Description
…ಈ ಕವನಗಳನ್ನು ಇನ್ನೂ ಹೆಚ್ಚು ಗಮನಕೊಟ್ಟು ನೋಡಿದರೆ ನಮ್ಮಲ್ಲಿ ಕಾವ್ಯದ ಬಗ್ಗೆ ಚಿಂತನೆ ಬೇರೆ ಹಾಗೂ ಆರೋಗ್ಯವಾದ ದಿಕ್ಕುಗಳಲ್ಲಿ ಹೊರಳುತ್ತಿರಬಹುದು, ಹೀಗಾಗುವುದು ಅಗತ್ಯವೇನೋ ಎಂದೆಲ್ಲ ತೋರುತ್ತದೆ…
ಹಲವಾರು ನಿರಾಳ ಕ್ಷಣಗಳು ಮಾಗಿ ಕಾಲದ ಸಾಲುಗಳು ಸಂಕಲನದ ಉದ್ದಕ್ಕೂ ಇವೆ. ತೇಜಶ್ರೀಯವರ ಕವನಕಲೆಯೇ ಹದಗೊಳ್ಳುತ್ತಾ ಇರುವುದು ಈ ಸಂಕಲನದಲ್ಲಿ ಗಮನಿಸಬಹುದು. ಈ ಬೆಳವಣಿಗೆ ಅಗತ್ಯ, ಆರೋಗ್ಯಕರ.
– ಪಂಡಿತ ರಾಜೀವ ತಾರಾನಾಥ
…ಈ ಕವಿತೆಗೆ ಮೈತುಂಬ ಎಚ್ಚರಿದೆ. ಆ ಎಚ್ಚರವೆಂದರೆ ಧ್ಯಾನದ ಎಚ್ಚರ. ಆದುದರಿಂದ ತನ್ನೊಡಲು ಬಿಟ್ಟು ಬೇರಲ್ಲೂ ಸುಳಿಯುವುದಿಲ್ಲವಿದು. ಧ್ಯಾನಸ್ಥ ಕವಿತೆ ಎಂಬ ಮಾತುಗಳನ್ನು ಕೇಳಿದ್ದೇವೆ: ಇಲ್ಲಿದೆ ಧ್ಯಾನಸ್ಥ ಕವಿತೆ.
ಯಾರೋ ಎಸೆದ ಕಲ್ಲಿಗೆ ತನ್ನಲ್ಲಿ ಉಂಟಾದ ತರಂಗಗಳನ್ನು ತಾನೇ ಅನುಭವಿಸುವ ಕೊಳದಂತೆ ಈ ಕವಿತೆ. ಹೇಗೆ ಎಸೆದರೂ, ಹೇಗೆ ಬಿದ್ದರೂ ಬಾಣದ ಮೊನೆಯಲ್ಲೇ ಸದಾ ಇರುವ ಅಗೋಚರ ಗುರಿಯಂತೆ ಈ ಕವಿತೆ. ತನ್ನನ್ನು ತಾನು ಅನುಭವಿಸುವುದಕ್ಕೆ ಇನ್ನೊಂದು ಬೇಕೇನೋ, ಆ ಇನ್ನೊಂದು ಕೂಡಾ ತಾನೇ ಆಗಿರುವೆನೇನೋ — ಆ ಇನ್ನೊಂದು ತನ್ನಲ್ಲೇ ಇತ್ತೇನೋ — ಅಂದರೆ ತಾನೇ ತನ್ನ ಗರ್ಭ — ಎನ್ನುವಂತೆ ಇರುವ ಕವಿತೆ ಇದು.
– ಲಕ್ಷ್ಮೀಶ ತೋಳ್ಪಾಡಿ
Reviews
There are no reviews yet.