ಮಾಯಾದರ್ಪಣ

Category: , , , ,

200.00

7 In Stock
Number of pages

136

Year of Publication

1st Edition- 1991, 2nd Edition (1st Akshara Prakashana Edition)- 2022

Author

ಎಂ.ಎಸ್. ಶ್ರೀರಾಮ್

eBook

https://play.google.com/store/books/details/M_S_Sriram_Maayaadarpana?id=DwS6EAAAQBAJ

7 in stock

Description

ತರುಣ ಲೇಖಕರಾದ ಎಂ ಎಸ್ ಶ್ರೀರಾಮ್ ಅವರ ಕತೆಗಳ ಸಂಕಲನ `ಮಾಯಾದರ್ಪಣ’ದಲ್ಲಿ ೧೩ ಕತೆಗಳಿವೆ; ತರುಣ ಬರಹಗಾರನೊಬ್ಬನ ಉತ್ಸಾಹ, ತಿಕ್ಕಲುತನ ತೋರುವ ಜೊತೆಗೇ ಈ ಕತೆಗಳು ತರುಣರ ಬೆಚ್ಚನೆಯ ಭಾವವನ್ನೂ ತೋರುತ್ತವೆ. ಇವೆಲ್ಲಕಿಂತ ಹೆಚ್ಚಾಗಿ ನಿಜಕ್ಕೂ ಸಾಹಿತಿಯಾದವನು ತಾರುಣ್ಯದಲ್ಲಿ ತೋರಲೇಬೇಕಾದ ನುಡಿಗಟ್ಟಿನ ಹೊಸತನ, ನೋಟದ ಹೊಸತನ ತೋರುತ್ತವೆ,
ಪಿ ಲಂಕೇಶ್

ಶ್ರೀರಾಮ್ ಅವರ ಎಲ್ಲ ಕತೆಗಳೂ ಕುತೂಹಲದಿಂದ ಓದಿಸಿಕೊಂಡು ಹೋಗುವುದರ ಜೊತೆಗೆ ಬದುಕಿನ ಸೂಕ್ಷ್ಮಗಳನ್ನು ಹೊಳೆಯಿಸುತ್ತವೆ. ಹಾಗೂ ಇಂದಿನ ಮೌಲ್ಯಗಳ ಕುಸಿತದ ಬಗ್ಗೆಯೂ ನಮ್ಮನ್ನು ಗಾಢವಾಗಿ ಚಿಂತನೆಯಲ್ಲಿ ತೊಡಗಿಸುತ್ತವೆ. ನಮ್ಮ ತರುಣ ಲೇಖಕರಿಂದ ಇಂತಹ ಉತ್ಕೃಷ್ಟ ಪ್ರಯೋಗಗಳು ಇನ್ನೂ ನಡೆಯುತ್ತಿರುವಾಗ ನವ್ಯ ಕತೆಗಳ ಪರಂಪರೆಗೆ ಭರತವಾಕ್ಯ ಹಾಡುವುದು ಅಕಾಲಿಕವೆನ್ನಿಸದಿರದು. ನವ್ಯತೆಯ ಒಂದು ಹೊಸ ಅಲೆಯ ಹುಟ್ಟಿನ ಅನುಭವವನ್ನು ತರುವ `ಮಾಯಾದರ್ಪಣ’ ಒಂದು ಸ್ವಾಗತಾರ್ಹ ಕೃತಿ.
ಕೆ ನರಸಿಂಹಮೂರ್ತಿ

ಎಂ ಎಸ್ ಶ್ರೀರಾಮ್ ಅವರ ಕತೆಗಳ ಮೊದಲ ಸಂಕಲನವಾಗಿ ಪ್ರಕಟವಾಗಿರುವ `ಮಾಯಾದರ್ಪಣ’ ಈ ವರ್ಷದ ಒಂದು ಗಮನಾರ್ಹವಾದ ಸಂಕಲನ… ಶ್ರೀರಾಮ್ ಅವರು ಕತೆಯ ಅಂಶಗಳನ್ನು ಗೌಣವಾಗಿಸಿ, ಸಂಭಾಷಣೆಯಲ್ಲಿ ಕತೆಯನ್ನು ನಿಜವಾಗಿಸುವ ಕೌಶಲವನ್ನು ಸಿದ್ಧಿಸಿಕೊಂಡಿದ್ದಾರೆ. ಅವರು ಪ್ರಜ್ಞೆಗೆ ಹೆಚ್ಚು ಒತ್ತು ಕೊಟ್ಟು ಕತೆಗಳನ್ನು ಬರೆದರೂ ಇತ್ತೀಚಿನ ಬಹುಮುಖ್ಯ ಕತೆಗಾರರಲ್ಲಿ ಒಬ್ಬರಾಗಿ ಭರವಸೆ ಹುಟ್ಟಿಸಿದ್ದಾರೆ.
ಕರಿಗೌಡ ಬೀಚನಹಳ್ಳಿ

