ಐದು ಸಂಸ್ಕೃತ ನಾಟಕಗಳು

SKU: 208
Category: , , , ,

350.00

83 In Stock
Weight 0.00000000 g
Number of pages

344

Year of Publication

2020

Author

ಕೆ.ವಿ. ಸುಬ್ಬಣ್ಣ

83 in stock

Description

ಲೋಕಶಾಕುಂತಲ, ವಿದಿಶೆಯ ವಿದೂಷಕ, ಚಾಣಕ್ಯ ಪ್ರಪಂಚ,ಭಗವದಜ್ಜುಕೀಯಮ್, ಸೂಳೆ-ಸನ್ಯಾಸಿ

ಕೆ.ವಿ. ಸುಬ್ಬಣ್ಣನವರು ಮರುರೂಪಿಸಿದ ಐದು ಸಂಸ್ಕ ತ ನಾಟಕಗಳ ಕನ್ನಡ ಆವೃತ್ತಿಗಳು ಇಲ್ಲಿ ಸಂಕಲಿತಗೊಂಡಿವೆ. ಕಾಳಿದಾಸನ `ಅಭಿಜ್ಞಾನ ಶಾಕುಂತಲಮ್’ ಆಧರಿಸಿದ `ಲೋಕಶಾಕುಂತಲ’ (೧೯೯೦), `ಮಾಲವಿಕಾಗ್ನಿಮಿತ್ರ’ ಆಧರಿಸಿದ `ವಿದಿಶೆಯ ವಿದೂಷಕ’ (೧೯೯೩), ವಿಶಾಖದತ್ತನ `ಮುದ್ರಾರಾಕ್ಷಸ’ ಆಧರಿಸಿದ `ಚಾಣಕ್ಯ ಪ್ರಪಂಚ’, ಮತ್ತು ಬೋಧಾಯನ ಅಥವಾ ಮಹೇಂದ್ರವಿಕ್ರಮವರ್ಮನ `ಭಗವದಜ್ಜುಕೀಯಮ್’ದ ಅನುವಾದ ಮತ್ತು ಅದೇ ಕೃತಿಯ `ಸೂಳೆ-ಸನ್ಯಾಸಿ’ (೧೯೭೭) ಎಂಬ ರೂಪಾಂತರ.ಇವುಗಳಲ್ಲಿ ನಾಲ್ಕು ಹಿಂದೆ ಪ್ರಕಟಗೊಂಡಿದ್ದು ಈಗ ಲಭ್ಯ ವಿರಲಿಲ್ಲ; ಇನ್ನು ಉಳಿದ ಒಂದು ೧೯೮೮ರಲ್ಲೇ ರಚಿತವಾಗಿದ್ದರೂ ಈವರೆಗೂ ಹಸ್ತಪ್ರತಿಯ ರೂಪದಲ್ಲೇ ಉಳಿದಿತ್ತು. ಸಾಹಿತ್ಯಾಸಕ್ತರಿಗೂ ರಂಗಸಹೃದಯರಿಗೂ ಒಟ್ಟಿಗೆ ಸಿಗಲೆಂಬ ಇರಾದೆಯಿಂದ ಈ ಬಗೆಯ ಸಂಕಲನದಲ್ಲಿ ಈ ಕೃತಿಗಳು ಹೊರಬರುತ್ತಿವೆ.ಈ ಎಲ್ಲ ಅನುವಾದ/ರೂಪಾಂತರಗಳೂ ನಡೆದಿದ್ದು ನಿರ್ದಿಷ್ಟ ರಂಗಪ್ರಯೋಗಗಳ ಅಗತ್ಯಕ್ಕಾಗಿ. ಮತ್ತು, ಇವೆಲ್ಲವೂ ಮೂಲವನ್ನಾಧರಿಸಿ ಕಟ್ಟಿರುವ ಮರುರೂಪಗಳೇ ಹೊರತು ನೇರ ಅನುವಾದಗಳಲ್ಲ. ಸಂಸ್ಕ ತ ಸಾಹಿತ್ಯದ ಮೇರುಕೃತಿಗಳನ್ನು ಕನ್ನಡದ/ಭಾರತದ ಸಮಕಾಲೀನ ಬೌದ್ಧಿಕ ಸಂದರ್ಭಗಳಿಗೆ ಸಂವಾದಿಯಾಗುವಂತೆ ಹೊಸ ರೂಪಗಳಲ್ಲಿ ಇಟ್ಟು ನೋಡುವ ಪ್ರಯೋಗವು ಈ ಎಲ್ಲ ರೂಪಾಂತರಗಳ ಸ್ಥಾಯೀಗುಣ.

Reviews

There are no reviews yet.

Be the first to review “ಐದು ಸಂಸ್ಕೃತ ನಾಟಕಗಳು”

Your email address will not be published. Required fields are marked *

No Author Found