ಮದರ್ ಕರೇಜ್ ಮತ್ತು ಅವಳ ಮಕ್ಕಳು

Category: , , ,

160.00

50 In Stock
Number of pages

96

Year of Publication

2025

Author

ಬರ್ಟೋಲ್ಟ್ ಬ್ರೆಖ್ಟ್

Translator / Editor

ಅಕ್ಷರ ಕೆ.ವಿ.

50 in stock

Description

ಪರಿಚಿತ ಸಂಗತಿಯೊಂದನ್ನು ಅಪರಿಚಿತವೆಂಬಂತೆ ತೋರಿಸುವ ಮೂಲಕ ಹೊಸದೊಂದು ನೋಟವನ್ನೇ ತೆರೆಸುವುದು ಒಳ್ಳೆಯ ನಾಟಕ ಮತ್ತು ರಂಗಭೂಮಿಗಳ ಗುರಿ – ಎಂಬುದು ಬರ್ಟೋಲ್ಟ್ ಬ್ರೆಖ್ಟ್‌ನ ಸುಪ್ರಸಿದ್ಧ ನಿಲುವು. ಇದುವರೆಗೆ ಬಂದ ಈ ಜಗತ್ತಿನ ಯುದ್ಧವಿರೋಧಿ ನಾಟಕಗಳಲ್ಲೇ ಅತ್ಯುತ್ತಮವಾದದ್ದು ಎಂದು ಕರೆಯಲಾಗಿರುವ ಈ `ಮದರ್ ಕರೇಜ್…’ ಎಂಬ ನಾಟಕವೂ ಅಂಥದೇ ಕೆಲಸ ಮಾಡುತ್ತದೆ. ಯುದ್ಧಗಳು ರಾಷ್ಟ್ರಗಳ ನಡುವೆ, ಧರ್ಮಗಳ ನಡುವೆ, ಸಮುದಾಯಗಳ ನಡುವೆ ಜರುಗುವ ಸಂಘರ್ಷ ಎಂಬುದು ಮೇಲ್ನೋಟಕ್ಕೆ ಕಾಣಿಸುವ ತಿಳುವಳಿಕೆಯಾದರೆ, ಈ ನಾಟಕವು ಹಾಗಲ್ಲವೆಂದೂ, ಮೂಲತಃ ಯುದ್ಧಗಳು ರಾಷ್ಟ್ರ-ಧರ್ಮ-ಸಮುದಾಯಗಳಿಗೆ ಲಾಭದಾಯಕವಾದ ಒಂದು ಅತ್ಯುಪಯುಕ್ತ ವಹಿವಾಟು ಎಂದೂ ಕಾಣಿಸುತ್ತದೆ. ತಳ್ಳುಗಾಡಿಯ ಅಂಗಡಿಯೊಂದರ ಜತೆ ರಣರಂಗದಲ್ಲಿ ಸಂಸಾರಸಮೇತ ಸಾಗುತ್ತ, ಯುದ್ಧ ನಿಲ್ಲದಿರಲಿ ಎಂದು ಹಾರೈಸುವ ಒಬ್ಬ ಮುದುಕಿ ಈ ನಾಟಕದ ಕೇಂದ್ರ ಪ್ರತಿಮೆ; ಆಕೆ ತನ್ನೆಲ್ಲ ಸಂಸಾರವನ್ನೇ ಕಳೆದುಕೊಂಡರೂ ತನ್ನ ದುರಾಸೆಯನ್ನು ಮಾತ್ರ ಬಿಡದೆ ಮುನ್ನುಗ್ಗುವುದು ಈ ನಾಟಕದ ಕೇಂದ್ರ ವ್ಯಂಗ್ಯ. ಯುದ್ಧ ನಿಜವಾಗಿ ಹುಟ್ಟುವುದು ಮನುಷ್ಯರ ಮನಸ್ಸಿನೊಳಗೆ ಎಂಬ ದಾರ್ಶನಿಕ ನೋಟವನ್ನು ಇಹಲೋಕದ ಭೌತಿಕ ಸಂಗತಿಗಳ ಚಕಮಕಿಯಲ್ಲೇ ಕಾಣುವಂತೆ ಮಾಡುವುದು ಈ ನಾಟಕದ ಮರ್ಮ.

Reviews

There are no reviews yet.

Be the first to review “ಮದರ್ ಕರೇಜ್ ಮತ್ತು ಅವಳ ಮಕ್ಕಳು”

Your email address will not be published. Required fields are marked *