Description
ಪ್ರಜಾವಾಣಿಯಲ್ಲಿ ಪ್ರಕಟವಾದ ಅಂಕಣಬರಹಗಳು.
ಸಾದಾ ಹಳ್ಳಿಗನ ನಿರ್ಭಿಡೆಯ ನೇರ ನುಡಿ ಮತ್ತು ರಾಜಧಾನಿಯ ಪತ್ರಕರ್ತನ ಸೂಕ್ಷ ಪರಿಣತಿ – ಇವೆರಡರ ಒಂದು ವಿಶಿಷ್ಟ ಸಂಗಮ ಪದ್ಮರಾಜ ದಂಡಾವತಿಯವರ ಬರಹಗಳಲ್ಲಿದೆ. ಉದಾಹರಣೆಗೆ, ಸರ್ಕಾರಿ ಶಾಲೆಗಳಲ್ಲಿ ಜಾತಿಭೇದ ಮಾಡುವ ಯೋಜನೆಗಳನ್ನು ತರುವುದು ತಪ್ಪೆಂದು ಅವರು ವಾದಿಸುವಾಗ ಅದರ ಹಿಂದೆ ಹಳ್ಳಿಗನ ನಿರ್ಭಿಡೆಯ ನುಡಿ ಕಂಡರೆ, ಅಸ್ಮಿತೆಯ ರಾಜಕಾರಣದ ಐತಿಹಾಸಿಕ ಮಜಲುಗಳ ಕಥನವನ್ನು ಅವರು ಮಾಡುತ್ತಿರುವಾಗ ನಮಗೆ ಪರಿಣತ ಪತ್ರಕರ್ತನೊಬ್ಬನ ಸೂಕ್ಷ ಜ್ಞತೆ ಎದುರಾಗುತ್ತದೆ. ಈ ಪುಸ್ತಕದುದ್ದಕ್ಕೂ ಕಾಣಸಿಗುವ ಇಂಥ ಹದದಿಂದಾಗಿಯೇ, ಇಲ್ಲಿಯ ಬರಹಗಳಲ್ಲಿ ಮೊನಚೂ ಇದೆ, ಮಾರ್ದವತೆಯೂ ಇದೆ; ವಿಕೃತಿಯನ್ನು ಝಾಡಿಸುವ ವಿಡಂಬನೆಯೂ ಇದೆ, ಆದರ್ಶದ ಝಲಕುಗಳು ಕಂಡಾಗ ಮೆದುಗೊಳ್ಳುವ ಭಾವುಕತೆಯೂ ಇದೆ. ಪದ್ಮರಾಜ ದಂಡಾವತಿಯವರ ಬರಹಗಳನ್ನು ನಾನು ಇಷ್ಟಪಟ್ಟು ಓದುವುದು ವಿಷಯದ ವಿಶ್ಲೇಷಣೆ ಮತ್ತು ವ್ಯಂಜಕ ಧ್ವನಿಗಳೆರಡೂ ಕೂಡಿದ ಇಂಥ ಹದಕ್ಕಾಗಿ.
ಅಕ್ಷರ ಕೆ.ವಿ.
Reviews
There are no reviews yet.