Description
ಮನುಷ್ಯನಿಗೆ ಇಂಥ ಕಣ್ಣುಗಳಿರಲಾರವು! ಇದಂತೂ ಚಿಗರೆಯ ಕಣ್ಣುಗಳು! ನಿಜಕ್ಕೂ ಈ ಪ್ರಾಣಿ ಎಲ್ಲೋ ಚಿಗರೆಯ ಕಣ್ಣುಗಳನ್ನು ಕಿತ್ತು ತಂದು ತನ್ನ ಮುಖದ ಮೇಲೆ ಅಂಟಿಸಿಕೊAಡಿರಬೇಕು. ಆತ ಮೆಲ್ಲಗೆ ಆ ಕಣ್ಣಿನ ಸುತ್ತ ಬೆರಳಾಡಿಸಿ ಅದನ್ನು ಅಂಟಿಸಿದ ಗುರುತೇನಾದರೂ ಇದೆಯೋ ಎಂದು ನೋಡತೊಡಗಿದ. ಇರಲಿಲ್ಲ. ಋಷಿಕುಮಾರ ಆ ಮುಖದ ಮೇಲೆ ಬಗ್ಗಿದ. ಖಂಡಿತ ಏನೋ ಗುಟ್ಟಿರಬೇಕು. ಆಗಲೇ ಅದರ ಕಣ್ಣು ತೆರೆಯಿತು. ಅದು ಕಕ್ಕಾಬಿಕ್ಕಿಯಾಗಿ ಎದ್ದು ಕುಳಿತುಕೊಂಡಿತು. ಕ್ರೋಧ ತುಂಬಿದ ಧ್ವನಿಯಲ್ಲಿ ಅದು ಕೇಳಿತು, ‘ಯಾರು ನೀನು! ಏನು ಮಾಡುತ್ತಿದ್ದೀಯೆ?’ ರೈಕ್ವ ಇಂಥ ಇನಿದನಿಯನ್ನು ಎಂದೂ ಕೇಳಿರಲಿಲ್ಲ. ಆತ ಅಂದುಕೊAಡ – ಇದು ನಿಜಕ್ಕೂ ಯಾವುದೋ ದೇವಲೋಕದ ಮನುಷ್ಯನಿರಬೇಕು.
(ಅನಾಮದಾಸನ ಕಡತ)
***
ಆಧುನಿಕ ಹಿಂದೀ ಸಾಹಿತ್ಯದ ಕೀರ್ತಿಕಲಶಗಳಲ್ಲಿ ಒಬ್ಬರಾದ, ಎಂಟು ಭಾಷೆಗಳಲ್ಲಿ ಪಾಂಡಿತ್ಯ ಪಡೆದಿದ್ದ ಡಾ. ಹಜಾರೀಪ್ರಸಾದ ದ್ವಿವೇದಿಯವರು ಬಹುಮುಖಿ ಪ್ರತಿಭಾಸಂಪನ್ನರು. ಹಿಂದಿಯ ರಸವಾದಿ ವಿಮರ್ಶಕರಾಗಿ, ರಮ್ಯೋಜ್ವಲ ಕಾದಂಬರಿಕಾರರಾಗಿ, ಸರ್ವಶ್ರೇಷ್ಠ ಪ್ರಬಂಧಕಾರರಾಗಿ, ಗಂಭೀರ ಸಂಶೋಧಕರಾಗಿ, ಮಾನವತಾವಾದೀ ಇತಿಹಾಸಕಾರರಾಗಿ, ಎಲ್ಲಕ್ಕೂ ಮಿಗಿಲಾಗಿ ಸ್ವಾಧೀನ ಚಿಂತಕರಾಗಿ ಹಿಂದೀ ಸಾಹಿತ್ಯಕ್ಕೆ ಒಂದು ಹೊಸ ಆಯಾಮವನ್ನು ನೀಡಿದರು. ಉಪನಿಷತ್ಕಾಲೀನ ಭಾರತದ ಹಿನ್ನೆಲೆಯಲ್ಲಿ ನಿರೂಪಿತವಾದ ಅವರ ಸುಪ್ರಸಿದ್ಧ ಕಾದಂಬರಿ ‘ಅನಾಮದಾಸ ಕಾ ಪೋಥಾ’ದ ಉತ್ಕೃಷ್ಟ ಕನ್ನಡಾನುವಾದ ಇಲ್ಲಿದೆ. ಇಲ್ಲಿ ಮ.ಸು. ಕೃಷ್ಣಮೂರ್ತಿಯವರು ಬಳಸಿದ ಕನ್ನಡವು ಕಾದಂಬರಿಯ ಕಾಲದೇಶವನ್ನು ಸಮರ್ಥವಾಗಿ ಹಿಡಿದಿದೆ.
Reviews
There are no reviews yet.