Description
ಪ್ರಸಿದ್ಧ ನಟ, ನಿರ್ದೇಶಕ, ಗುರು ಸ್ತಾನಿಸ್ಲಾವ್‌ಸ್ಕಿಯ ಈ ಅಭಿನಯ ಶಾಸ್ತ್ರದ ಪುಸ್ತಕವು ಜಗದ್ವಿಖ್ಯಾತವಾದದ್ದು. ಪ್ರಾಯಶಃ, ಜಗತ್ತಿನಲ್ಲೇ ಪ್ರಪ್ರಥಮವಾಗಿ ಅಭಿನಯವೆಂಬ ಅಮೂರ್ತ ಪ್ರಕ್ರಿಯೆಯನ್ನು ವೈಜ್ಞಾನಿಕವಾಗಿ ವಿವೇಚಿಸಿ, ‘ಅಭಿನಯ ಶಾಸ್ತ್ರ’ಕ್ಕೆ ಗಟ್ಟಿಯಾದ ಅಸ್ತಿವಾರ ಹಾಕಿಕೊಟ್ಟವನು ಸ್ತಾನಿಸ್ಲಾವ್‌ಸ್ಕಿ. ಆದ್ದರಿಂದಲೇ ೨೦ನೆಯ ಶತಮಾನದ ಆದಿಭಾಗದಲ್ಲಿ ಬಂದಂಥ ಈ ಪುಸ್ತಕವನ್ನು ಇವತ್ತಿಗೂ ಜಗತ್ತಿನ ಎಲ್ಲ ಭಾಗಗಳ ಅಭಿನಯಕಾರರು ಮತ್ತು ರಂಗಕರ್ಮಿಗಳು ತಮ್ಮ ಶಾಸ್ತ್ರಗ್ರಂಥವೆಂದು ಪರಿಗಣಿಸಿಕೊಂಡುಬಂದಿದ್ದಾರೆ; ಇವತ್ತಿಗೂ ಜಗತ್ತಿನ ಬಹುತೇಕ ರಂಗಶಿಕ್ಷಣಶಾಲೆಗಳು ಈ ಪುಸ್ತಕದಲ್ಲಿ ಸೂಚಿತವಾಗುವ ‘ಪದ್ಧತಿ’ಯನ್ನೇ ಅಭಿನಯ ಶಿಕ್ಷಣದ ಅಡಿಗಲ್ಲಾಗಿ ಇಟ್ಟುಕೊಂಡಿವೆ. ಆದಕಾರಣ, ರಂಗಕಲೆಯನ್ನು ಕುರಿತು ಆಸಕ್ತಿಯಿರುವಂಥವರೆಲ್ಲರೂ ಓದಲೇಬೇಕಾದ ಪ್ರಮುಖ ಪುಸ್ತಕಗಳಲ್ಲಿ ಇದೊಂದು.
Reviews
There are no reviews yet.