Sold out!

ಸಮಸ್ತ ಕಥೆಗಳು

SKU: 180
Category: , , ,

550.00

Out Of Stock
Weight 0.00000000 g
Number of pages

552

Year of Publication

1st Edition- 2015, 2nd Edition- 2021

Author

ಯು.ಆರ್. ಅನಂತಮೂರ್ತಿ

Sold out!

Description

ಯು.ಆರ್. ಅನಂತಮೂರ್ತಿಯವರು ತಮ್ಮ ಜೀವಿತಾವಧಿಯಲ್ಲಿ ಬರೆದ ಎಲ್ಲ ಕಥೆಗಳ ಸಂಗ್ರಹ ಇದು. ಹಿಂದೆ ಪ್ರಕಟವಾಗಿದ್ದ ‘ಐದು ದಶಕದ ಕಥೆಗಳು’ ಸಂಕಲನದ ಎಲ್ಲ ಕಥೆಗಳ ಜತೆಗೆ, ಅಮೇಲೆ ಪ್ರಕಟವಾದ ಕಥಾಸಂಕಲನ ಮತ್ತು ಹಿಂದೆ ಅವರು ಬರೆದು ಪ್ರಕಟಿಸದೆ ಉಳಿಸಿದ್ದ ಕಥೆಗಳ ಸಂಗ್ರಹವೂ ಸೇರಿರುವುದರಿಂದ, ಈ ಸಂಗ್ರಹದ ಮೂಲಕ ಅನಂತಮೂರ್ತಿಯವರ ಸಮಸ್ತ ಕಥೆಗಳು ಓದುಗರಿಗೂ ಅಭ್ಯಾಸಕಾರರಿಗೂ ಲಭ್ಯವಾಗುತ್ತಿವೆ.

”…ಅನಂತಮೂರ್ತಿಯವರ ಪ್ರತಿಭೆ ಪ್ರಥಮವರ್ಗದ್ದು ಎಂದು ಈ ಸಂಕಲನ ಸಿದ್ಧಪಡಿಸುತ್ತದೆ.  ಸೂಕ್ಷ ಬುದ್ಧಿ, ವಿಶಾಲವೂ ಪರಿಶುದ್ಧವೂ ಆದ ಅಭಿರುಚಿ, ಸಾಹಿತ್ಯ ವಿಚಾರಗಳಲ್ಲಿ ತೂಕವುಳ್ಳ ಮಾತನ್ನಾಡಬಲ್ಲಂಥ ಧೀರ ವಿಮರ್ಶ ಶಕ್ತಿ, ಕಲ್ಪನೆ, ಬಹುಶ್ರುತತ್ವ – ಇವು ಯಥೇಚ್ಛವಾಗಿರುವ ಈ ಲೇಖಕರಲ್ಲಿ ನನಗೆ ವೈಯಕ್ತಿಕವಾಗಿ ಹೇಳಬೇಕಾದರೆ ಸ್ನೇಹ ಮಾತ್ರವಲ್ಲ ಗೌರವವೂ ಉಂಟು.  ಎಲ್ಲಕ್ಕಿಂತ ಹೆಚ್ಚಾಗಿ ಇವರಲ್ಲಿ ಕಂಡುಬರುವ ಆತ್ಮವಿಮರ್ಶ ಶಕ್ತಿ ದಂಗು ಬಡಿಸುವಂಥದು.  ಅನಂತಮೂರ್ತಿಯವರ ಜೊತೆ ನಾನು ಕಾವ್ಯ ಸಾಹಿತ್ಯ ವಿಚಾರವಿನಿಮಯದಲ್ಲಿ ಅತ್ಯಂತ ಸಂತೋಷದಾಯಕವಾದ ಅನೇಕ ಗಂಟೆಗಳನ್ನು ಕಳೆದಿದ್ದೇನೆ.  ಸಾಹಿತ್ಯ ವಿಷಯದಲ್ಲಿ ಇವರ ಅಭಿಪ್ರಾಯಗಳಿಗೆ ನಾನು ಬಹಳ ಬೆಲೆ ಕೊಡುತ್ತೇನೆ.  ಇಂಥ ಲೇಖಕರ ವಿಷಯದಲ್ಲಿ ಒಂದು ಮಾತನ್ನು ಮಾತ್ರ ಧೈರ್ಯವಾಗಿ ಹೇಳಬಹುದು; ಇನ್ನೂ ಇನ್ನೂ ಉತ್ತಮವಾಗಿ ಇನ್ನಷ್ಟು ಶ್ರೀಮಂತ ಸಾಹಿತ್ಯವನ್ನು ಇವರು ಸೃಷ್ಟಿಸಬಹುದು; ಒಂದು ಪಕ್ಷ ಹಾಗಾಗದೇ ಹೋದರೂ ಈ ಲೇಖಕ ಸಾಹಿತ್ಯವಲ್ಲದ್ದನ್ನು ಎಂದೂ ಬರೆಯಲಾರ; ಯಾವ ಕೀರ್ತಿ ಪ್ರತಿಷ್ಠೆಯ ಆಕಾಂಕ್ಷೆಯಿಂದಲೂ ಅಪ್ರಾಮಾಣಿಕ ಕೃತಿರಚನೆಗೆ ಕೈ ಹಾಕಲಾರ.  ಇಂಥ ಪ್ರಾಮಾಣಿಕ ಸಾಹಿತಿಗಳ ಸಂಖ್ಯೆ ಬಹಳ ಕಡಿಮೆ.  ಅಂಥ ಕೆಲವೇ ಮಂದಿ ಕಲೆಗಾರರ ಪಂಕ್ತಿಯಲ್ಲಿ ಅನಂತಮೂರ್ತಿ ಆಗಲೇ ಸ್ಥಾನಗಳಿಸಿದ್ದಾರೆ.  ಅಲ್ಲಿಂದ ಅವರಿಗೆ ಚ್ಯುತಿಯಿಲ್ಲ.”
– ಗೋಪಾಲಕೃಷ್ಣ ಅಡಿಗ
(ಅನಂತಮೂರ್ತಿಯವರ ಮೊದಲ ಕಥಾಸಂಕಲನದ ಮುನ್ನುಡಿಯಿಂದ)

Reviews

There are no reviews yet.

Be the first to review “ಸಮಸ್ತ ಕಥೆಗಳು”

Your email address will not be published. Required fields are marked *