ದೇಶಗ್ರಹಣ

Category: , , , ,

460.00

1 In Stock
Number of pages

368

Year of Publication

2023

Author

ಗಿರಿ

1 in stock

Description

ಬ್ರಿಟಿಷ್ ಸಾಮ್ರಾಜ್ಯಶಾಹಿಯ ಮೇಲಿನ ಐತಿಹಾಸಿಕ ಪುಸ್ತಕಗಳು ಮತ್ತು ಕಾದಂಬರಿಗಳು ೧೮೫೮ರಲ್ಲಿ ಶುರುವಾದ ಇಂಗ್ಲಿಷ್ ರಾಜರಾಣಿಯರ ಆಡಳಿತವನ್ನು ವೈಭವೀಕರಿಸುತ್ತವೆ. ಆದರೆ ವೈಭವವೆಲ್ಲ ಬಿಳಿ ಬ್ರಿಟಿಷರ ಪಾಲಾಗಿತ್ತು. ಇಂಡಿಯಾದ ಜನರಿಗೆ ದೊರಕಿದ್ದು ಅವರ ದೇಶವನ್ನೇ ಕವಿದ ಗ್ರಹಣ – ಶತಮಾನಗಳ ಬಿಳಿಗ್ರಹಣ. ಈ ಕಾದಂಬರಿ ಹೆಚ್ಚು ಪರಿಚಿತವಲ್ಲದ ಈಸ್ಟ್ ಇಂಡಿಯ ಕಂಪನಿಯ ಹೆಣ್ಣು ಗಂಡುಗಳ ಕತೆ. ಅವರ ದಬ್ಬಾಳಿಕೆಯ ಕತೆ. ಅವರ ದಬ್ಬಾಳಿಕೆಗೆ ಒಳಗಾದವರ ಕತೆ. ಬ್ರಿಟಿಷರು ಇಂಡಿಯಾದಲ್ಲಿ ಬೇರೂರಲು ಅವಕಾಶ ಮಾಡಿಕೊಟ್ಟ ದೇಶದ ಸ್ವಾರ್ಥಿಗಳ ಮತ್ತು ದೇಶದ್ರೋಹಿಗಳ ಕತೆ. ಇದು ಐತಿಹಾಸಿಕ ಸತ್ಯಾಂಶಗಳನ್ನೊಳಗೊಂಡ ಕಾಲ್ಪನಿಕ ಕಾದಂಬರಿ. ಪ್ರಾಸಂಗಿಕವಾಗಿ ಬಂದ ಕೆಲವು ನಿಜ ವ್ಯಕ್ತಿಗಳ ಹೆಸರುಗಳನ್ನು ಬಿಟ್ಟರೆ ಐತಿಹಾಸಿಕವಾಗಿ ನಿಜವಾದ ವ್ಯಕ್ತಿಗಳು ಈ ಕಾದಂಬರಿಯಲ್ಲಿ ಇಲ್ಲ. ಆದರೆ ಅಂತಹ ವ್ಯಕ್ತಿಗಳು, ಅವರು ಮಾಡಿದ ಕೆಲಸಗಳು ಐತಿಹಾಸಿಕವಾಗಿ ಪ್ರಮಾಣಬದ್ಧವಾಗಿವೆ. ಆದ್ದರಿಂದ ಇದು ಐತಿಹಾಸಿಕ-ಸಾಮಾಜಿಕ-ರಾಜಕೀಯ ಕಾದಂಬರಿ…

Reviews

There are no reviews yet.

Be the first to review “ದೇಶಗ್ರಹಣ”

Your email address will not be published. Required fields are marked *

Giri

ಗಿರಿ (ಡಾ. ಎಮ್. ಎನ್. ಹೆಗ್ಡೆ) ಕ್ಯಾಲಿಫೋರ್ನಿಯಾ ಸ್ಟೇಟ್ ಯೂನಿವರ್ಸಿಟಿ-ಫ್ರೆಸ್ನೊ‌ದಲ್ಲಿ ವಾಕ್-ಶ್ರವಣ ವಿಜ್ಞಾನದ ಪ್ರೊಫೆಸರ್ ಎಮೆರಿಟಸ್ ಆಗಿದ್ದಾರೆ. ಗಿರಿಯವರು ಕನ್ನಡದ ಮೈಲಿಗಲ್ಲು ಕಾದಂಬರಿಯಾದ,  ವಿಮರ್ಶಕರ ಅತಿಹೆಚ್ಚಿನ ಮನ್ನಣೆಗೊಳಗಾದ, ಮತ್ತು ಅಕ್ಷರ ಪ್ರಕಾಶನ ೧೯೭೧ರಲ್ಲಿ ಪ್ರಕಟಿಸಿದ  ಗತಿ ಸ್ಥಿತಿ ಕಾದಂಬರಿಯ ಲೇಖಕರು. ಇವರ ಇನ್ನೊಂದು ಕಾದಂಬರಿ ಕಂಡದ್ದು ಕಾಣದ್ದು. ಇತ್ತಿಚೇಗೆ ಅವರು ಬರೆದ ಸಾಹಿತ್ಯದ ವೈಜ್ಞಾನಿಕ ಮೀಮಾಂಸೆ ಎಂಬ ಪುಸ್ತಕವು ವರ್ತಮಾನ ವಿಜ್ಞಾನದ ಸೂತ್ರಗಳನ್ನೂ ಆಧರಿಸಿ ಸೃಜನಶೀಲತೆಯನ್ನು ವಿವರಿಸುತ್ತದೆ. ಗಿರಿಯವರ ಈ ದೇಶಗ್ರಹಣ ಕಾದಂಬರಿಯ ಇಂಗ್ಲಿಷ್ ಆವೃತ್ತಿ, WHITE ECLIPSE ಎಂಬ ಹೆಸರಿನಲ್ಲಿ ಅಮೆಝಾನ್  ಅಲ್ಲದೆ ಅಂತರ್ಜಾಲದ ಅನೇಕ ತಾಣಗಳಲ್ಲಿ ಪ್ರಕಟವಾಗಿದೆ. ವಾಕ್-ಶ್ರವಣ ವಿಜ್ಞಾನದಲ್ಲಿ ೨೫ಕ್ಕೂ ಹೆಚ್ಚು ಪುಸ್ತಕಗಳನ್ನೂ, ಅನೇಕ ಸಂಶೋಧನಾ ಲೇಖನಗಳನ್ನೂ ಇಂಗ್ಲಿಷ್‌ನಲ್ಲಿ ಪ್ರಕಟಿಸಿದ್ದಾರೆ. ಪ್ರಪಂಚದಾದ್ಯಂತ ವಿಶ್ವವಿದ್ಯಾಲಯಗಳಲ್ಲಿ ಆಮಂತ್ರಿತ ಭಾಷಣಗಳನ್ನು ಕೊಟ್ಟಿದ್ದಾರೆ.