Description
ಈ ನಾಟಕವು ಮೇಲ್ನೋಟಕ್ಕೆ ಒಂದು ಸರಳ ಸಾಂಸಾರಿಕ ಹಾಸ್ಯ ನಾಟಕದಂತೆ, ಗುರುತುಗಳು ಬದಲಾದ ಗಡಿಬಿಡಿಯಿಂದ ಉದ್ಭವಿಸುವ ಒಂದು ಸಿದ್ಧ ಪ್ರಹಸನವೆಂಬಂತೆ ಕಾಣುತ್ತದೆ. ಆದರೆ, ತುಸು ಪರಿಶೀಲಿಸಿ ನೋಡಿದರೆ, ಇದು ಮೇಲ್ನೋಟಕ್ಕೆ ಕಾಣುವಂತೆ, ಕೇವಲ ನಗಿಸುವುದನ್ನೇ ಮೂಲಬಂಡವಾಳ ಮಾಡಿಕೊಂಡು ‘ಅ-ರಾಜಕೀಯ’ ಕೃತಿಯೂ ಅಲ್ಲವೆಂಬುದನ್ನು ನಮ್ಮ ಗಮನಕ್ಕೆ ಬರುತ್ತದೆ. ನಿಜವಾಗಿ ಈ ನಾಟಕವು, ಸಾದಾ ರಾಜಕೀಯ ನಾಟಕಗಳಿಹಿಂತ ಭಿನ್ನವಾದ ಇನ್ನೊಂದು ರೀತಿಯ ರಾಜಕಾರಣವನ್ನು ಕೇಂದ್ರೀಕರಿಸಿಕೊಂಡಿದೆ- ಅದು ಸಾಮಾಜಿಕ ವ್ಯಾಪ್ತಿಯ ವಿಶಾಲ ರಾಜಕಾರಣವಲ್ಲ; ಕೌಟುಂಬಿಕ ವ್ಯಾಪ್ತಿಯ ವೈಯಕ್ತಿಕ ರಾಜಕಾರಣ. ಈ ರಾಜಕಾರಣವು ಸಮಾಜ, ದೇಶ, ಅಧಿಕಾರ ಮೊದಲಾದ ವಿಷಯಗಳ ಬಗ್ಗೆ ಸೂಕ್ಷ್ಮದರ್ಶಕದಲ್ಲಿಟ್ಟುಕೊಂಡು ಆ ಮೂಲಕವೇ ವಿಶಾಲವಾದ ಎಲ್ಲ ಸಂಗತಿಗಳ ಪ್ರತಿಫಲವನ್ನು ಗ್ರಹಿಸಲು ಹೊರಡುತ್ತದೆ.
Reviews
There are no reviews yet.