ಎಂ ಎಸ್ ಶ್ರೀರಾಮ್ ಅವರ ಕತೆಗಳ ಮೊದಲ ಸಂಕಲನದಲ್ಲಿ ಹದಿಮೂರು ಕತೆಗಳಿವೆ. ಬದುಕಿನ ನಿಗೂಢತೆಯನ್ನೂ ಸಂಬಂಧಗಳ ನೈಜ ಸ್ವರೂಪತೆಯನ್ನು ಸರಿಯಾಗಿ ಅರ್ಥೈಸಿಕೊಳ್ಳಬೇಕೆಂಬ ಕಾಳಜಿ ಇವುಗಳಲ್ಲಿ ಸುಸ್ಪಷ್ಟವಾಗಿದೆ. ಮನುಷ್ಯ ಸಂಬಂಧಗಳ ನೆಲೆಯಲ್ಲಿ ವ್ಯಕ್ತಿಯ ಮನಸ್ಸು ಹಾಗೂ ವರ್ತನೆಗಳನ್ನು ಇವು ತೆರೆದಿಡುತ್ತವೆ. ಅಂತರ್ಮುಖ-ಬಹಿರ್ಮುಖಗಳ ಕೃತಕ ವಿಭಜನೆಯಿಲ್ಲದೆ ಸಮಗ್ರ ವ್ಯಕ್ತಿತ್ವದ ಶೋಧನೆಯನ್ನು ಇವು ಮಾಡುತ್ತವೆ. ಅತಿ-ಅಂತರ್ಮುಖತೆಯ ರಕ್ತಹೀನತೆಯಿಂದಲೂ ಅತಿ-ಬಹಿರ್ಮುಖತೆಯ ಆವೇಶದಿಂದಲೂ ಇವು ಪಾರಾಗಿವೆ. ಕನ್ನಡ ಸಾಹಿತ್ಯದ ಇಂದಿನ ಸಂದರ್ಭದಲ್ಲಿ ಇದು ಗಮನಿಸಬೇಕಾದ ಸಂಗತಿ.
ಎ ಆರ್ ನಾಗಭೂಷಣ

Reviews

There are no reviews yet.

Be the first to review “ಮಾಯಾದರ್ಪಣ”

