Description
ಈ ನಾಟಕಕ್ಕೆ ಕವಿಯು ಬಾಲರಾಮಾಯಣವೆಂದು ಕರೆದಿದ್ದಾನೆ. ಇದು ಯಾಕೆಂಬ ಬಗೆಗೆ ವಿವರಣೆಯಿಲ್ಲ. ಇದು ಬಾಲಕರಿಗಾಗಿ ಬರೆದ ರಾಮಾಯಣ ಖಂಡಿತವಾಗಿಯೂ ಅಲ್ಲ. ಇದು ಬಾಲವೆನಿಸಿದ್ದು ಹೇಗೆಂಬುದು ನಮ್ಮ ಊಹೆಗೆ ಬಿಟ್ಟಿದ್ದು. ರಾಮಾಯಣ ಕಥೆಯನ್ನು ಸಂಕ್ಷಿಪ್ತವಾಗಿ ನಿರೂಪಿಸಿದ್ದನ್ನು ಇದು ಸೂಚಿಸಬಹುದು. ನಿರೂಪಣಾ ವಿಧಾನದಲ್ಲಿಯ ಹೊಸತನವನ್ನು ಲಕ್ಷಿಸಬಹುದು. ಅದನ್ನು ವಿನೂತನ ರಾಮಾಯಣವೆಂದು ಕರೆಯಬಹುದು. ರಾಮಾಯಣಕ್ಕೆ ಬಾಲವಾದುದು ಅಂದರೆ ಪೂರಕವಾದುದು ಎಂಬ ಅರ್ಥದಲ್ಲಿಯೂ ಇರಬಹುದು. ಈ ಎಲ್ಲ ಅರ್ಥಗಳನ್ನು ಸೂಚಿಸುವ ಉದ್ದೇಶವೂ ಇರಬಹುದು. ನಮಗಂತೂ ಅದು ವಿನೂತನ ರಾಮಾಯಣವೆನಿಸುತ್ತದೆ. ರಾಮಾಯಣದಲ್ಲಿ ಕಳಂಕಿತರೆಂದು ಗುರುತಿಸಲ್ಪಟ್ಟವರೆಲ್ಲ ಇಲ್ಲಿ ನಿಷ್ಕಳಂಕರಾಗಿದ್ದಾರೆ.ಮೂಲದ ಕಥೆಯನ್ನು ಕವಿಗಳು ತಮಗೆ ಬೇಕಾದಂತೆ ಬದಲಾಯಿಸಿಕೊಳ್ಳುವುದು ಸಂಸ್ಕೃತ ನಾಟಕಗಳಲ್ಲಿ ಪರಂಪರೆಯೇ ಆಗಿದೆ. ನಾಟಕವಿರುವುದು ಕಥೆಯನ್ನು ನಿರೂಪಿಸುವುದಕ್ಕಲ್ಲ. ಕಥೆಯನ್ನು ತಿಳಿಯಲು ಬಯಸುವವರು ಮೂಲಗ್ರಂಥವನ್ನು ಅವಲಂಬಿಸಬೇಕೆನ್ನುವುದು ಅವರ ಧೋರಣೆ. ರಾಜಶೇಖರನು ಅದೇ ಪರಂಪರೆಯಲ್ಲಿ ಬಂದವನು. ತನ್ನ ಹಿಂದಿನವರಾದ ಕಾಲಿದಾಸ, ಭವಭೂತಿಯರನ್ನು ಅನುಸರಿಸುತ್ತಾನೆ. ಅವರಿಬ್ಬರ ಪ್ರಭಾವಕ್ಕೂ ಒಳಗಾಗಿದ್ದಾನೆ. ಕವಿಯು ತನ್ನನ್ನು ಭವಭೂತಿಯ ಅವತಾರವೆಂದು ಕರೆದುಕೊಳ್ಳುವುದನ್ನು ನೆನೆಯಬಹುದು.
Reviews
There are no reviews yet.