Description
ಮೇಲುನೋಟಕ್ಕೆ ಕಾಣಿಸುವ ಹಾಗೆ ಈ ನಾಟಕವು ಎಷ್ಟರಮಟ್ಟಿಗೆ ಆ ಕಾಲದ ಫ್ರಾನ್ಸಿನ ಕಥೆಯೋ ಅಷ್ಟೇ ಸಾರ್ವಕಾಲಿಕವೂ ಹೌದು. ಚಾರ್ಲಿ ಚಾಪ್ಲಿನ್ನನ ಚಲನಚಿತ್ರಗಳ ಹಾಗೆಯೇ ಮೋಲಿಯೇರನ ನಾಟಕಗಳೂ ಕೂಡಾ ಯಾವುದೇ ದೇಶ ಯಾವುದೇ ಕಾಲದಲ್ಲೂ ಒಂದಲ್ಲ ಒಂದು ಸ್ವಾರಸ್ಯವನ್ನು ಹುಟ್ಟಿಸಬಲ್ಲಂಥ ತಾಕತ್ತನ್ನು ಗಳಿಸಿಕೊಂಡಿವೆ.
ಈ ನಾಟಕ ಪ್ರಾಯಶಃ ಇವತ್ತಿನ ಭಾರತದ ಸಂದರ್ಭಕ್ಕೆ ತದ್ವತ್ತಾಗಿ ಅನ್ವಯವಾಗಬಹುದಾದ ಒಂದು ರೂಪಕ. ಇಡೀ ಭಾರತವೇ ‘ಜಂಟಲ್‌ಮನ್’ ಆಗಲಿಕ್ಕೆ ಹೊರಟಿರುವ; ಮೂರ್ಖರಾಗುತ್ತಲೇ ಕಲಿಕೆಯ ಭ್ರಮೆಯನ್ನೂ ಬೆಳೆಸಿ ಕೊಳ್ಳುತ್ತಿರುವ; ಶ್ರೀಮಂತಿಕೆಯ ಸೋಗಿನಲ್ಲಿ ಇದ್ದದ್ದನ್ನೆಲ ಕಳೆದುಕೊಂಡು ಪಾಪರಾಗುತ್ತಿರುವ ಇವತ್ತಿನ ಸಾಮಾಜಿಕ-ಸಾಂಸ್ಕೃತಿಕ ಸಂದರ್ಭಕ್ಕೆ ‘ಮಾಮಾಮೋಶಿ’ ಒಂದು ಕನ್ನಡಿಯೆಂಬಂತಿದೆ.
ನೀನಾಸಮ್ ತಿರುಗಾಟವು ೧೯೯೫-೯೭ರ ಸಾಲಿನಲ್ಲಿ ಇಕ್ಬಾಲ್ ಅಹಮದ್ ಅವರ ನಿರ್ದೇಶನದಲ್ಲಿ ಈ ನಾಟಕದ ಈ ಕನ್ನಡ ಅವತರಣಿಕೆಯನ್ನು ಪ್ರಯೋಗಿಸಿ ಕರ್ನಾಟಕದ ಎಲ್ಲ ಭಾಗಗಳಲ್ಲಿ ಪ್ರದರ್ಶಿಸಿದೆ; ಹಾಗೂ ಈ ಪ್ರಯೋಗವು ವೆಶೇಷವಾದ ಮೆಚ್ಚುಗೆಯನ್ನೂ ಗಳಿಸಿದೆ.
Reviews
There are no reviews yet.