Your email address will not be published. Required fields are marked *

M.S. Sriram

ಎಂ ಎಸ್ ಶ್ರೀರಾಮ್ ಹುಟ್ಟಿದ್ದು ೧೯೬೨ರಲ್ಲಿ, ಆಂಧ್ರಪ್ರದೇಶದ ನೆಲ್ಲೂರಿನಲ್ಲಿ. ಉಡುಪಿ, ಬೆಂಗಳೂರು, ಮೈಸೂರು, ಆಣಂದದಲ್ಲಿ ವ್ಯಾಸಂಗ. ಹೈದರಾಬಾದಿನ ಸ್ವಯಂಸೇವಾ ಸಂಸ್ಥೆಯೊಂದರಲ್ಲಿ ಎರಡು ವರ್ಷ ಕೆಲಸ ಮಾಡಿ, ನಂತರ ಬೆಂಗಳೂರಿನ ಇಂಡಿಯನ್ ಇನ್ಸ್‌ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟಿನಿಂದ ಡಾಕ್ಟರೇಟ್ ಪಡೆದ ಮೇಲೆ ಆಣಂದದ ಇನ್ಸ್‌ಟಿಟ್ಯೂಟ್ ಆಫ್ ರೂರಲ್ ಮ್ಯಾನೇಜ್‌ಮೆಂಟಿನಲ್ಲಿ ಬೋಧಕರಾಗಿ, ಹೈದರಾಬಾದಿನ ಬೇಸಿಕ್ಸ್ ಸಂಸ್ಥೆಯಲ್ಲಿ ವೈಸ್ ಪ್ರೆಸಿಡೆಂಟ್ ಆಗಿ, ಅಹಮದಾಬಾದಿನ ಇಂಡಿಯನ್ ಇನ್ಸ್‌ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟಿನಲ್ಲಿ ಪ್ರೊಫೆಸರ್ ಕೆಲಸ ನಿರ್ವಹಿಸಿದ್ದಾರೆ. ಈಗ ಬೆಂಗಳೂರಿನ ಐಐಎಂನಲ್ಲಿ ಪ್ರಾಧ್ಯಾಪಕರಾಗಿ, ಸಾರ್ವಜನಿಕ ನೀತಿ ಕೇಂದ್ರದ ಅಧ್ಯಕ್ಷರಾಗಿ ಕೆಲಸ ಮಾಡುತ್ತಿದ್ದಾರೆ. ಶ್ರೀರಾಮ್ ಅವರ ಸಲ್ಮಾನ್ ಖಾನನ ಡಿಫಿಕಲ್ಟೀಸು (ಅಂಕಿತ ಪುಸ್ತಕ) ಕಥಾಸಂಗ್ರಹಕ್ಕೆ ೨೦೧೪ರ ಮತ್ತು ಅರ್ಥಾರ್ಥ (ಅಕ್ಷರ ಪ್ರಕಾಶನ) ಪ್ರಬಂಧಗಳ ಸಂಗ್ರಹಕ್ಕೆ ೨೦೧೫ರ ಕನ್ನಡ ಸಾಹಿತ್ಯ ಅಕಾಡೆಮಿಯ ಪುಸ್ತಕ ಬಹುಮಾನ ದೊರೆತಿದೆ. ಇದಲ್ಲದೇ ಅವರವರ ಸತ್ಯ (ಸಪ್ನ ಬುಕ್ ಹೌಸ್), ತೇಲ್ ಮಾಲಿಶ್ (ಅಂಕಿತ ಪುಸ್ತಕ), ನಡೆಯಲಾರದ ದೂರ, ಹಿಡಿಯಲಾಗದ ಬಸ್ಸು (ಆಕೃತಿ ಪ್ರಕಾಶನ), ನಾನು ನಾನೇ? ನಾನು ನಾನೇ! (ಮನೋಹರ ಗ್ರಂಥಮಾಲಾ) ಎಂಬ ಕತೆಗಳ ಸಂಕಲನಗಳು, ಬೇಟೆಯಲ್ಲ ಆಟವೆಲ್ಲ ಎಂಬ ಕತಾ-ಕಾದಂಬರಿ (ಅಕ್ಷರ ಪ್ರಕಾಶನ), ಕನಸು ಕಟ್ಟುವ ಕಾಲ (ವಸಂತ ಪ್ರಕಾಶನ), ಶನಿವಾರ ಸಂತೆ (ಅಂಕಿತ ಪುಸ್ತಕ), ಕಥನ ಕುತೂಹಲ (ಅಕ್ಷರ ಪ್ರಕಾಶನ) ಎಂಬ ಪ್ರಬಂಧ ಸಂಕಲನಗಳು, ವೈ ವಿ ರೆಡ್ಡಿಯವರ ಜೀವನದ ಬಗ್ಗೆ ಬಂದ ಪುಸ್ತಕಗಳನ್ನಾಧರಿಸಿ ಬರೆದ ಭಿನ್ನ-ಅಭಿಪ್ರಾಯ (ಅಕ್ಷರ ಪ್ರಕಾಶನ) ಎನ್ನುವ ನಿರೂಪಣೆಯನ್ನೂ ಸೇರಿಸಿ, ಶ್ರೀರಾಮ್ ಒಟ್ಟು ಹನ್ನೆರಡು ಕನ್ನಡ ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಮಾಯಾದರ್ಪಣ ಅವರು ಬರೆದ ಕತೆಗಳ ಮೊದಲ ಸಂಕಲನ. ಇದಕ್ಕೆ ಮಾಸ್ತಿ ಕನ್ನಡ ಸೇವಾನಿಧಿ ಪ್ರಶಸ್ತಿ ದೊರೆತಿದೆ.

More By The Author