Description
ಕನ್ನಡದ ಪ್ರಮುಖ ಕಥೆಗಾರ್ತಿ ವೈದೇಹಿ ಅವರ ಹೊಸ ಹುಡುಕಾಟಗಳನ್ನು ದಾಖಲಿಸುವ ಸಂಕಲನ ಇದು. ಈ ಎಲ್ಲ ಕಥೆಗಳ ಹಿಂದೆ ‘ಗಂಡು’ ‘ಹೆಣ್ಣು’ಗಳು ಕೂಡಿರುವ ಒಂದು ಲೋಕವಿದೆ; ಆ ಲೋಕದಲ್ಲಿ ಮಿಥುನವಿರುವಂತೆಯೇ ವಿಚ್ಛೇದವೂ ಇದೆ; ಸ್ವಾರಸ್ಯದ ಮಾತುಗಾರಿಕೆಯಿರುವಷ್ಟೇ ಗಾಢವಾದ ವಿಷಾದದ ಮಂದ್ರಸ್ಥಾಯಿಯೂ ಇದೆ. ಇಲ್ಲಿ ಉಲ್ಲಾಸದ ಉಬ್ಬರ ಕೆಲವೊಮ್ಮೆ ಮೊರೆದು ಕಾಣಿಸಿಕೊಂಡರೆ ಕೆಲವೊಮ್ಮೆ ಹಿಂಸೆಯ ನೆರಳು ಚಾಚಿಕೊಳ್ಳುತ್ತದೆ. ಪಾತ್ರಗಳಲ್ಲಿ ಸನ್ನಿವೇಶಗಳಲ್ಲಿ ಮತ್ತು ಇಡಿಯ ಕಥನ ಕ್ರಮದಲ್ಲಿ ಹೀಗೆ, ವಿರುದ್ಧಭಾವಗಳನ್ನು ಮಿಥುನಗೊಳಿಸಿ ಕಾಣಿಸುವ ಒಂದು ವಿಶಿಷ್ಟ ಕಲೆಗಾರಿಕೆ ಪ್ರಾಯಶಃ ವೈದೇಹಿಯವರ ಈ ಕಥೆಗಳಲ್ಲಿ ಪ್ರಮುಖವಾದದ್ದು. ಆದ್ದರಿಂದಲೇ, ‘ಕ್ರೌಂಚ ಪಕ್ಷಿಗಳು’ ಎಂಬುದು ಈ ಸಂಕಲನದ ಒಮ್ದು ಕಥೆಯ ತಲೆಬರಹ ಮಾತ್ರವಲ್ಲ ಅದು ಈ ಕಥನಕ್ರಮದ ಒಂದು ಆದಿಪ್ರತಿಮ.
Reviews
There are no reviews yet.