Description
ಭಾರತದ ಪ್ರಾಚೀನ ಸಾಹಿತ್ಯದಲ್ಲಿ ಶಾಸ್ತ್ರೀಯ ಸಂಸ್ಕೃತ ನಾಟಕ ತುಂಬ ಮಹತ್ವದ ಪಟ್ಟ ಎಂದೂ ಹಾಗೂ ಕಾಳಿದಾಸ ಆ ಯುಗದ ಪ್ರಾತಿನಿಧಿಕವಾದ ನಾಟಕಕಾರ ಎಂದೂ ತುಂಬ ಜನಜನಿತವಾಗಿದ್ದರೂ ಅಂಥ ಪ್ರಸಿದ್ಧಿಗೆ ಸರಿಸಾಟಿಯಾಗುವ ವೈವಿಧ್ಯಮಯ ವಿಮರ್ಶೆ ಮತ್ತು ಚರ್ಚೆಗಳು ಸಂಸ್ಕೃತ ನಾಟಕಗಲ ಬಗ್ಗೆ ಅಥವಾ ಕಾಳಿದಾಸನ ಬಗ್ಗೆ ಬಂದಿದ್ದು ಕಡಿಮೆ. ಹೋಲಿಕೆಗೆ, ಪಾಶ್ಚಾತ್ಯ ಭಾಷೆಗಳಲ್ಲಿ ಗ್ರೀಕ್ ನಾಟಕಗಳ ಬಗ್ಗೆ ಅಥವಾ ಶೇಕ್‌ಸ್ಪಿಯರ್‌ನ ಬಗ್ಗೆ ಇವತ್ತಿಗೂ ಹೊಸಹೊಸ ದಿಕ್ಕಿನ ವಿಮರ್ಶೆ-ಪುನರ್ ಮೌಲೀಕರಣಗಳು ಬರುತ್ತಿರುವಂತೆ ನಮ್ಮಲ್ಲಿ ಸಂಸ್ಕೃತ ನಾಟಕಗಳನ್ನು ಕುರಿತು ಹೊಸ ಚಿಂತನೆ-ವ್ಯಾಖ್ಯಾನಗಳೂ ಹೆಚ್ಚು ಬಂದಿಲ್ಲ. ಹಾಗೇ ನಮ್ಮ ರಂಗಭೂಮಿಗಳೂ ಸಂಸ್ಕೃತ ನಾಟಕಗಳನ್ನು ಹೊಸಹೊಸ ಮಾದರಿಗಳಲ್ಲಿ ಪ್ರಯೋಗಿಸಿ ಈ ನಾಟಕಗಳ ಹೊಸ ಅರ್ಥಗಳನ್ನು ಅನಾವರಣ ಮಾಡುವ ಪ್ರಯತ್ನ ನಡೆಸಿದ್ದು ಕೂಡಾ ತುಂಬ ಅಪರೂಪ. ಕಾಳಿದಾಸನ ‘ಮಾಲವಿಕಾಗ್ನಿಮಿತ್ರ’ ನಾಟಕವನ್ನು ಆಧರಿಸಿದ ಪ್ರಸ್ತುತ ರೂಪಾಂತರ ಅಂಥ ಪುನರ್‌ವ್ಯಾಖ್ಯಾನದ ಪ್ರಯೋಗ.
‘ಮಾಲವಿಕಾಗ್ನಿಮಿತ್ರ’ ನಾಟಕದ ಕಥೆಯನ್ನು ‘ವಿದಿಶೆಯ ವಿದೂಷಕ’ ಎಮ್ಬ ಪ್ರಸ್ತುತ ರೂಪಾಂತರವು ಹಾಗೆಯೇ ಇಟ್ಟುಕೊಂಡಿದ್ದರೂ ಅದನ್ನು ಪುನರ್‌ಕಥಿಸುವ ವಿಧಾನದಲ್ಲಿ ಹಲವು ಮುಖ್ಯವಾದ ಬದಲಾವಣೆಗಳನ್ನು ಮಾಡಿಕೊಂಡಿದೆ. ಮೊದಲನೆಯದಾಗಿ, ಈ ರೂಪಾಂತರವು ಪ್ರಸ್ತುತ ಕೃತಿಯೊಳಗೆ ಅಡಗಿರುವ ವ್ಯಂಗ್ಯವನ್ನು ತುಸು ಒತ್ತುಕೊಟ್ಟು ಮೇಲೆದ್ದು ನಿಲ್ಲುವಂತೆ ಮಾಡುತ್ತದೆ. ಎರಡನೆಯದಾಗಿ, ಮೂಲಕೃತಿಯಲ್ಲಿ ಅಮ್ಚಿನ ಪಾತ್ರಗಳಾಗಿ ಬರುವ ದಾಸಿ-ಮಪಿಚಾರಕ-ಸೇವಕರು ಮೊದಲಾದವರನ್ನು ಪ್ರಸ್ತುತ ರೂಪಾಂತರವು ತುಸು ಹೆಚ್ಚು ಮುನ್ನೆಲಿಗೆ ತಮ್ದು ನಿಲ್ಲಿಸುತ್ತದೆ. ಮೂರನೆಯದಾಗಿ, ಈ ನಾಟಕದ ಕಾಲ-ದೇಶ ಸಂದರ್ಭಗಳನ್ನು ಅಲ್ಲಲ್ಲಿ ಸ್ಪಷ್ಟೀಕರಿಸುವ ಮೂಲಕ ಪ್ರಸ್ತುತ ರೂಪಾಂತರವು ಈ ಕೃತಿಯ ಹಿನ್ನಿಲೆಯಲ್ಲಿರುವ ‘ರಾಜಕಾರಣ’ವನ್ನು ಇವತ್ತಿನ ಕಣ್ಣಿನಿಮ್ದ ನೋಡುವ ಪ್ರಯತ್ನ ಮಾಡುತ್ತದೆ.
Reviews
There are no reviews yet.