ಯೋಜನಗಂಧಿಯ ಸ್ವಗತ

Category: , , , ,

180.00

10 In Stock
Number of pages

88

Year of Publication

2023

Author

ಸಮುದ್ಯತಾ ವೆಂಕಟರಾಮು

10 in stock

Description

ಇವತ್ತು ಕನ್ನಡದಲ್ಲಿ ಹೊಸತಾಗಿ ಕವನಗಳನ್ನು ಬರೆಯುತ್ತಿರುವವರ ನಡುವೆ ನೋಡಿದರೆ, ಸಮುದ್ಯತಾ ವೆಂಕಟರಾಮು ಅವರು ತುಸು ಪ್ರತ್ಯೇಕವಾಗಿ ನಿಂತು ಗೋಚರಿಸುತ್ತಾರೆ. ಮೊದಲನೆಯದಾಗಿ, ಅವರ ಕವನಗಳ ವಸ್ತು ಬಹುತೇಕ ಪುರಾಣಗಳ ಕಥೆ-ಪಾತ್ರ-ಸನ್ನಿವೇಶಗಳನ್ನು ತನ್ನ ಒಡಲಲ್ಲಿ ಇಟ್ಟುಕೊಂಡಿರುವಂಥದ್ದು, ಭಾಷೆಯೂ ಅದಕ್ಕೆ ಸಂವಾದಿಯಾಗಿರುವಂಥದ್ದು. ಇನ್ನು, ಪುರಾಣೇತರ ವಿಚಾರಗಳನ್ನು ಮಾತಾಡುವಾಗಲೂ ಅವರ ಸಂವೇದನೆ ಇವತ್ತಿನ ಸಂಗತಿಗಳಿಗಿಂತ ಹೆಚ್ಚಾಗಿ ಪುರಾಣಗಳ ಸ್ತರಕ್ಕೆ ಸೇರುವ ಬೇರೆಯೇ ಬಗೆಯ ವಾಸ್ತವದ್ದು. ಇಲ್ಲಿಯ ಕವನಗಳು ಒಂದೊಂದೇ ಭಾವದ ಎಳೆ ಹಿಡಿದು ಅದರೊಳಗೇ ಕುಸುರಿ ಕೆಲಸ ಮಾಡುತ್ತ ತನ್ನತನವನ್ನು ಮೀರಿ ರಸದ ಅಲೌಕಿಕದ ಕಡೆಗೆ ತುಡಿಯುವ ಪ್ರಯತ್ನ ಮಾಡುತ್ತವೆ. ತಮ್ಮ ಎರಡನೆಯ ಕವಿತಾ ಸಂಕಲನದಲ್ಲಿಯೇ ಲೇಖಕಿ ಇದುವರೆಗೆ ಸಾಗಿರುವ ದೂರ ಗೋಚರಿಸುವಂತಿದೆ, ಮುಂದಿನ ಅವರ ಹಾದಿಯ ಬಗ್ಗೆ ನಾವು ನಿರೀಕ್ಷೆಯಲ್ಲಿ ಕಾಯುವಂತಿದೆ.

– ಅಕ್ಷರ ಕೆ.ವಿ.

Reviews

There are no reviews yet.

Be the first to review “ಯೋಜನಗಂಧಿಯ ಸ್ವಗತ”

Your email address will not be published. Required fields are marked *

Samudyata Venkataramu

ಸಾಗರದ ಸಮೀಪದ ಶೆಡ್ತೀಕೆರೆ ಎಂಬ ಹಳ್ಳಿಯಲ್ಲಿ ವಾಸವಾಗಿರುವ ಸಮುದ್ಯತಾ ವೆಂಕಟರಾಮು ಅವರು ಕೃಷಿ ಕುಟುಂಬದ ಗೃಹಿಣಿ. ಬಿ.ಎ. ಪದವಿ ಪಡೆದಿರುವ ಇವರು ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ ಆಸಕ್ತರು, ಹವ್ಯಾಸವಾಗಿ ಗಮಕವಾಚನ ಕಲೆಯನ್ನು ಅಭ್ಯಾಸ ಮಾಡಿದ್ದಾರೆ. ರಾಜ್ಯಾದ್ಯಂತ ಹಲವಾರು ಗಮಕ ಕಾರ್ಯಕ್ರಮಗಳನ್ನು ನೀಡಿದ ಅನುಭವ ಇವರಿಗಿದೆ. `Forever Forty ಕರ್ನಲ್ ವಸಂತ್’ (ಸುಭಾಷಿಣಿ ವಸಂತ್ ಮತ್ತು ವೀಣಾ ಪ್ರಸಾದ್) ಎಂಬ ಇಂಗ್ಲಿಷ್ ಪುಸ್ತಕದ ಭಾವಾನುವಾದವನ್ನು ಇವರು ಮಾಡಿದ್ದು ಅದು ಪ್ರಕಟಗೊಂಡಿದೆ. ಹವ್ಯಕ ಭಾಷೆಯಲ್ಲಿನ ಸಣ್ಣ ಕಥೆಗಳಿಗೆ ದೊರಕುವ ಕೊಡಗಿನ ಗೌರಮ್ಮ ಕಥಾ ಪ್ರಶಸ್ತಿ ಹಾಗೂ ಮುಂಬಯಿ ಯ.ಜಿ.ಡಿ. ಜೋಶಿ ಪ್ರತಿಷ್ಠಾನ ನಡೆಸಿದ ಲಲಿತ ಪ್ರಬಂಧ ಮತ್ತು ಕಥಾ ಸ್ಪರ್ಧೆಯಲ್ಲಿ ಬಹುಮಾನಗಳು ಇವರಿಗೆ ದೊರಕಿವೆ. ನೀನಾಸಂ ರಂಗ ಶಿಕ್ಷಣ ಕೇಂದ್ರದಲ್ಲಿ ವರ್ಷಕ್ಕೊಮ್ಮೆ ಹತ್ತು ದಿನಗಳ ಕಾಲ ಪಠ್ಯವಾಗಿ ವಿದ್ಯಾರ್ಥಿಗಳಿಗೆ ಗಮಕ ವಾಚನದ ಕ್ರಮವನ್ನು ಕಲಿಸುವ ಕೆಲಸವನ್ನೂ ಇವರು ಮಾಡಿದ್ದಾರೆ.

More By The Author