುವ ಪ್ರವೃತ್ತಿಯ ವಿಮರ್ಶಕರು. ಇವರು, ಇಂಗ್ಲಿಷ ಸಾಹಿತ್ಯ ಕುರಿತ ತಮ್ಮ ಅನೇಕ ಪ್ರಬಂಧಗಳಲ್ಲಿ ಆಂಗ್ಲ ವಿಮರ್ಶಕರು ಕಾಣದ ಹೊಸ ಒಳನೋಟಗಳನ್ನು ಕಂಡು ಕೃತಿ ಹೊಸದಾಗಿ ಬೆಳಗುವಂತೆ ಮಾಡಿದ್ದಾರೆ. ಐರೊಪ್ಯ ಸಾಹಿತ್ಯವನ್ನು ಆಳವಾಗಿ ಅಧ್ಯಯನ ಮಾಡಿದ ಡಾ. ಟಿಆರೆಸ್ ಶರ್ಮರು, ತಮಿಳು ಕನ್ನಡ ಮತ್ತು ಸಂಸ್ಕೃತಗಳು ಭಾಷಾ ಸಂಸ್ಕೃತಿಗಳಾಗಿ ಮುಖಾಮುಖಿಯಾಗುವ ಸಂದರ್ಭದ ಚರಿತ್ರೆಯನ್ನು ಈಗ ಬರೆದಿದ್ದಾರೆ. ಕನ್ನಡ ವಿಮರ್ಶೆಯನ್ನು ಶ್ರೀಮಂತಗೊಳಿಸಿ ಹೊಸ ನೆಲೆಯಲ್ಲಿ ಹೊಸ ದಿಕ್ಕಿನಲ್ಲಿ ಚಲಿಸುವಂತೆ ಪ್ರೇರೇಪಿಸುವ ಕೃತಿ ಇದಾಗಿದೆ.
-ಡಾ. ಯು. ಆರ್. ಅನಂತಮೂರ್ತಿ
Reviews
There are no reviews yet.