Sale!

ವೊಯ್‌ಜೆಕ್

SKU: 10
Category: , , , ,

66.50

16 In Stock
Weight 55.00000000 g
Number of pages

50

Year of Publication

1st Edition- 1992, 2nd Edition- 2021

Author

ಕೆ.ವಿ. ಸುಬ್ಬಣ್ಣ

eBook

https://play.google.com/store/books/details/Georg_Büchner_Woyzeck?id=UTsyEAAAQBAJ

16 in stock

Description

ಯೊಹಾನ್ ಕ್ರಿಶ್ಚಿಯನ್ ವೊಯ್‌ಜೆಕ್ ಎಂಬ ಹೆಸರಿನ ಸೈನಿಕ-ಕ್ಷೌರಿಕನೊಬ್ಬ ಅಸೂಯೆಯ ಉದ್ವೇಗದಲ್ಲಿ ತನ್ನ ಕೂಡಿಕೆಯ ಹೆಣ್ಣನ್ನು ಕೊಲೆಮಾಡಿದ. ‘ನಿಜಜೀವನ’ದ ಈ ‘ನಿಜಘಟನೆ’ಯನ್ನಾಧರಿಸಿ ಬರೆದದ್ದು ವೊಯ್‌ಜೆಕ್ ನಾಟಕ. ಸತ್ಯ ಘಟನೆಯನ್ನಾಧರಿಸಿ ಬುಶ್‌ನರ್ ಬರೆದ ಈ ನಾಟಕವು ಚಿಕಿತ್ಸಕ ದೃಷ್ಟಿಯ ನಿಖರತೆಯನ್ನುಳ್ಳದ್ದು. ಇದರ ಒಂದೊಂದು ದೃಶ್ಯವೂ ಇನ್ನೊಂದರಿಂದ ಪ್ರತ್ಯೇಕವಾದ್ದು ಎನ್ನುವ ಹಾಗೆ ಒಂದೊಂದೂ ತನ್ನದೇ ಸ್ವತಂತ್ರ್ರ ಜೀವ ಅಸ್ತಿತ್ವಗಳನ್ನುಳ್ಳದ್ದು ಎನ್ನುವ ಹಾಗೆ ಬಲು ಎಚ್ಚರಿಕೆಯಿಮ್ದ ಯೋಜಿತವಾಗಿ ರಚಿತವಾದ್ದು ಈ ನಾಟಕ.

ಬಹುಮಟ್ಟಿಗೆ ರಾಕ್ಷಸೀಯವಾಗಿಬಿಟ್ಟಿರುವ ಸಮಾಜದ ಹಿನಿಲೆಯಲ್ಲಿ ಯಾವುದನ್ನು ಸಹಜ, ಸ್ವಾಭಾವಿಕ [ಆದ್ದರಿಂದ, ಮಾನವೀಯ] ಎಂದು ಭಾವಿಸುತ್ತೇವೋ ಅಂಥದನ್ನು ಮತ್ತೆ ನೋಡಿ ಅದರ ಬಗ್ಗೆ ಪುನರಾಲೋಚಿಸಿಕೊಳ್ಳಲು ನಮ್ಮನ್ನು ಒತ್ತಾಯಿಸುತ್ತದೆ, ವೊಯ್‌ಜೆಕ್. ಯಾರು ಜಗತ್ತಿನ ಬಗ್ಗೆ ಭಿನ್ನವಾದ ದೃಷ್ಟಿಯನ್ನಿಟ್ಟುಕೊಂಡಿರುತ್ತಾರೋ, ಭಿನ್ನವಾದ ಭಾಷೆಯಲ್ಲಿ ಮಾತಾಡುತ್ತಾರೋ ಅಂಥವರನ್ನೆಲ್ಲ ನಾವು ಪಶುಗಳೆಂದು ಭಾವಿಸಿಬಿಡುತ್ತೇವಲ್ಲ, ಈ ನಮ್ಮ ರೂಢಿಗೆ ವೊಯ್‌ಜೆಕ್ ಪ್ರಶ್ನಾರ್ಥಕವಾಗಿ ನಿಂತು ನಮ್ಮನ್ನು ಚಿಂತಿಸಲು ಹಚ್ಚುತ್ತದೆ.

Reviews

There are no reviews yet.

Be the first to review “ವೊಯ್‌ಜೆಕ್”

Your email address will not be published.

No Author Found