Description
ಬಿಮಲ್‌ಕೃಷ್ಣ ಮತಿಲಾಲ್ ಅವರು ಭಾರತದ ತತ್ತ್ವಶಾಸ್ತ್ರವನ್ನು ಕುರಿತು ಆಳವಾದ ಅಧ್ಯಯನ ನಡೆಸಿದ ಪಂಡಿತರು; ಅಂಥ ಅಧ್ಯಯನದ ಫಲಗಳನ್ನು ಪಾಶ್ಚಿಮಾತ್ಯ ತತ್ತ್ವಶಾಸ್ತ್ರದೊಂದಿಗೂ ಸಮೀಕರಿಸಿ, ತುಲನೆ ಮಾಡಿ ಹಲವಾರು ಮಹತ್ತ್ವದ ಗ್ರಂಥಗಳನ್ನು ಅವರು ರಚಿಸಿದ್ದಾರೆ. ಅಂಥ ಗ್ರಂಥಗಳಲ್ಲೊಂದು ಪ್ರಸ್ತುತ ಪುಸ್ತಕ.ಈ ಪುಸ್ತಕವು ಭಾರತದ ತತ್ತ್ವಶಾಸ್ತ್ರದಲ್ಲಿ ಭಾಷೆಯನ್ನು ಕುರಿತಂತೆ ನಡೆದ ಜಿಜ್ಞಾಸೆಗಳ ಒಂದು ವಿಮರ್ಶಾತ್ಮಕ ಸಮೀಕ್ಷೆಯನ್ನು ನಡೆಸುತ್ತದೆ. ಪುಸ್ತಕದ ಮೊದಲ ಭಾಗವು ಶಬ್ದ, ಅರ್ಥ, ನಾಮ, ವಸ್ತು, ಕಾರಕ ಮೊದಲಾದ ಕೆಲವು ಪ್ರಮುಖ ಪರಿಕಲ್ಪನೆಗಳ ಮೇಲೆ ಕೇಂದ್ರೀಕರಿಸುತ್ತದೆ; ಎರಡನೆಯ ಭಾಗದಲ್ಲಿ ಸ್ಫೋಟಸಿದ್ಧಾಂತವೇ ಮೊದಲಾದ ಭಾರತೀಯ ಭಾಷಾಶಾಸ್ತ್ರದ ಪ್ರಮುಖ ಧಾರೆಗಳನ್ನು ವಿಶ್ಲೇಷಿಸಲಾಗಿದೆ. ಜತೆಗೆ, ಪುಸ್ತಕದಾದ್ಯಂತ ಭಾರತದ ಭಾಷಾಚಿಂತನೆಗಳನ್ನು ಪಾಶ್ಚಿಮಾತ್ಯ ಸಿದ್ಧಾಂತಗಳೊಂದಿಗೆ ಹೋಲಿಸಿ ನೋಡುವ ಪ್ರಯೋಗವನ್ನೂ ಮಾಡಲಾಗಿದೆ.ಭಾಷೆ-ತತ್ತ್ವಶಾಸ್ತ್ರ-ಸಾಹಿತ್ಯದ ಆಸಕ್ತರೆಲ್ಲರಿಗೂ ಉಪಯುಕ್ತವಾಗಬಲ್ಲ ಆಕರಗ್ರಂಥ ಇದು.
Reviews
There are no reviews yet.