Sold out!

ಮೂರು ನಾಟಕಗಳು: ಆದರ್ಶ, ರಕ್ಷಾಕವಚ ಮತ್ತು ಗ್ರಾಮಾಯಣ

SKU: 166
Category: , ,

140.00

Out Of Stock
Weight 228.00000000 g
Number of pages

200

Year of Publication

2014

Author

ಹ.ಶ್ರೀ. ಶ್ರೀಪತಿ

Sold out!

Description

ಈ ನಾಟಕಗಳ ಲೇಖಕರು ತಮ್ಮ ಬದುಕಿನಾದ್ಯಂತ ಶಾಲಾ ಅಧ್ಯಾಪಕರಾಗಿ ಮತ್ತು ಶಿಕ್ಷಕ ತರಬೇತುದಾರರಾಗಿ ಕೆಲಸ ಮಾಡಿದವರು; ತಮ್ಮ ವೃತ್ತಿಯ ಮೂಲಕವೇ ಶಿಕ್ಷಣಮಾಧ್ಯಮಕ್ಕೆ ನಾಟಕರಂಗದ ಮೂಲಕ ಏನೇನು ಸಹಾಯ ಪಡೆಯಬಹುದು ಎಂಬುದನ್ನು ಚಿಂತಿಸುತ್ತ ಮತ್ತು ಪ್ರಯೋಗಿಸುತ್ತ ಬಂದವರು. ಪ್ರಸ್ತುತ ನಿಮ್ಮೆದುರಿಗಿರುವ ಈ ಮೂರು ನಾಟಕಗಳು ಅಂಥ ಚಿಂತನೆ ಮತ್ತು ಪ್ರಯೋಗದ ದಾಖಲೆಗಳು. ಈ ಮೂರೂ ನಾಟಕಗಳೂ ಒಂದಲ್ಲ ಒಂದು ಆದರ್ಶವನ್ನು ಎದುರಿಗಿಟ್ಟುಕೊಂಡು ಅದಕ್ಕೆ ನಾಟಕದ ರೂಪ ಕೊಡಲಿಕ್ಕೆ ಹೊರಟಿವೆ — ಆದರ್ಶ ಕುಟುಂಬ, ಆದರ್ಶ ಹಳ್ಳಿ ಮತ್ತು ಆದರ್ಶ ರಾಷ್ಟ್ರ — ಹೀಗೆ ನಮ್ಮ ಸಮಾಜದ ಬೇರೆಬೇರೆ ಘಟಕಗಳನ್ನು ಇಂಥ ಆದರ್ಶದ ಕನ್ನಡಿಯಲ್ಲಿ ಕಾಣುವ ಪ್ರಯೋಗವನ್ನು ಈ ನಾಟಕಗಳು ಮಾಡಿವೆ. ಮತ್ತು, ಕಲಿಕೆಯೆಂಬುದು ಅಂಥ ಆದರ್ಶಗಳನ್ನು ಕನಸು ಕಾಣುವ ಮತ್ತು ಅದನ್ನು ನಾಟಕರೂಪದ ಮೂಲಕ ಕಡೆಯ ಪಕ್ಷ ಮಾನಸಿಕವಾಗಿಯಾದರೂ ಸಾಕ್ಷಾತ್ಕರಿಸಿಕೊಳ್ಳುವ ಮಾಧ್ಯಮವೆಂದು ನಂಬಿವೆ. ಶಿಕ್ಷಣ ಎಂದರೆ, ಅದು ಕೇವಲ ಕಸುಬುಗಳನ್ನು ಕಲಿಸುವ ಕೆಲಸವಲ್ಲ; ಅದು ಸಾಮಾಜಿಕ ಜಾಗೃತಿಯ ಉದ್ಯೋಗ ಎಂಬುದನ್ನು ನಂಬಿ, ಅದನ್ನು ಕಲೆಗಳ ಮೂಲಕವೇ ಸಾಧಿಸಬಯಸುವ ಇವತ್ತಿನ ಕಾಲದ ಪ್ರಯತ್ನಗಳಿಗೆ ಹಲವು ದಶಕಗಳ ಹಿಂದಿನ ಈ ನಾಟಕರೂಪಗಳು ಬೇರೆಬೇರೆ ರೀತಿಯ ಸ್ಫೂರ್ತಿ-ಪ್ರೇರಣೆಗಳನ್ನು ಕೊಡಬಲ್ಲವು.

– ಅಕ್ಷರ ಕೆ.ವಿ.

Reviews

There are no reviews yet.

Be the first to review “ಮೂರು ನಾಟಕಗಳು: ಆದರ್ಶ, ರಕ್ಷಾಕವಚ ಮತ್ತು ಗ್ರಾಮಾಯಣ”

Your email address will not be published. Required fields are marked *

No Author Found